ಕುರುಬ ಸಮುದಾಯ ಓಲೈಕೆಗೆ ಮುಂದು: ಇಂದು BJP MLC ಅಡಗೂರು ವಿಶ್ವನಾಥ್ ಭೇಟಿ ಮಾಡಲಿರುವ HDK

ತಮ್ಮ ಇದುವರೆಗಿನ ರಾಜಕೀಯ ಜೀವನದಲ್ಲಿ ಕುರುಬ ಸಮುದಾಯದವರ ಓಲೈಕೆಯಿಂದ ದೂರವೇ ಇದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಈಗ ಲೋಕಸಭೆ ಚುನಾವಣೆಗೆ ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ಆ ಸಮುದಾಯದವರ ಓಲೈಕೆಗೆ ಮುಂದಾಗಿದ್ದಾರೆ.
ಕುರುಬ ಸಮುದಾಯ ಓಲೈಕೆಗೆ ಮುಂದು: ಇಂದು BJP MLC ಅಡಗೂರು ವಿಶ್ವನಾಥ್ ಭೇಟಿ ಮಾಡಲಿರುವ HDK

ಬೆಂಗಳೂರು: ತಮ್ಮ ಇದುವರೆಗಿನ ರಾಜಕೀಯ ಜೀವನದಲ್ಲಿ ಕುರುಬ ಸಮುದಾಯದವರ ಓಲೈಕೆಯಿಂದ ದೂರವೇ ಇದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಈಗ ಲೋಕಸಭೆ ಚುನಾವಣೆಗೆ ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ಆ ಸಮುದಾಯದವರನ್ನು ಓಲೈಸಿಕೊಳ್ಳಲು ಮುಂದಾಗಿದ್ದಾರೆ.

ಅದರ ಭಾಗವಾಗಿ ಜೆಡಿಎಸ್ ನ ಮಾಜಿ ಅಧ್ಯಕ್ಷರಾಗಿದ್ದ ಅಡಗೂರು ವಿಶ್ವನಾಥ್ ಅವರನ್ನು ಇಂದು ಕೆಆರ್ ನಗರದಲ್ಲಿ ಭೇಟಿ ಮಾಡಲಿದ್ದಾರೆ.

ಈಗ ಬಿಜೆಪಿ ಎಂಎಲ್ಸಿ ಆಗಿರುವ ಕುರುಬ ಸಮುದಾಯದ ಮುಖಂಡ ಅಡಗೂರು ವಿಶ್ವನಾಥ್ ಅವರು ಕುಮಾರಸ್ವಾಮಿ ವಿರುದ್ಧ ಈ ಹಿಂದೆ ರಾಜಕೀಯ ವಾಗ್ದಾಳಿ ನಡೆಸುತ್ತಿದ್ದುದು, ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದುದು ಎಲ್ಲರಿಗೂ ಗೊತ್ತಿದೆ. 2018 ರಲ್ಲಿ 14 ತಿಂಗಳ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಉಭಯ ನಾಯಕರ ನಡುವೆ ವಾಕ್ಸಮರವೇ ನಡೆದಿತ್ತು. ಹುಣಸೂರು ಶಾಸಕರಾಗಿದ್ದ ಅಡಗೂರು, ಕುಮಾರಸ್ವಾಮಿ ಅವರೇ ತಮಗೆ ಸಚಿವ ಸ್ಥಾನ ಕೈತಪ್ಪಲು ಕಾರಣ ಎಂದು ಆರೋಪಿಸಿದ್ದರು.

