ಜೆಡಿಎಸ್ ಆಂತರಿಕ ಸಮೀಕ್ಷೆ ಬಹಿರಂಗ; 65-70 ಸ್ಥಾನ ಗೆಲ್ಲುವ ಸಾಧ್ಯತೆ

ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ಜನತಾ ದಳ(ಜಾತ್ಯತೀತ) ನಾಯಕರು ಹೇಳುತ್ತಿದ್ದರೂ, ಪಕ್ಷದ ಆಂತರಿಕ ಸಮೀಕ್ಷೆ ಮಾತ್ರ 65 ರಿಂದ 70...
ಜೆಡಿಎಸ್
ಜೆಡಿಎಸ್

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ಜನತಾ ದಳ(ಜಾತ್ಯತೀತ) ನಾಯಕರು ಹೇಳುತ್ತಿದ್ದರೂ, ಪಕ್ಷದ ಆಂತರಿಕ ಸಮೀಕ್ಷೆ ಮಾತ್ರ 65 ರಿಂದ 70 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಈ ಸಮೀಕ್ಷೆ ನಡೆಸಿದ್ದು, ಕ್ಷೇತ್ರಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. 
ಜೆಡಿಎಸ್ ಖಚಿತವಾಗಿ ಗೆಲ್ಲಬಹುದಾದ 67 ಕ್ಷೇತ್ರಗಳು ಮತ್ತು ಹೆಚ್ಚು ಶ್ರಮ ಹಾಕಿದರೆ ಮಾತ್ರ ಗೆಲ್ಲಬಹುದಾದ 40 ಕ್ಷೇತ್ರಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಈ ಸಂಖ್ಯೆ 100 ದಾಟಿದೆ ಎಂದು ಮೂಲಗಳು ತಿಳಿಸಿವೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಜೆಡಿಎಸ್‌ ಆಂತರಿಕ ಸಮೀಕ್ಷೆ ನಡೆಸಿದ್ದು, ಇದು 65-70ಕ್ಕೆ ಇಳಿದಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

“ನಾವು 2018 ರಲ್ಲಿ 37 ಸ್ಥಾನಗಳನ್ನು ಗೆದ್ದಿದ್ದೇವೆ ... ಆದರೆ ಕೆಲವು ಶಾಸಕರು ರಾಜೀನಾಮೆ ನೀಡಿದ್ದರಿಂದ ನಮ್ಮ ಪ್ರಸ್ತುತ ಸಂಖ್ಯೆ 29ಕ್ಕೆ ಇಳಿದಿದೆ. ಸಮೀಕ್ಷೆಯ ಪ್ರಕಾರ, ನಾವು 37 ಸ್ಥಾನಗಳನ್ನು ಮರಳಿ ಪಡೆಯುತ್ತೇವೆ. ಅಲ್ಲದೆ ಪಾವಗಡ, ತುರುವೇಕೆರೆ ಸೇರಿದಂತೆ ಎಂಟು ಸ್ಥಾನಗಳಲ್ಲಿ ಕಳೆದ ಚುನಾವಣೆಯಲ್ಲಿ 400 ರಿಂದ 2 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದೇವೆ. ಅದೇ ರೀತಿ ಇತರ 10 ಕ್ಷೇತ್ರಗಳಲ್ಲಿ 2,000-4,000 ಮತಗಳ ಅಂತರದ ಸೋತಿದ್ದೇವೆ. ಇತರ 15 ಸ್ಥಾನಗಳಲ್ಲಿ, ಗೆಲುವಿನ ಅಂತರ 10,000 ಮತಗಳಿಗಿಂತ ಕಡಿಮೆ ಇತ್ತು. ಈ ಬಾರಿ ಆ ಭಾಗಗಳ ಮೇಲೆ ಹೆಚ್ಚು ಗಮನಹರಿಸಿದ್ದೇವೆ ಮತ್ತು ಅಲ್ಲಿ ನಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದೇವೆ ಎಂದು ಜೆಡಿಎಸ್ ನಾಯಕ ವಿವರಿಸಿದ್ದಾರೆ.

ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್ ತೊರೆದಿರುವ 27 ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಿದೆ. ಅವರಲ್ಲಿ ಕನಿಷ್ಠ ಅರ್ಧದಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com