ಬೆಂಗಳೂರು: ಲೋಕಾಯುಕ್ತ ದಾಳಿಯಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಬರೋಬ್ಬರಿ 8.12 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಈ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಅಮಿತ್ ಶಾ ಅವರೇ, ಕರ್ನಾಟಕಕ್ಕೆ ಬಂದಿದ್ದೀರಿ, ನಿಮಗೆ ದಮ್ಮು, ತಾಕತ್ತು ಇರುವುದೇ ಆದರೆ ಪತ್ರಿಕಾಗೋಷ್ಠಿ ನಡೆಸಿ ಭ್ರಷ್ಟಾಚಾರದ ಪ್ರಶ್ನೆಗಳಿಗೆ ಉತ್ತರಿಸುವಿರಾ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಎಲ್ಲಾ ಭ್ರಷ್ಟಾಚಾರದ ಪ್ರಕರಣಗಳ ತನಿಖೆಗೆ ಐಟಿ, ಇಡಿ, ಸಿಬಿಐಗಳನ್ನು ಕಳಿಸುವಿರಾ?
ತಾವು ಬಂದಿದ್ದು ಎಲಕ್ಷನ್ನಿಗಾ, ಇಲ್ಲ ಕಲೆಕ್ಷನ್ನಿಗಾ? ಹೇಳುವಿರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಅಧಿಕಾರ ಹಿಡಿದಿದ್ದು ಮಂಚದ ಮೇಲೆ, ಆಡಳಿತ ನಡೆಸುತ್ತಿರುವುದು ಲಂಚದ ಮೇಲೆ!
KSDL ಅವ್ಯವಹಾರದ ಬಗ್ಗೆ ಈ ಹಿಂದೆಯೇ 5 ದೂರುಗಳು ಬಂದಿದ್ದರೂ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ ಏಕೆ? ಯಾವುದೇ ಹಗರಣಗಳ ತನಿಖೆ ಇಲ್ಲವೇಕೆ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರದ ಕೃಪಾಪೋಷಕರೋ? ಅಥವಾ ಕಮಿಷನ್ನಿಗೆ ಪಾಲುದಾರರೋ? ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
Advertisement