ಕಾಂಗ್ರೆಸ್ ಗೆ ಕಗ್ಗಂಟಾದ ಇಡಿ ಮಾಜಿ ಅಧಿಕಾರಿ ಸುಧಾಮ್ ದಾಸ್ MLC ನಾಮ ನಿರ್ದೇಶನ!

ಆಡಳಿತಾರೂಢ ಕಾಂಗ್ರೆಸ್‌ ಮೂವರು ಪ್ರಮುಖರ ಹೆಸರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮಾಂಕಿತಗೊಳಿಸಲು ಅಂತಿಮಗೊಳಿಸಿದೆ. 
ಕಾಂಗ್ರೆಸ್ ಪಕ್ಷದ ಕಚೇರಿ(ಸಂಗ್ರಹ ಚಿತ್ರ)
ಕಾಂಗ್ರೆಸ್ ಪಕ್ಷದ ಕಚೇರಿ(ಸಂಗ್ರಹ ಚಿತ್ರ)

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ ಮೂವರು ಪ್ರಮುಖರ ಹೆಸರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮಾಂಕಿತಗೊಳಿಸಲು ಅಂತಿಮಗೊಳಿಸಿದೆ. 

ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಎಚ್‌ಪಿ ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಅನುಮೋದನೆ ಪಡೆಯುವಲ್ಲಿ ವಿಳಂಬವಾಗಿರುವುದರಿಂದ ಈ ಬಗ್ಗೆ ಕಾಂಗ್ರೆಸ್ ಇನ್ನೂ ಘೋಷಣೆ ಮಾಡಲಾಗಿಲ್ಲ. ಮೇ 10ರ ವಿಧಾನಸಭೆ ಚುನಾವಣೆಗೆ ಮುನ್ನ ಸುಧಾಮ್ ದಾಸ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಪಕ್ಷದೊಳಗಿನ ನಾಯಕರು ಎಂಎಲ್ಸಿ ಸ್ಥಾನಕ್ಕೆ ಅವರ ನಾಮನಿರ್ದೇಶನವನ್ನು ವಿರೋಧಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಸೇರಿದಂತೆ ಕೇಂದ್ರ ನಾಯಕರ ಬಳಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿ, ಮಾಜಿ ಸಚಿವ ಎಚ್‌ ಆಂಜನೇಯ ಸೇರಿದಂತೆ ಪರಿಶಿಷ್ಟ ವರ್ಗ(SC) ಸಮುದಾಯದ ಕೆಲವು ಮುಖಂಡರು ಅವರ ನಾಮಪತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಈ ಎಂಎಲ್‌ಸಿ ಹುದ್ದೆ ವಿವಾದವಾಗಿ ಪರಿಣಮಿಸಿದೆ.

ಯಾರು ಈ ಸುಧಾಮ್ ದಾಸ್?: ದಾಸ್ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಅವರ ತಂದೆ ಎಚ್.ಪುಟ್ಟದಾಸ ಅವರು ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು (1967 ಮತ್ತು 1972) ಕ್ಷೇತ್ರ ಮರುವಿಂಗಡನೆ ನಂತರ ಕನಕಪುರದೊಂದಿಗೆ ಕ್ಷೇತ್ರ ವಿಲೀನಗೊಂಡಿತು. ಡಿ ಕೆ ಶಿವಕುಮಾರ್ ಅವರು ದಾಸ್ ಅವರನ್ನು ಎಂಎಲ್‌ಸಿ ಮಾಡುವ ಭರವಸೆಯೊಂದಿಗೆ ಪಕ್ಷಕ್ಕೆ ಕರೆತಂದರು. ಪಕ್ಷಕ್ಕೆ ಕರೆತರುವ ವೇಳೆ ಹೈಕಮಾಂಡ್ ಮನವನ್ನು ಕೂಡ ಒಲಿಸಿದ್ದಾರೆ ಎಂದು ಮೂಲಗಳು ಹೇಳುತ್ತವೆ. 

