ಸಿದ್ದರಾಮಯ್ಯರ ದೊಡ್ಡ ಅಭಿಮಾನಿ, ಬಡವರ ಬಗ್ಗೆ ಕಾಳಜಿ ಇರೋ ವ್ಯಕ್ತಿ ಪರ ಪ್ರಚಾರ ಖುಷಿ ತಂದಿದೆ: ದುನಿಯಾ ವಿಜಯ್
ನಾನು ಸಿದ್ದರಾಮಯ್ಯ ಅವರ ದೊಡ್ಡ ಅಭಿಮಾನಿಯಾಗಿದ್ದು, ಬಡವರ ಬಗ್ಗೆ ಕಾಳಜಿ ಇರುವ ವ್ಯಕ್ತಿ ಪರ ಪ್ರಚಾರ ಮಾಡುತ್ತಿರುವುದು ಖುಷಿ ತಂದಿದೆ ಎಂದು ನಟ ದುನಿಯಾ ವಿಜಯ್ ಅವರು ಶುಕ್ರವಾರ ಹೇಳಿದ್ದಾರೆ.
Published: 05th May 2023 01:25 PM | Last Updated: 05th May 2023 05:25 PM | A+A A-

ಸಿದ್ದರಾಮಯ್ಯ ಪರ ದುನಿಯಾ ವಿಜಯ್ ಪ್ರಚಾರ
ಮೈಸೂರು: ನಾನು ಸಿದ್ದರಾಮಯ್ಯ ಅವರ ದೊಡ್ಡ ಅಭಿಮಾನಿಯಾಗಿದ್ದು, ಬಡವರ ಬಗ್ಗೆ ಕಾಳಜಿ ಇರುವ ವ್ಯಕ್ತಿ ಪರ ಪ್ರಚಾರ ಮಾಡುತ್ತಿರುವುದು ಖುಷಿ ತಂದಿದೆ ಎಂದು ನಟ ದುನಿಯಾ ವಿಜಯ್ ಅವರು ಶುಕ್ರವಾರ ಹೇಳಿದ್ದಾರೆ.
ದುನಿಯಾ ವಿಜಯ್ ಅವರು ಇಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ಪರ ಅಬ್ಬರದ ಪ್ರಚಾರ ನಡೆಸಿದರು. ಅವರೊಂದಿಗೆ ನಿನ್ನೆ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿನಿಮಾ ತಾರೆಯರಾದ ಲೂಸ್ ಮಾದ(ಯೋಗೇಶ್) ಮತ್ತು ನಿಶ್ವಿಕಾ ನಾಯ್ಡು ಕೂಡ ಭಾಗವಹಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದುನಿಯಾ ವಿಜಯ್ ಅವರು, ನಾನು ಸಿದ್ದರಾಮಯ್ಯ ಅವರ ದೊಡ್ಡ ಅಭಿಮಾನಿ. ಅವರು ಇಂದಿರಾ ಕ್ಯಾಂಟಿನ್ ಸೇರಿದಂತೆ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ಇದನ್ನು ಓದಿ: ಅಪ್ಪು ಹೆಸರಿನಲ್ಲಿ ಸಹಾಯ ಮಾಡಿದವರು ಯಾರೂ ಹೇಳಿಕೊಂಡು ತಿರುಗಲ್ಲ: ಸೋಮಣ್ಣಗೆ ನಟ ಶಿವಣ್ಣ ತಿರುಗೇಟು
ಪ್ರಚಾರದ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ 2008ರಲ್ಲಿ ಗೆದ್ದು ವಿರೋಧ ಪಕ್ಷ ನಾಯಕನಾದೆ. 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದೆ. ಈಗ ಮತ್ತೊಂದು ಅವಕಾಶ ಇದೆ. ಪ್ರಚಾರದ ವೇಳೆ ಉತ್ತಮ ಸ್ಪಂದನೆ ಸಿಕ್ಕಿದೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ನಾನು ಗೆಲ್ಲುವುದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.