ಮೋದಿಯಿಂದ ಜನ ಬೇಸತ್ತಿದ್ದಾರೆ: ಜೈರಾಮ್ ರಮೇಶ್

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಜನ ಪ್ರಧಾನಿ ನರೇಂದ್ರ ಮೋದಿಯಿಂದ...
ಜೈರಾಮ್ ರಮೇಶ್
ಜೈರಾಮ್ ರಮೇಶ್

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಜನ ಪ್ರಧಾನಿ ನರೇಂದ್ರ ಮೋದಿಯಿಂದ ಬೇಸತ್ತಿದ್ದಾರೆ ಮತ್ತು ಅವರ ಪ್ರಚಾರದ ಬಗ್ಗೆ ಉತ್ಸಾಹ ತೋರುತ್ತಿಲ್ಲ ಎಂದು  ಭಾನುವಾರ ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಜೈರಾಮ್ ರಮೇಶ್, "ಅವರ (ಪಿಎಂ ಮೋದಿ) ಭಾಷೆ ... ಡಬಲ್ ಎಂಜಿನ್! ಅದರ ಅರ್ಥವೇನು? ಅವರ ಮನಸ್ಸಿನಲ್ಲಿ, ಡಬಲ್ ಎಂಜಿನ್ ಎಂದರೆ ಅವರೇ ದೆಹಲಿಯಲ್ಲಿ ಕುಳಿತು,  ರಿಮೋಟ್ ಕಂಟ್ರೋಲ್ ನಲ್ಲಿ ಕರ್ನಾಟಕ ಸರ್ಕಾರ ನಡೆಸುವುದಾ?. ಇದು ಡಬಲ್ ಎಂಜಿನ್ ಅಲ್ಲ. ಡಬಲ್ ಎಂಜಿನ್ ಎಂದರೆ ಒಂದು ಎಂಜಿನ್ ಆರ್ಥಿಕ ಅಭಿವೃದ್ಧಿ ಮತ್ತು ಇನ್ನೊಂದು ಎಂಜಿನ್ ಸಾಮಾಜಿಕ ಸಾಮರಸ್ಯ ಹೊಂದಿರಬೇಕು" ಎಂದು ಹೇಳಿದ್ದಾರೆ.

"ಪ್ರಧಾನಿ ಮತ್ತು ಅವರ ಪ್ರಚಾರದಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಅವರು ಎಷ್ಟೇ ರೋಡ್‌ಶೋಗಳನ್ನು ಮಾಡಿದರೂ, ಆಕಾಶದಿಂದ ಹೂಮಳೆ ಸುರಿಸಿದರೂ ಅವರಿಗೆ ಮತ ನೀಡುವು ಉತ್ಸಾಹ ತೋರಲಿಲ್ಲ. ಪ್ರಧಾನಿ ಮೋದಿ ರೋಡ್ ಶೋ ನಡೆಸಿದ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ನೋಡಿ. ರಾಜ್ಯದಲ್ಲಿ ಶೇಕಡಾ 73 ಕ್ಕಿಂತ ಹೆಚ್ಚು ಮತದಾನವಾದರೆ ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ಮತದಾನವಾಗಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಕಾಂಗ್ರೆಸ್, ಸಮಾಜದ ಎಲ್ಲಾ ವರ್ಗದ ಮತಗಳನ್ನು ಪಡೆದುಕೊಂಡಿದೆ. ನಮ್ಮ (ಕಾಂಗ್ರೆಸ್) ಮತಗಳ ಪ್ರಮಾಣವು ಹೆಚ್ಚಾಯಿತು ಮತ್ತು ನಮ್ಮ ಸ್ಥಾನಗಳು ಕೂಡ ಹೆಚ್ಚಾಯಿತು. ನಾವು ಸಮಾಜದ ಎಲ್ಲಾ ವರ್ಗಗಳಿಂದ, ವಿಶೇಷವಾಗಿ ಬಡವರು, ಗ್ರಾಮೀಣ, ಆದಿವಾಸಿಗಳು ಮತ್ತು ಬುಡಕಟ್ಟು ಜನರಿಂದ ಮತಗಳನ್ನು ಪಡೆದಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com