ಆರ್. ಅಶೋಕ್ ಕ್ಷೇತ್ರದಲ್ಲಿ ಆಪರೇಷನ್ ಹಸ್ತ: ಮಾಜಿ ಸಚಿವರ ಶಿಷ್ಯರು ಡಿ.ಕೆ ಬ್ರದರ್ಸ್ ತೆಕ್ಕೆಗೆ?

ಮಾಜಿ ಸಚಿವ ಆರ್.ಅಶೋಕ್ ಬೆಂಬಲಿಗರನ್ನು ಕಾಂಗ್ರೆಸ್​ಗೆ ತರುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದಲ್ಲಿ  ಆಪರೇಷನ್ ಹಸ್ತ ನಡೆಸಿದ್ದು, ಶುಕ್ರವಾರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.
ಡಿ.ಕೆ ಶಿವಕುಮಾರ್ ಮತ್ತು ಆರ್.ಅಶೋಕ್
ಡಿ.ಕೆ ಶಿವಕುಮಾರ್ ಮತ್ತು ಆರ್.ಅಶೋಕ್

ಬೆಂಗಳೂರು: ಮಾಜಿ ಸಚಿವ ಆರ್.ಅಶೋಕ್ ಬೆಂಬಲಿಗರನ್ನು ಕಾಂಗ್ರೆಸ್​ಗೆ ತರುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದಲ್ಲಿ  ಆಪರೇಷನ್ ಹಸ್ತ ನಡೆಸಿದ್ದು, ಶುಕ್ರವಾರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.

ಆರ್.ಅಶೋಕ್ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿದ್ದ ನಾಯಕರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ಮಾಜಿ ಉಪಮೇಯರ್, ಮಾಜಿ ಕಾರ್ಪೊರೇಟರ್ಸ್ ಸೇರಿದಂತೆ ಹತ್ತು ಜನರು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ.

ಎಲ್. ಶ್ರೀನಿವಾಸ್- ಮಾಜಿ ಉಪ ಮಹಾಪೌರರು ಮತ್ತು ಮಾಜಿ ಪಾಲಿಕೆ ಸದಸ್ಯರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು 2. ಆಂಜಿನಪ್ಪಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಬೆಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಪದ್ಮನಾಭ ನಗರ ಮುಖಂಡರು 3. ಶೋಭ ಆಂಜಿನಪ್ಪ-ಮಾಜಿ ಬಿಬಿಎಂಪಿ ಸದಸ್ಯರು ಪದ್ಮನಾಭನಗರ ವಾರ್ಡ್ 4.ಹೆಚ್. ನಾರಾಯಣ್- ಮಾಜಿ ಬಿಬಿಎಂಪಿ ಸದಸ್ಯರು ಹೊಸಕೆರೆಹಳ್ಳಿ ವಾರ್ಡ್ ಮತ್ತು ಮಾಜಿ ಅಧ್ಯಕ್ಷರು ಆರೋಗ್ಯ ಸ್ಥಾಯಿ ಸಮಿತಿ ಬಿಬಿಎಂಪಿ 5. ವೆಂಕಟಸ್ವಾಮಿ ನಾಯ್ಡು- ಮಾಜಿ ಪಾಲಿಕೆ ಸದಸ್ಯರು, ಚಿಕ್ಕಲ್ಲಸಂದ್ರ ವಾರ್ಡ್ 6. ಹೆಚ್. ಸುರೇಶ್- ಮಾಜಿ ಪಾಲಿಕೆ ಸದಸ್ಯರು, ಕುಮಾರಸ್ವಾಮಿ ಬಡಾವಣೆ ವಾರ್ಡ್ 7. ಶ್ರೀಮತಿ. ಲಕ್ಷ್ಮಿ ಸುರೇಶ್- ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್, ಬೆಂಗಳೂರು ನಗರ 8.  ರಂಗರಾಮೇಗೌಡ್ರು (ಬಿ.ಆರ್. ರಾಮು) ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ 9. ಪ್ರಸಾದ್ ಬಾಬು ಅಲಿಯಾಸ್ ಕಬಡ್ಡಿ ಬಾಬು- ಜಿಡಿಎಸ್ ಮುಖಂಡ, ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರು, 10 ಪವನ್-ಬಿಜೆಪಿ ಮುಖಂಡ 11 ಸುಪ್ರಿಯ ಶೇಖರ್- ಚಿಕ್ಕಕಲ್ಲಸಂದ್ರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯರು. 12, ಲಕ್ಷ್ಮಿ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್ ಇವರುಗಳು ಶುಕ್ರವಾರ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com