ಮುಂದುವರಿದ ಸುರಕ್ಷಿತ ಕ್ಷೇತ್ರ ಗೊಂದಲ: ಎಲ್ಲ ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂದು ಹೇಳಿ ಸುಮ್ಮನಾದ ಸಿದ್ದರಾಮಯ್ಯ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರಕ್ಕೆ ಒಲವು ತೋರಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಗೊಂದಲ ಮುಂದುವರಿದಿದ್ದು, ಅದನ್ನು ಹೈಕಮಾಂಡ್‌ಗೆ ಬಿಟ್ಟಿರುವುದಾಗಿ ಹೇಳುತ್ತಿದ್ದಾರೆ.
Published: 22nd March 2023 09:52 AM | Last Updated: 23rd March 2023 01:27 PM | A+A A-

ಸಿದ್ದರಾಮಯ್ಯ
ಕೋಲಾರ/ ಮೈಸೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರಕ್ಕೆ ಒಲವು ತೋರಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಗೊಂದಲ ಮುಂದುವರಿದಿದ್ದು, ಅದನ್ನು ಹೈಕಮಾಂಡ್‌ಗೆ ಬಿಟ್ಟಿರುವುದಾಗಿ ಹೇಳುತ್ತಿದ್ದಾರೆ.
ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರ ಭದ್ರಕೋಟೆಯಾದ ವರುಣಾಕ್ಕೆ ಮರಳಲು ಸಲಹೆ ನೀಡಿದ್ದಾರೆ. ಕೋಲಾರದಲ್ಲಿ ಬಂದಿರುವ ವರದಿ ಸಿದ್ದರಾಮಯ್ಯನವರ ಪರವಾಗಿಲ್ಲ ಎನ್ನಲಾಗುತ್ತಿದೆ. ಸಿದ್ದರಾಮಯ್ಯನವರು ಕೋಲಾರ ಜಿಲ್ಲೆಯ ಭೇಟಿಯನ್ನು ಮುಂದೂಡಿದ್ದಾರೆ. ಇದರಿಂದ ನಿನ್ನೆ ಬೆಳಗ್ಗೆ ಅವರ ನಿವಾಸದ ಮುಂದೆ ಕೋಲಾರದ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗೆ ಕಾರಣವಾಯಿತು. ಕೆಲವು ವಾರಗಳ ಹಿಂದೆ ಅವರೇ ಘೋಷಿಸಿದ ಕ್ಷೇತ್ರವಾದ ಕೋಲಾರದಲ್ಲಿ ಅವ್ಯವಸ್ಥೆ ಉಂಟಾಗಿದೆ.
ಊಹಾಪೋಹಗಳು ಹೆಚ್ಚಾಗುತ್ತಿದ್ದಂತೆ, ಸಿದ್ದರಾಮಯ್ಯ ಅವರು ತಮ್ಮ ವಿರೋಧಿಗಳು ಹೇಳಿಕೊಂಡಂತೆ ಯಾವುದೇ "ಸುರಕ್ಷಿತ ಕ್ಷೇತ್ರ"ಗಳನ್ನು ಹುಡುಕುತ್ತಿಲ್ಲ ಎಂದು ಹೇಳಿದ್ದಾರೆ. ಸಂಸದ ಧ್ರುವನಾರಾಯಣ ಅವರ ಸಂತಾಪ ಸೂಚಕ ಸಭೆಗಾಗಿ ಚಾಮರಾಜನಗರದ ಹೆಗ್ಗವಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯ್ಕೆಯನ್ನು ಕೇಂದ್ರ ನಾಯಕತ್ವಕ್ಕೆ ಬಿಟ್ಟಿದ್ದೇನೆ.
ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆಗೆ 'ಕೋಲಾರ ಗೊಂದಲ': ಕಾಂಗ್ರೆಸ್ ಗೆ ಪರಿಹಾರಕ್ಕಿಂತ ಸಮಸ್ಯೆಯೇ ಹೆಚ್ಚು
“ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ ಬಹಿರಂಗಗೊಳ್ಳಲಿದೆ, ನನ್ನ ಹೆಸರಿದೆಯೋ ಇಲ್ಲವೋ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ನಾನು ಯಾವುದೇ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿಲ್ಲ, ವಿವಿಧ ಕ್ಷೇತ್ರಗಳ ಜನರು ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.
ವರುಣಾಗೆ ತಮ್ಮ ಪುತ್ರ ಯತೀಂದ್ರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ, ಆದರೆ ಹೈಕಮಾಂಡ್ ನಿರ್ಧಾರದ ಬಗ್ಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ಪ್ರತಿಭಟನಾಕಾರರನ್ನು ನಿನ್ನೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನಾನು ಕುಟುಂಬ ಸದಸ್ಯರೊಂದಿಗೆ ಚರ್ಚಿಸುತ್ತೇನೆ. ನಾಳೆ ಅವರಿಗೆ ತಿಳಿಸುತ್ತೇನೆ, ದಯವಿಟ್ಟು ಪ್ರತಿಭಟನೆ ಮಾಡಬೇಡಿ ಎಂದು ವಿನಂತಿ ಮಾಡಿಕೊಂಡರು.
ಪರಿಶಿಷ್ಟ ಜಾತಿ, ಒಕ್ಕಲಿಗ, ಕುರುಬ ಮುಖಂಡರ ಸಭೆ ನಡೆಸಿದ ಕಾಂಗ್ರೆಸ್‌ನ ಕೆಲ ಮುಖಂಡರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಕೋಲಾರ ಸಮೀಕ್ಷೆ ವಿರುದ್ಧ ಬೆಂಬಲಿಗರ ಆಕ್ರೋಶ; ವರುಣಾದಿಂದ ಸ್ಪರ್ಧಿಸಲು ಇಲ್ಲ ಅನುಮತಿ; ಕ್ಷೇತ್ರ ಯಾವುದಯ್ಯಾ ಸಿದ್ದರಾಮಯ್ಯಗೆ?
ನಿನ್ನೆ ಬೆಳಿಗ್ಗೆ ನೂರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಸ್, ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಅವರ ನಿವಾಸಕ್ಕೆ ತಲುಪಿದರು. ಕೋಲಾರದಿಂದ ಸ್ಪರ್ಧಿಸುವಂತೆ ಘೋಷಣೆಗಳನ್ನು ಕೂಗಿ ಮನವಿ ಸಲ್ಲಿಸಿದ ಅವರು, ಅವರ ಗೆಲುವಿಗೆ ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು. ಕೆಲವು ಕಾರ್ಮಿಕರು ತಮ್ಮ ನಾಯಕ ಒಪ್ಪದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದರು.
ಬರಲೇ ಬೇಕು, ಬರಲೇ ಬೇಕು, ಕೋಲಾರಕ್ಕ ಬರಲೇ ಬೇಕು ಎಂದು ಘೋಷಣೆಗಳನ್ನೂ ಕೂಗಿದರು. ಹೈಕಮಾಂಡ್‌ಗೆ ಸಲ್ಲಿಸಿರುವ ವರದಿ ತಪ್ಪಾಗಿದ್ದು, ಮರು ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ವಿ.ಆರ್ .ಸುದರ್ಶನ್ , ನಜೀರ್ ಅಹಮದ್ , ಅನಿಲ್ ಕುಮಾರ್ , ಜಿಲ್ಲಾ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಹಾಗೂ ಯುವ ಕಾಂಗ್ರೆಸ್ ಮುಖಂಡರು ಕೂಡ ಸಿದ್ದರಾಮಯ್ಯ ಅವರಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ.