ಗೊಲ್ಲ ಸಮುದಾಯಕ್ಕೆ ಬಿಜೆಪಿ ನೀಡಿದ ಭರವಸೆ ಈಡೇರಿಸಿಲ್ಲ: ಕಾಂಗ್ರೆಸ್ ಸೇರಲು ಪೂರ್ಣಿಮಾ ಶ್ರೀನಿವಾಸ್ ಸಜ್ಜು!

ಜೆಪಿ ನಡ್ಡಾ ನೇತೃತ್ವದ ಪಕ್ಷವು ತಾನು ಸೇರಿರುವ ಗೊಲ್ಲ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹಾಗಾಗೀ ಬದಲಾವಣೆ ಬಯಸಿದ್ದು ಕಾಂಗ್ರೆಸ್  ಸೇರುತ್ತಿರುವುದಾಗಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ತಮ್ಮ ಪತಿ ಡಿಟಿ ಶ್ರೀನಿವಾಸ್‌ಗೆ ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿರುವುದಾಗಿಯೂ ಅವರು
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮತ್ತಿತರೊಂದಿಗೆ ಪೂರ್ಣಿಮಾ ಶ್ರೀನಿವಾಸ್
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮತ್ತಿತರೊಂದಿಗೆ ಪೂರ್ಣಿಮಾ ಶ್ರೀನಿವಾಸ್
Updated on

ಬೆಂಗಳೂರು: ಜೆಪಿ ನಡ್ಡಾ ನೇತೃತ್ವದ ಪಕ್ಷವು ತಾನು ಸೇರಿರುವ ಗೊಲ್ಲ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹಾಗಾಗೀ ಬದಲಾವಣೆ ಬಯಸಿದ್ದು ಕಾಂಗ್ರೆಸ್  ಸೇರುತ್ತಿರುವುದಾಗಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ತಮ್ಮ ಪತಿ ಡಿಟಿ ಶ್ರೀನಿವಾಸ್‌ಗೆ ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿರುವುದಾಗಿಯೂ ಅವರು ತಿಳಿಸಿದ್ದಾರೆ. 

ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗಿತ್ತು ಎಂಬುದನ್ನು ಅಲ್ಲಗಳೆದ ಪೂರ್ಣಿಯಾ, ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾನು 2018 ರಿಂದ 2023ರವರೆಗೂ ಪ್ರತಿನಿಧಿಸಿದ್ದ ಹೊಳಲ್ಕೆರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಗಮನ ಹರಿಸಲಾಗಿತ್ತು.  ಆದಾಗ್ಯೂ,  ನನ್ನ ಸಮುದಾಯದ ವಿಷಯಕ್ಕೆ ಬಂದರೆ, ಅವರು (ಬಿಎಸ್ ವೈ, ಬೊಮ್ಮಾಯಿ) ಸರ್ಕಾರದ ಅವಧಿಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ, ನಮ್ಮ ಸಮುದಾಯದ ಮಠವಾಗಲಿ ಅಥವಾ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಮತ್ತು ಹಿರಿಯೂರಿನಲ್ಲಿ ಹಾಸ್ಟೆಲ್‌ಗಳಾಗಲಿ ಅಭಿವೃದ್ಧಿಪಡಿಸಲಿಲ್ಲ ಎಂದು ಆರೋಪಿಸಿದರು. 

ತುಮಕೂರಿನಲ್ಲೂ ಗೊಲ್ಲ ಸಮುದಾಯಕ್ಕೆ ಮೀಸಲಾಗಿದ್ದ ಹಲವು ಅಪೂರ್ಣ ಕಟ್ಟಡಗಳಿವೆ. ಅನುದಾನ ನೀಡುವಂತೆ ಮಾಡಿದ ಮನವಿಗೆ ಕಿವಿಗೊಡಲಿಲ್ಲ ಎಂದು ಪೂರ್ಣಿಮಾ ದೂರಿದರು.  ಕೊನೆಯ ಕ್ಷಣದವರೆಗೂ ತನಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಗುಮಾನಿಯೂ ಪೂರ್ಣಿಮಾ ಅವರಲ್ಲಿದೆ. ನಮ್ಮ ಸಮುದಾಯದ ನಿಗಮ ರಚನೆ ವಿಚಾರದಲ್ಲೂ ಬಿಜೆಪಿ ಗೊಂದಲ ಸೃಷ್ಟಿಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸೇರುವ ದಿನಾಂಕದ ಕುರಿತು ಇನ್ನೂ ಅಂತಿಮವಾಗಿಲ್ಲ, ಆದರೆ ನಾವು ಅಕ್ಟೋಬರ್ 20 ರಂದು ಯೋಚಿಸುತ್ತಿದ್ದೇವೆ. ನಾನು ರಾಜಕೀಯದಲ್ಲಿ ಮುಂದುವರಿಯಬೇಕು ಎಂಬುದು ನಮ್ಮ ಸಮುದಾಯದ ಮುಖಂಡರು ಮತ್ತು ಹಿತೈಷಿಗಳ ನಿರ್ಧಾರವಾಗಿದ್ದು, ಬಿಜೆಪಿಯಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ತೊಂದರೆ ಇದೆ ಎಂಬ ನಂಬಿಕೆಯಿಂದ ನಾನು ಬದಲಾವಣೆಗೆ ಮುಂದಾಗಲು ಬಯಸಿರುವುದಾಗಿ ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com