ನಾವು ಪಕ್ಷ ಬಿಡಲು ಪ್ರೇರಣೆ ನೀಡಿದ್ದೇ ಸಿದ್ದರಾಮಯ್ಯ-ಡಾ ಸುಧಾಕರ್ ಬಳಿಕ ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಸ್ಫೋಟಕ ಹೇಳಿಕೆ

ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳು ಸಿಕ್ಕಿ ಸರ್ಕಾರ ರಚಿಸಲು ಹೊರಟಿರುವ ಸಂದರ್ಭದಲ್ಲಿ 2019ರಲ್ಲಿ ಕೈ ಪಾಳೆಯ ತೊರೆದು ಹೊರಬಂದ ನಾಯಕರು ಒಬ್ಬೊಬ್ಬರೇ ಈಗ ಸ್ಫೋಟಕ ಹೇಳಿಕೆ ನೀಡುತ್ತಿದ್ದಾರೆ.
ಎಸ್ ಟಿ ಸೋಮಶೇಖರ್
ಎಸ್ ಟಿ ಸೋಮಶೇಖರ್
Updated on

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳು ಸಿಕ್ಕಿ ಸರ್ಕಾರ ರಚಿಸಲು ಹೊರಟಿರುವ ಸಂದರ್ಭದಲ್ಲಿ 2019ರಲ್ಲಿ ಕೈ ಪಾಳೆಯ ತೊರೆದು ಹೊರಬಂದ ನಾಯಕರು ಒಬ್ಬೊಬ್ಬರೇ ಈಗ ಸ್ಫೋಟಕ ಹೇಳಿಕೆ ನೀಡುತ್ತಿದ್ದಾರೆ.

2019ರಲ್ಲಿ ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯನವರ ಧೋರಣೆ, ನಾವು ಸಹಾಯ, ಸಹಕಾರ ಕೇಳಲು ಹೋದಾಗ ಅಸಹಾಯಕತೆ ತೋರಿಸುತ್ತಿದ್ದ ಮೈತ್ರಿಕೂಟದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಇಂದು ಮುಖ್ಯಮಂತ್ರಿಯಾಗಲು ಸಿದ್ಧರಾಗಿರುವ ಸಿದ್ದರಾಮಯ್ಯನವರೇ ಕಾರಣ ಎಂದು ಟ್ವೀಟ್ ಮೂಲಕ ಮಾಜಿ ಸಚಿವ ಚಿಕ್ಕಬಳ್ಳಾಪುರದ ಡಾ ಸುಧಾಕರ್ ಬೇಸರ ಹೊರಹಾಕಿದ್ದರು. 

ಅದೇ ವರಸೆಯಲ್ಲಿ ಟ್ವೀಟ್ ಮಾಡಿದ್ದಾರೆ ಮಾಜಿ ಸಚಿವ ಶಾಸಕ ಎಸ್ ಟಿ ಸೋಮಶೇಖರ್. 20180-19ರಲ್ಲಿ ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ನಾವು ಶಾಸಕರು ಸಿದ್ದರಾಮಯ್ಯನವರ ಮುಂದೆ ಸಮಸ್ಯೆ ಹೇಳಿಕೊಳ್ಳಲು ಹೋದರೆ ಸಿದ್ದರಾಮಯ್ಯನವರು ಅಸಹಾಯಕತೆ ತೋರಿಸಿಕೊಳ್ಳುತ್ತಿದ್ದರು. ಅವರ ಅಸಹಾಯಕತೆಯೇ ನಾವು ಪಕ್ಷ ಬಿಡಲು ಪ್ರೇರಣೆಯಾಯಿತು ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com