'2028ಕ್ಕೆ ನನಗೆ 82 ವರ್ಷವಾಗುತ್ತದೆ, ಇನ್ನು ನಾನು ಚುನಾವಣೆಗೆ ನಿಲ್ಲಬಾರದು ಎಂದು ತೀರ್ಮಾನ ಮಾಡಿದ್ದೇನೆ'

ನನಗೆ ಈಗ 77 ವರ್ಷ, ಇನ್ನು ನಾಲ್ಕು ವರ್ಷ ಅಧಿಕಾರ ಇರುತ್ತದೆ. ಮುಂದಿನ ಚುನಾವಣೆ ಹೊತ್ತಿಗೆ ನನಗೆ 81 ವರ್ಷ ಆಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಮೈಸೂರು: ಇನ್ನು ನಾನು ಚುನಾವಣೆಗೆ ನಿಲ್ಲಬಾರದು ಎಂದು ತೀರ್ಮಾನ ಮಾಡಿದ್ದೇನೆ. ನನಗೆ ಈಗ 77 ವರ್ಷ, ಇನ್ನು ನಾಲ್ಕು ವರ್ಷ ಅಧಿಕಾರ ಇರುತ್ತದೆ. ಮುಂದಿನ ಚುನಾವಣೆ ಹೊತ್ತಿಗೆ ನನಗೆ 82 ವರ್ಷ ಆಗಿರುತ್ತದೆ, ನಂತರ ಆರೋಗ್ಯದಿಂದ ಲವಲವಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚುನಾವಣಾ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯ ಪ್ರಚಾರ ಒತ್ತಡ ಮಧ್ಯೆಯೂ ಆರಾಮವಾಗಿ ಮಾತನಾಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಅವರು, 2028ನೇ ಇಸವಿಗೆ ನನಗೆ 82 ವರ್ಷವಾಗುತ್ತದೆ ಮತ್ತು ರಾಜಕೀಯಕ್ಕೆ ಬಂದು 50 ವರ್ಷವಾಗುತ್ತದೆ. ನಾನು 1978ರಲ್ಲಿ ತಾಲ್ಲೂಕು ಬೋರ್ಡ್ ಸದಸ್ಯನಾಗಿದ್ದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತದೆ. ಇದಕ್ಕೆ ಚುನಾವಣಾ ರಾಜಕಾರಣ ಸಾಕು ಎಂದಿಕೊಂಡಿದ್ದೇನೆ ಎಂದು ಹೇಳಿದರು. 

ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯ ಮೇಲೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಕೇಳಿಬರುತ್ತಿರುವ ಮಾತಿಗೆ ಮೈಸೂರು ಜಿಲ್ಲೆಯಲ್ಲಿ ಮುಗಿಸಿ ಬೇರೆ ಕಡೆಗೂ ಹೋಗುತ್ತೇನೆ, ನಾಳೆ ಚಿತ್ರದುರ್ಗಕ್ಕೆ ಹೋಗುತ್ತಿದ್ದೇನೆ. ನಾಳೆ ಚಾಮರಾಜನಗರ, ಮೈಸೂರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದು ಬೆಂಗಳೂರಿಗೆ ಹೋಗುತ್ತೇನೆ ಎಂದರು.

ಜೆಡಿಎಸ್ ಸೋಲುತ್ತೆ: ಲೋಕಸಭೆ ಚುನಾವಣೆ ಬಗ್ಗೆ ನನಗೆ ಆತಂಕವಿಲ್ಲ, ಹಾಸನ, ಮಂಡ್ಯ ಎಲ್ಲ ಕಡೆ ಹೋಗಿ ಪ್ರಚಾರ ಮಾಡುತ್ತೇನೆ. ಹಾಸನದಲ್ಲಿ ಕಳೆದ ಬಾರಿ ಪ್ರಜ್ವಲ್ ರೇವಣ್ಣ ಪರ ನಾನು ಪ್ರಚಾರಕ್ಕೆ ಹೋಗಿದ್ದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಹೋಗುತ್ತೇನೆ, ಜನರು ಕೂಡ ಪ್ರಜ್ವಲ್ ರೇವಣ್ಣನನ್ನು ಸೋಲಿಸುತ್ತಾರೆ. ಜೆಡಿಎಸ್ ಮೂರಕ್ಕೆ ಮೂರು ಸೀಟುಗಳನ್ನು ಈ ಬಾರಿ ಸೋಲುತ್ತದೆ ಎಂದರು.

ಸಿಎಂ ಸಿದ್ದರಾಮಯ್ಯ
ನಾನು ಸಿಎಂ ಸ್ಥಾನದಲ್ಲಿ ಇರಬೇಕು ಅಂದ್ರೆ 60 ಸಾವಿರ ಲೀಡ್ ಕೊಡಿ: ವರುಣಾದಲ್ಲಿ ಸಿದ್ದರಾಮಯ್ಯ

ಮೈಸೂರು, ಚಾಮರಾಜನಗರ ಮಾತ್ರವಲ್ಲ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಬಗ್ಗೆ ನಾನು ಗಂಭೀರವಾಗಿದ್ದೇನೆ. ಮತ್ತೊಂದು ಬಾರಿ ಈ ಕಡೆ ಭಾಗಕ್ಕೆ ಪ್ರವಾಸಕ್ಕೆ ಬರುತ್ತೇನೆ. ಬಿಜೆಪಿವರು ಬಂದರೇ ಬಡವರ ಕಾರ್ಯಕ್ರಮಗಳು ನಿಂತು ಹೋಗುತ್ತವೆ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹೆಚ್ಚು ಲೀಡ್ ಕೊಡಿ ಎಂದು ಕೇಳಿಕೊಂಡಿದ್ದೇನೆ ಅಷ್ಟೆ, ನಿನ್ನೆ ಮೈಸೂರಿನಲ್ಲಿ ಆಡಿದ ಮಾತಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com