ಜಗದೀಶ್ ಶೆಟ್ಟರ್ ಗೆ 'ಪುನರ್ವಸತಿ' ಕಲ್ಪಿಸಲು ಕಾಂಗ್ರೆಸ್ ಮುಂದು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಸವದಿಗಿಲ್ಲ ಸ್ಥಾನಮಾನ!

ವಿಧಾನಸಭೆ ಚುನಾವಣೆಯಲ್ಲಿ ಸೋತಾಗಿನಿಂದ ಶೆಟ್ಟರ್‌ಗೆ ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಬೇರೆ ಸ್ಥಾನವನ್ನು ನೀಡುವ ಮೂಲಕ ಅವರಿಗಾಗಿರುವ ನಷ್ಟವನ್ನು ಸರಿದೂಗಿಸಲು ಕಾಂಗ್ರೆಸ್‌ನಲ್ಲಿ  ಚರ್ಚೆ ಶುರುವಾಗಿವೆ.
ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ
ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ
Updated on

ಹುಬ್ಬಳ್ಳಿ: ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗಳಲ್ಲಿ ಲಿಂಗಾಯತ ಮತಗಳ ಮೇಲೆ  ಕಣ್ಣಿಟ್ಟಿರುವ ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಚಿಂತಿಸುತ್ತಿದೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್- ಉಪಮೇಯರ್ ಚುನಾವಣೆ ಜಗದೀಶ್ ಶೆಟ್ಟರ್ ಅವರ ರಾಜಕಿಯ ಕೆಲಸ ಮಾಡಿಲ್ಲ.

ವಿಧಾನಸಭೆ ಚುನಾವಣೆಯಲ್ಲಿ ಸೋತಾಗಿನಿಂದ ಶೆಟ್ಟರ್‌ಗೆ ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಬೇರೆ ಸ್ಥಾನವನ್ನು ನೀಡುವ ಮೂಲಕ ಅವರಿಗಾಗಿರುವ ನಷ್ಟವನ್ನು ಸರಿದೂಗಿಸಲು ಕಾಂಗ್ರೆಸ್‌ನಲ್ಲಿ  ಚರ್ಚೆ ಶುರುವಾಗಿವೆ.

ವಾಸ್ತವವಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ನೀಡುವ  ಬಗ್ಗೆ ಊಹಾಪೋಹಗಳು ಇದ್ದವು. ಆದರೆ ಚುನಾವಣೆಗೂ ಮುನ್ನವೇ  ಬಿಜೆಪಿ ತೊರೆದಿದ್ದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಪಕ್ಷ ಪರಿಗಣಿಸದಿದ್ದರೂ ಶೆಟ್ಟರ್‌ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿತ್ತು.

ತೆರವಾಗಿರುವ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಚುನಾವಣೆಗೆ ಶೆಟ್ಟರ್ ಹೆಸರು ಘೋಷಿಸಲಾಗಿದೆ, ಮೇಲ್ಮನೆ ಸದಸ್ಯರಾಗಿ ಐದು ವರ್ಷಗಳ ಅಧಿಕಾರಾವಧಿ ಇರಲಿದೆ. ಎಂಎಲ್ಸಿ ಆಗುವ ಮೂಲಕ, ಅವರು ರಾಜಕೀಯದಲ್ಲಿ ಸಕ್ರಿಯವಾಗಿರಬಹುದು, ಆದರೆ ಧಾರವಾಡ ಜಿಲ್ಲೆಯಲ್ಲಿ, ಮತದಾರರ ವಿಶ್ವಾಸ ಗಳಿಸುವುದು ಮತ್ತೆ ಸವಾಲಾಗಿದೆ.

ಪಕ್ಷದ ಮೂಲಗಳ ಪ್ರಕಾರ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ, ಲೋಕಸಭೆ ಚುನಾವಣೆಗೆ ರಣಕಹಳೆ ಸಿದ್ಧಪಡಿಸುವ ನಿಟ್ಟಿನಲ್ಲಿ ಶೆಟ್ಟರ್ ಅವರಿಗೆ ಹೆಚ್ಚಿನ ಜವಾಬ್ದಾರಿ ಸಿಗಬಹುದು. ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಎದುರಿಸಲು  ಕಾಂಗ್ರೆಸ್  ಪಕ್ಷಕ್ಕೆ ಸಮರ್ಥ ಅಭ್ಯರ್ಥಿ ಇಲ್ಲದಿರುವುದರಿಂದ ಶೆಟ್ಟರ್ ಅವರನ್ನೆ ಕಣಕ್ಕಿಲಿಸಲು ಕಾಂಗ್ರೆಸ್ ಮುಂದಾಗಬಹುದು ಎನ್ನಲಾಗಿದೆ.

