ಸಿದ್ದರಾಮಯ್ಯ, ನಾನು ಸ್ವಾರ್ಥಕ್ಕಾಗಿ ಕ್ಷೇತ್ರ ಬಿಡಲಿಲ್ಲ, ‘ಪಾಪ್ಯುಲರ್ ಅಭ್ಯರ್ಥಿ ಬೇರೆ ಬೇರೆ ಕಡೆ ನಿಲ್ಲಬೇಕಾಗುತ್ತೆ': ಶ್ರೀರಾಮುಲು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕ್ಷೇತ್ರ ಆಯ್ಕೆಯ ಗೊಂದಲ ಮುಂದುವರಿದಿರುವಂತೆ ಬಳ್ಳಾರಿಯಲ್ಲಿ ಮಾತನಾಡಿರುವ ಸಾರಿಗೆ ಸಚಿವ ಶ್ರೀರಾಮುಲು ಅವರ ಬಗ್ಗೆ ಮೃದು ಧೋರಣೆ ತಳೆದು ಮಾತನಾಡಿದ್ದಾರೆ.
Published: 22nd March 2023 12:42 PM | Last Updated: 23rd March 2023 01:31 PM | A+A A-

ಸಿದ್ದರಾಮಯ್ಯ, ಶ್ರೀರಾಮುಲು
ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕ್ಷೇತ್ರ ಆಯ್ಕೆಯ ಗೊಂದಲ ಮುಂದುವರಿದಿರುವಂತೆ ಬಳ್ಳಾರಿಯಲ್ಲಿ ಮಾತನಾಡಿರುವ ಸಾರಿಗೆ ಸಚಿವ ಶ್ರೀರಾಮುಲು ಅವರ ಬಗ್ಗೆ ಮೃದು ಧೋರಣೆ ತಳೆದು ಮಾತನಾಡಿದ್ದಾರೆ.
ನಾನು ಮತ್ತು ಸಿದ್ದರಾಮಯ್ಯ ಅನಿವಾರ್ಯವಾಗಿ ಕ್ಷೇತ್ರ ಬಿಡಬೇಕಾಗಿ ಬಂತು. ಪಾಪ್ಯುಲರ್ ಲೀಡರ್ ಆದವರಿಗೆ ಇದು ಸಾಮಾನ್ಯವಾಗಿದೆ. ಸಿದ್ದರಾಮಯ್ಯ ಮತ್ತು ನಾನು ಇಬ್ಬರೂ ಅನಿವಾರ್ಯ ಕಾರಣಕ್ಕೆ ಕ್ಷೇತ್ರ ಬಿಟ್ಟೆವು, ಸರ್ಕಾರ ರಚನೆಯಾಗಬೇಕು ಎಂಬ ಕಾರಣಕ್ಕೆ ಕ್ಷೇತ್ರ ಬಿಟ್ಟೆವು ಎಂದಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆಗೆ 'ಕೋಲಾರ ಗೊಂದಲ': ಕಾಂಗ್ರೆಸ್ ಗೆ ಪರಿಹಾರಕ್ಕಿಂತ ಸಮಸ್ಯೆಯೇ ಹೆಚ್ಚು
ಸಿದ್ದರಾಮಯ್ಯ, ನಾನು ಸ್ವಾರ್ಥಕ್ಕಾಗಿ ಕ್ಷೇತ್ರ ಬಿಡಲಿಲ್ಲ’, ‘ಪಾಪ್ಯುಲರ್ ಅಭ್ಯರ್ಥಿ ಬೇರೆ ಬೇರೆ ಕಡೆ ನಿಲ್ಲಬೇಕಾಗುತ್ತೆ’,‘ರಾಜಕೀಯದಲ್ಲಿ ಪಾಪ್ಯುಲರ್ ಅಭ್ಯರ್ಥಿಗೆ ಸಮಸ್ಯೆ ಸಹಜ - ಎಲ್ಲಾ ಕಡೆ ನಿಂತು ಗೆಲ್ಲೋರು ಪಾಪ್ಯುಲರ್ ಅಭ್ಯರ್ಥಿ ಎನಿಸಿಕೊಳ್ಳುತ್ತಾರೆ. ಕಳೆದ ಚುನಾವಣೆಯಲ್ಲಿ ಸಾಹಸ ಮಾಡಿ ಜಯಗಳಿಸಿದ್ದೆವು, ಚುನಾವಣೆಯಲ್ಲಿ ಗೆಲ್ಲಲು ಕೆಲವೊಮ್ಮೆ ಸಾಹಸ ಮಾಡಬೇಕು ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಬಳ್ಳಾರಿಯ ಐತಿಹಾಸಿಕ ಕೋಟೆ ಪ್ರಕಾಶಮಾನವಾಗಿ ಕಂಗೊಳಿಸಲು ಸಜ್ಜಾಗಿದೆ. ನೂರಾರು ವರ್ಷಗಳಿಂದ ರಾಜ ಮಹಾರಾಜರ ಯಶೋಗಾಥೆಯ ಕಥೆಗಳಿಗೆ ಭದ್ರ ಬುನಾದಿಯಾದ ಈ ಬಳ್ಳಾರಿಯ ಬೆಟ್ಟ ಮತ್ತು ಕೋಟೆ ಎಂದೆಂದಿಗೂ ಅಜರಾಮರವಾಗಿ ನಿಲ್ಲುತ್ತವೆ. ಅದರ ಇತಿಹಾಸವನ್ನು ಸಂಭ್ರಮಿಸುವುದಕ್ಕೆ ದೀಪಾಲಂಕಾರ ಮಾಡಲು ಇಂದು ಪೂಜೆ ಮಾಡಲಾಯಿತು#sriramulu #sriramulubellary pic.twitter.com/PZv0ucCdIN
— B Sriramulu (@sriramulubjp) March 22, 2023