'ಝಡ್' ಕೆಟಗರಿ ಭದ್ರತೆ: ಇನ್ನೂ ಸ್ವೀಕರಿಸದ ಯಡಿಯೂರಪ್ಪಗೆ ಕೇಂದ್ರ ಸರ್ಕಾರ ಒದಗಿಸುವ ಭದ್ರತೆ ಬಗ್ಗೆ ಹಲವು ಸಂದೇಹ!

ರಾಜ್ಯ ಬಿಜೆಪಿಯ ಸರ್ವೋಚ್ಛ ನಾಯಕ  ಬಿಎಸ್ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವಾಲಯವು ವಾರದ ಹಿಂದೆ ಜೆಡ್-ಕೆಟಗರಿ ಭದ್ರತೆಯನ್ನು ನೀಡಿತ್ತು, ಆದರೆ ಯಡಿಯೂರಪ್ಪನವರು ಇನ್ನೂ ಭದ್ರತೆ ತೆಗೆದುಕೊಂಡಿಲ್ಲ. 
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
Updated on

ಬೆಂಗಳೂರು: ರಾಜ್ಯ ಬಿಜೆಪಿಯ ಸರ್ವೋಚ್ಛ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವಾಲಯವು ವಾರದ ಹಿಂದೆ ಜೆಡ್-ಕೆಟಗರಿ ಭದ್ರತೆಯನ್ನು ನೀಡಿತ್ತು, ಆದರೆ ಯಡಿಯೂರಪ್ಪನವರು ಇನ್ನೂ ಭದ್ರತೆ ತೆಗೆದುಕೊಂಡಿಲ್ಲ. 

ಯಡಿಯೂರಪ್ಪನವರು ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಲ್ಲ. ಮೇಲ್ ಅಥವಾ ಫೋನ್ ಮೂಲಕವೂ ಅವರಿಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ಹಾಗಿರುವಾಗ ಕೇಂದ್ರ ಸರ್ಕಾರ ಅವರಿಗೆ ಈ ಮಟ್ಟದ ಭದ್ರತೆಯನ್ನು ಏಕೆ ನೀಡುತ್ತಿದೆ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತಿದೆ. 

ಎಲ್ಲಾ ಸಮಯದಲ್ಲೂ ನಾಯಕನ ಚಲನವಲನಗಳ ಮೇಲೆ ನಿಗಾ ಇರಿಸಿಕೊಳ್ಳಲು Z- ಮಟ್ಟದ ಭದ್ರತೆ ನೀಡಲಾಗುತ್ತದೆ. ಪ್ರಬಲ ಲಿಂಗಾಯತ ವಲಯಗಳಲ್ಲಿನ ಅನೇಕರು ಕೇಂದ್ರ ಗೃಹ ಸಚಿವಾಲಯವು ಮಾಜಿ ಸಿಎಂಗೆ ಅಂತಹ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಮಾಡುತ್ತಿರುವ ಬೆದರಿಕೆಯ ಗ್ರಹಿಕೆ ಏನೆಂದು ಯೋಚಿಸುತ್ತಿದ್ದಾರೆ.

ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಅವರ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಕೆಲವು ಸಿಆರ್‌ಪಿಎಫ್ ಅಧಿಕಾರಿಗಳು ಮೊನ್ನೆ ಮಂಗಳವಾರ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಯಡಿಯೂರಪ್ಪ ಅವರ ಆಪ್ತ ವಲಯದ ಮೂಲಗಳು, ಝಡ್ ಮಟ್ಟದ ಭದ್ರತೆಯನ್ನು ಒಪ್ಪಿಕೊಳ್ಳುವುದು-ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.

ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ, ಗೃಹ ಸಚಿವಾಲಯದ ಭದ್ರತೆ ವಿಷಯ ಹಾಸ್ಯಾಸ್ಪದವಾಗಬಾರದು. ಯಡಿಯೂರಪ್ಪ ಗಾಂಧಿ ಬಜಾರ್‌ನಲ್ಲಿ ನಿಂತು ಯಾವುದೇ ಬೆದರಿಕೆಯಿಲ್ಲದೆ ಚಾಟ್ ತಿನ್ನುವ ರಾಜಕಾರಣಿ. ಅವರು ಎಲ್ಲರೂ ಒಪ್ಪುವ ಬಹು ಪ್ರೀತಿಯ ನಾಯಕ. ಬಹುಶಃ ಅವರು ಕರ್ನಾಟಕದ ಅತ್ಯಂತ ಜಾತ್ಯತೀತ ಬಿಜೆಪಿ ನಾಯಕರಾಗಿದ್ದಾರೆ. Z ಭದ್ರತೆ ಅವರಿಗೆ ಏಕೆ ಬೇಕು, ಅವರಿಗೆ ಯಾವುದಾದರೂ ಬೆದರಿಕೆಗಳು ಅಥವಾ ಎಚ್ಚರಿಕೆ ಪತ್ರಗಳು ಬಂದಿವೆಯೇ? ಏನೂ ಇಲ್ಲವಲ್ಲ ಎಂದರು.

ಕರ್ನಾಟಕ ಉತ್ತರ ಪ್ರದೇಶವೇ ಅಥವಾ ಮಧ್ಯಪ್ರದೇಶವೇ? ದೆಹಲಿಯಲ್ಲಿ ಯಾರೋ ತಮ್ಮ ಲೆಕ್ಕಾಚಾರವನ್ನು ತಪ್ಪಾಗಿ ಗ್ರಹಿಸಿದ್ದಾರೆಂದು ತೋರುತ್ತಿದೆ. ಬಿಜೆಪಿಯ ಮಾಜಿ ಪದಾಧಿಕಾರಿಯೊಬ್ಬರು, ಬಹುಶಃ ಇದು ಕೇಂದ್ರದ ಗೌರವದ ವಿಧಾನವಾಗಿದೆ ಎಂದು ಹೇಳಿದರು. ಯಡಿಯೂರಪ್ಪನವರಿಗೆ ಯಾವುದೇ ಬೆದರಿಕೆಗಳ ಕುರಿತು ಅವರು, ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಕೋಮು ಘಟನೆಯ ನಂತರ, ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಅದು ಅವರ ಭದ್ರತೆಯನ್ನು ಮೇಲ್ದರ್ಜೆಗೇರಿಸಲು ಕಾರಣವಾಗಿರಬಹುದು ಎನ್ನುತ್ತಾರೆ. 

ಬಿಜೆಪಿ ಮುಖ್ಯ ವಕ್ತಾರ ಮಹೇಶ್, ಕೆಲವು ಬೆದರಿಕೆ ಗ್ರಹಿಕೆ ಅಥವಾ ಕೆಲವು ಗುಪ್ತಚರ ಮಾಹಿತಿಗಳು ಇದ್ದಾಗ, ಕೇಂದ್ರ ಗೃಹ ಸಚಿವಾಲಯವು ಅಂತಹ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com