ನರೇಂದ್ರ ಮೋದಿ ಅವರಿಲ್ಲದಿದ್ದರೆ ನಾನು ಎಂಪಿನೂ ಆಗ್ತಿರಲಿಲ್ಲ, ಗಡ್ಕರಿ ಸರ್ ಮಂತ್ರಿನೂ ಆಗ್ತಿರಲಿಲ್ಲ, ಎಂಡ್: ಪ್ರತಾಪ್ ಸಿಂಹ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ಒಬ್ಬರಿಗೆ ಸಲ್ಲಬೇಕು, ಅದು ಪ್ರಧಾನಿ ನರೇಂದ್ರ ಮೋದಿಯವರಿಗೆ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.
ಪ್ರತಾಪ್ ಸಿಂಹ ಟ್ವೀಟ್
ಪ್ರತಾಪ್ ಸಿಂಹ ಟ್ವೀಟ್

ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ಒಬ್ಬರಿಗೆ ಸಲ್ಲಬೇಕು, ಅದು ಪ್ರಧಾನಿ ನರೇಂದ್ರ ಮೋದಿಯವರಿಗೆ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ದಶಪಥ ಹೆದ್ದಾರಿಯ ಕ್ರೆಡಿಟ್‌ ಪಾಲಿಟಿಕ್ಸ್‌ ವಿಚಾರ ಜೋರಾಗುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿರುವ ಅವರು, ಒಬ್ಬರೇ ಒಬ್ಬರಿಗೆ ಇದರ ಶ್ರೇಯಸ್ಸು ಸಲ್ಲಬೇಕು, ಅದು ಮೋದೀಜಿಗೆ. ಅವರಿಲ್ಲದಿದ್ದರೆ ನಾನು ಎಂಪಿನೂ ಆಗುತ್ತಿರಲಿಲ್ಲ. ಗಡ್ಕರಿ ಸರ್ ಮಂತ್ರಿನೂ ಆಗ್ತಿರಲಿಲ್ಲ ಎಂಡ್ ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೆ ಜನ ನೀಡಿದ ಮೂರು ಉತ್ತರಗಳು ಇರುವ ಫೋಟೋವನ್ನು ಅಪ್ಲೋಡ್‌ ಮಾಡಿದ್ದಾರೆ. ಇದರಲ್ಲಿ ಸಿಂಹಕ್ಕೆ ಸಲ್ಲಬೇಕು ಹೊರತು ನರಿಗಲ್ಲ. ಎಪ್ಪತ್ತು ವರ್ಷದ ಹಿಂದೆ ಕಲ್ಲು ನೆಟ್ಟ ಯಾವುದೇ ಯೋಜನೆಗಳು ನೆಟ್ಟ ಕಲ್ಲಿನ ಜೊತೆಯೇ ಮಲಗಿತ್ತು. ಮುಕ್ತಿಯನ್ನು ಕಾಣಿಸಿದ ವ್ಯಕ್ತಿಗೆ, ಸರ್ಕಾರಕ್ಕೆ ಕ್ರೆಡಿಟ್ ಸಲ್ಲಬೇಕು. 

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೆ ಜನರು ನರೇಂದ್ರ ಮೋದಿ, ಗಡ್ಕರಿ ಮತ್ತು ಪ್ರತಾಪ್ ಸಿಂಹ ಎಂದು ಉತ್ತರ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com