ಪಕ್ಷದಲ್ಲಿ ಶೆಟ್ಟರ್‌ಗೆ ಹೆಚ್ಚಿನ ಗೌರವ ಸಿಗುತ್ತಿದೆ, ಆದರೆ ಯಾವುದೇ ಸ್ಥಾನ ದೊರೆತಿಲ್ಲ. ಹುಬ್ಬಳ್ಳಿ-ಧಾರವಾಡ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಕೆಲವು ಬಿಜೆಪಿ ಸದಸ್ಯರು ಅಡ್ಡ ಮತದಾನ ಮಾಡುತ್ತಾರೆ ಎಂಬ ಭರವಸೆ ಸಾಕಷ್ಟು ಇತ್ತು, ಆದರೆ ಬಿಜೆಪಿ ತನ್ನ ಸದಸ್ಯರನ್ನು ಒಟ್ಟಿಗೆ ಇಟ್ಟುಕೊಂಡಿದ್ದರಿಂದ ಅದು ಸಾಧ್ಯವಾಗಲಿಲ್ಲ.  ಕಾಂಗ್ರೆಸ್ ಉನ್ನತ ನಾಯಕರಿಗೆ ತೊಂದರೆಯಾಗದಿರಬಹುದು,ಆದರೆ ಸ್ಥಳೀಯ ನಾಯಕರು ಇದರಿಂದ ತೀವ್ರ ನಿರಾಶೆಗೊಂಡಿದ್ದಾರೆ.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪ್ರವೇಶಿಸುವುದರಿಂದ ಪಕ್ಷಕ್ಕೆ ಅಷ್ಟೇನೂ ಲಾಭವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಮುಂದಿನ ವಿಧಾನಸಭಾ ಚುನಾವಣೆಯ ವರೆಗೆ ಅವರಿಗೆ ಪರಿಷತ್ ಸದಸ್ಯತ್ವವನ್ನು ನೀಡಲಾಗಿದೆ. ಮೇಲಾಗಿ ಶೆಟ್ಟರ್ ಅವರು ಸ್ಥಳೀಯ ಮುಖಂಡರೊಂದಿಗೆ ಬೆರೆಯುತ್ತಿಲ್ಲ, ಪಕ್ಷದ ಕಚೇರಿಗೂ ಭೇಟಿ ನೀಡುತ್ತಿಲ್ಲ, ಕೇವಲ ತಮ್ಮ ಆಪ್ತರಿಗಷ್ಟೇ ಸೀಮಿತವಾಗಿದ್ದಾರೆ. ಹಿರಿಯ ನಾಯಕರ ಇಂತಹ ಧೋರಣೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಶೆಟ್ಟರ್ ಅವರು ತಮ್ಮ ರಾಜಕೀಯ ಯಶಸ್ಸಿಗೆ ಪಕ್ಷ ಮತ್ತು ಅದರ ಸಂಘಟನೆಗೆ ಋಣಿಯಾಗಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿಯಲ್ಲಿರುವ ಶೆಟ್ಟರ್ ವಿರೋಧಿಗಳು ಹೇಳಿದ್ದಾರೆ. ಪಕ್ಷವು ಅವರಿಗೆ ರಾಜ್ಯಸಭಾ ಸದಸ್ಯತ್ವವನ್ನು ನೀಡಿದಾಗ ಅವರು ಅದನ್ನು ತಿರಸ್ಕರಿಸಿದರು. ಆದರೆ ಸೋಲಿನ ನಂತರ, ಅವರು ಈಗ ಕೌನ್ಸಿಲ್ ಸದಸ್ಯತ್ವವನ್ನು ಬಲವಂತವಾಗಿ ಸ್ವೀಕರಿಸಿದ್ದಾರೆ, ಕಾಂಗ್ರೆಸ್ ಯಾವುದೇ ತಂತ್ರವನ್ನು ಅನುಸರಿಸಲಿ, ಆದರೆ ಜನರು ತಮ್ಮ ಆತ್ಮಸಾಕ್ಷಿಯೊಂದಿಗೆ ನಿರ್ಧರಿಸುವ ಬುದ್ಧಿವಂತರು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಾಗುವಾಗ ಯಾವುದೇ ಷರತ್ತಿಲ್ಲದೇ ಮತ್ತೆ ಯಾವುದೇ ಸ್ಥಾನಮಾಮಕ್ಕೆ ಆಸೆಪಡದೆ ಸೇರಿದ್ದಾಗಿ ಹೇಳಿದ್ದರು, ಆದರೆ ಅವರ ರಾಜಕೀಯ ದುರ್ಬಲತೆ ಸಕ್ರಿಯ ರಾಜಕಾರಣದಲ್ಲಿರುವಂತೆ ಮಾಡುತ್ತಿದೆ. ಹಿಗಾಗಿ ಅವರು ಮೇಲ್ಮನೆ ಸ್ಥಾನಕ್ಕಾಗಿ ಲಾಬಿ ನಡೆಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸುವ ಪಕ್ಷವು ಅವರಿಗೆ ಬಹುಮಾನ ನೀಡಿದೆ. "ಈಗ, ಪಕ್ಷಕ್ಕೆ ಪ್ರತಿಯಾಗಿ ನೀಡುವುದು ಅವರಿಗೆ ಬಿಟ್ಟದ್ದು ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com