ಲಿಂಗಾಯತ ವೇದಿಕೆ ಒಂದು ಕಾಲ್ಪನಿಕ ಸಂಘಟನೆ: ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಗೆ ಬೆಂಬಲ ನೀಡಿರುವ ಲಿಂಗಾಯತ ವೇದಿಕೆ ಎನ್ನುವುದು ಒಂದು ಕಾಲ್ಪನಿಕ ಸಂಘಟನೆ. ನಾಲ್ಕು ಜನ ಸೇರಿ ಏನೋ ಹೇಳಿದರೇ ಅದು ಲಿಂಗಾಯತರ ಧ್ವನಿ ಆಗುತ್ತಾ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು...
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕಾಂಗ್ರೆಸ್ ಗೆ ಬೆಂಬಲ ನೀಡಿರುವ ಲಿಂಗಾಯತ ವೇದಿಕೆ ಎನ್ನುವುದು ಒಂದು ಕಾಲ್ಪನಿಕ ಸಂಘಟನೆ. ನಾಲ್ಕು ಜನ ಸೇರಿ ಏನೋ ಹೇಳಿದರೇ ಅದು ಲಿಂಗಾಯತರ ಧ್ವನಿ ಆಗುತ್ತಾ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಪ್ರಶ್ನಿಸಿದ್ದಾರೆ. 

ಬಿಜೆಪಿ ಪಕ್ಷಕ್ಕೆ ಲಿಂಗಾಯತರ ಅಗತ್ಯವಿಲ್ಲದಿದ್ದರೆ, ಲಿಂಗಾಯತರಿಗೂ ಬಿಜೆಪಿ ಬೇಕಿಲ್ಲ ಎಂದು ಹೇಳಿದ್ದ ಕರ್ನಾಟಕ ವೀರಶೈವ ಲಿಂಗಾಯತ ವೇದಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಇದು ಒಂದು ಕಾಲ್ಪನಿಕ ಸಂಘಟನೆ. ಲಿಂಗಾಯತ ಸಮುದಾಯ ಸಮುದ್ರವಿದ್ದಂತೆ. ಲಿಂಗಾಯತ ವೇದಿಕೆ ಚುನಾವಣೆ ವೇಳೆ ಹುಟ್ಟಿಕೊಂಡ ಸಂಘಟನೆ ಎಂದು ಹೇಳಿದ್ದಾರೆ.

ವೀರಶೈವ ಸಮಾಜ ದೊಡ್ಡದಿದ್ದು, ಯಾವುದೇ ಸಂಸ್ಥೆಯ ಅಡಿಯಲ್ಲಿ ಇಲ್ಲ. ವೀರಶೈವ ಮಹಾಸಭಾ ಅಧ್ಯಕ್ಷರಿಗೆ ನಾವು ಗೌರವ ಕೊಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷಕ್ಕೆ ಸಂಸ್ಥೆ ಹೆಸರು ಬಳಸುವುದು ಸರಿಯಲ್ಲ. ಲಿಂಗಾಯತ ವೇದಿಕೆ ಅನ್ನೋದು ಎಲ್ಲಿಯೂ ಇಲ್ಲ. ಅದೊಂದು ಕಾಲ್ಪನಿಕ ಸಂಘಟನೆ ಎಂದರು.

ಇದೇ ವೇಳೆ ಕಾಂಗ್ರೆಸ್ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್​​ನವರ ಮೊದಲೇ ರೈಡ್ ಆಗುತ್ತೆ ಎಂದು ಹೇಳುತ್ತಾರೆ. ಮೊದಲೇ ಐಟಿ ದಾಳಿ ಆಗುತ್ತೆ ಅಂತ ಹೇಳೋದು ಕಾಂಗ್ರೆಸ್​ನವರ ತಂತ್ರಗಾರಿಕೆ. ಅವರು ಮೊದಲು ತಪ್ಪು ಮಾಡುವುದನ್ನು ಬಿಡಲಿ ಎಂದು ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com