ಕಾಂಗ್ರೆಸ್‌ಗೆ ಸೇರಲು ಭಾರತೀಯ ಕಂದಾಯ ಸೇವಾ ಇಲಾಖೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡ ದಾಸ್ ಅವರು ಕರ್ನಾಟಕ ಮತ್ತು ಕೇರಳದ ಇಡಿ ಇಲಾಖೆ ಉಪ ನಿರ್ದೇಶಕರಾಗಿದ್ದರು. 

”ನನ್ನ ತಂದೆ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದರು. ಮೇ 10 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿದ್ದ ಎಸ್‌ಸಿ (ಎಡ) ಸಮುದಾಯದ ಮತಗಳು ಕಾಂಗ್ರೆಸ್ ಗೆ ಬರುವಂತೆ ಮಾಡಲು ನಾನು ಸಹ ಪಕ್ಷಕ್ಕೆ ಸಹಾಯ ಮಾಡಿದ್ದೇನೆ ಎಂದು ದಾಸ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿದರು. 

ಒಂದು ವೇಳೆ ದಾಸ್ ಅವರಿಗೆ ಎಂಎಲ್ಸಿ ಸ್ಥಾನ ಸಿಗದಿದ್ದರೆ ಎಸ್‌ಸಿ (ಎಡ) ಸಮುದಾಯದ ಬೇರೆ ಮುಖಂಡರಿಗೆ ನೀಡಬೇಕೆಂದು ನಾಯಕರು ಒತ್ತಾಯಿಸುತ್ತಿದ್ದಾರೆ. 

ರಾಯಚೂರಿನ ಖ್ಯಾತ ಕಾರ್ಯಕರ್ತ ಅಂಬಣ್ಣ ಅರೋಲಿಕರ್ ಅವರು ಕೆಲವು ವರ್ಷಗಳಿಂದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಹಾನುಭೂತಿ ಹೊಂದಿದ್ದು, ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, ಗೃಹ ಸಚಿವ ಜಿ ಪರಮೇಶ್ವರ ಅವರ ಬೆಂಬಲ ಹೊಂದಿರುವ ಕೈಗಾರಿಕೋದ್ಯಮಿ ಡಿಟಿ ವೆಂಕಟೇಶ್ ಅವರು ರೇಸ್‌ನಲ್ಲಿದ್ದಾರೆ.

ಇದೇ ವೇಳೆ ಒಕ್ಕಲಿಗ ಮುಖಂಡರಾದ ಬಿ.ಎಲ್.ಶಂಕರ್, ರಾಜೀವ್ ಗೌಡ, ಕೆಪಿಸಿಸಿ ವಕ್ತಾರ ನಟರಾಜ್ ಗೌಡ, ಎನ್ ಆರ್ ಐ ಸೆಲ್ ನ ಮಾಜಿ ಮುಖ್ಯಸ್ಥೆ ಆರತಿ ಕೃಷ್ಣ ಕೂಡ ಎಂಎಲ್ ಸಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಬೆಂಬಲ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಕೆಲವು ಹಿಂದುಳಿದ ವರ್ಗಗಳ ನಾಯಕರೂ ಕಣದಲ್ಲಿದ್ದಾರೆ.

ಹಿಂದುಳಿದ ವರ್ಗದ ನಾಯಕ ಪಿ.ಆರ್.ರಮೇಶ್ ಮತ್ತು ಲಿಂಗಾಯತ ನಾಯಕ ಕೊಂಡಜ್ಜಿ ಮೋಹನ್ ಅವರ ಅವಧಿ ಮೇ 17 ರಂದು ಮತ್ತು ಒಕ್ಕಲಿಗ ನಾಯಕ ಸಿ.ಎಂ.ಲಿಂಗಪ್ಪ ಅವರ ಅವಧಿ ಜೂನ್ 8 ರಂದು ಕೊನೆಗೊಂಡಿದ್ದರಿಂದ ಮೂರು ಎಂಎಲ್‌ಸಿ ಸ್ಥಾನಗಳು ತೆರವಾಗಿವೆ. ಎರಡು ಎಂಎಲ್ಸಿ ಸ್ಥಾನಗಳಿಗೆ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಮತ್ತು ಮಾಜಿ ಕೇಂದ್ರ ಸಚಿವ ಕೆ.ರಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅವರ ನಾಮ ನಿರ್ದೇಶನಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com