ತಮಗೆ ಸಚಿವ ಸ್ಥಾನ ಸಿಗಲೆಂದು 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಅಡಗೂರ್ ವಿಶ್ವನಾಥ್ ಹೋಗಿ ಗೇಟ್‌ ಬಳಿ ಬಹಳ ಹೊತ್ತು ಕಾದಿದ್ದರು. ಇದು ಉಭಯ ನಾಯಕರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು. ನಂತರ ಶೀಘ್ರದಲ್ಲೇ ಕುಮಾರಸ್ವಾಮಿಯವರ ಸರ್ಕಾರ ಪತನವಾಯಿತು, ಇಬ್ಬರೂ ಬಹಿರಂಗನಾಗಿ ಮುಖಾಮುಖಿಯಾಗುತ್ತಿರಲಿಲ್ಲ. 2019ರಲ್ಲಿ ನಡೆದ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ವಿಶ್ವನಾಥ್ ಆಘಾತಕಾರಿ ಸೋಲು ಅನುಭವಿಸಿದ್ದರು.

ಕುರುಬ ಸಮುದಾಯ ಓಲೈಕೆಗೆ ಮುಂದು: ಇಂದು BJP MLC ಅಡಗೂರು ವಿಶ್ವನಾಥ್ ಭೇಟಿ ಮಾಡಲಿರುವ HDK
ಲೋಕಸಭಾ ಚುನಾವಣೆ 2024: ಯದುವೀರ್‌ ಒಡೆಯರ್ ಅವಿರೋಧವಾಗಿ ಆಯ್ಕೆಯಾಗಲಿ- ಎಚ್.ವಿಶ್ವನಾಥ್

ಇದಾಗಿ ಐದು ವರ್ಷ ಕಳೆದಿದ್ದು, ಕುಮಾರಸ್ವಾಮಿಯವರು ಇಂದು ಸಿಎಂ ಆಗಿಲ್ಲ, ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಡಗೂರು ವಿಶ್ವನಾಥ್ ಎಂಎಲ್ ಎ ಆಗಿಲ್ಲ, ಆದರೆ ಇದು ಇಬ್ಬರೂ ನಾಯಕರ ಸಮನ್ವಯಕ್ಕೆ ಕಾಲ ಕೂಡಿಬರಬಹುದು. ಕುಮಾರಸ್ವಾಮಿ ಅವರ ಭೇಟಿ ಎರಡು ಉದ್ದೇಶಗಳನ್ನು ಪೂರೈಸುತ್ತದೆ - ಭಾವನಾತ್ಮಕ ಮಟ್ಟದಲ್ಲಿ ಇದು ಅವರ ನಡುವೆ ಸಾಮರಸ್ಯವನ್ನು ತರುತ್ತದೆ, ಆದರೆ ದೊಡ್ಡ ಮಟ್ಟದಲ್ಲಿ, ಇದು ಎರಡು ಸಮುದಾಯಗಳ ನಡುವೆ ಒಮ್ಮತ ಮೂಡಿಸುತ್ತದೆ. ಅಡಗೂರು ಶಾಸಕರಾಗಿದ್ದ ಕೆ.ಆರ್.ನಗರದಲ್ಲಿ ಅವರು ಕುರುಬ ಸಮುದಾಯದವರ ಬೆಂಬಲ ಕೋರಲಿದ್ದಾರೆ. 2008ರ ವಿಂಗಡಣೆ ನಂತರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕೆ.ಆರ್.ನಗರದಲ್ಲಿ ಸುಮಾರು 45 ಸಾವಿರ ಕುರುಬ ಮತಗಳಿವೆ.

ಅಡಗೂರು ಅವರು ಜನರ ಮಧ್ಯೆ ನಿರೂಪಣೆ ಮಾಡುವಲ್ಲಿ ಬಹಳ ಸಿದ್ಧಹಸ್ತರು. ಮೈಸೂರಿನಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಂಡು ರಾಜಮನೆತನದ ಯದುವೀರ್ ಒಡೆಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಅವರು ಹೇಳಿದಾಗ ಇದು ಸ್ಪಷ್ಟವಾಗಿದೆ.

ವಿಶ್ವನಾಥ್ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವ ಮೂಲಕ ನಿರೂಪಣೆಯನ್ನು ಹೊಂದಿಸಿದರೆ ಮತ್ತು ಅವರು ತಮ್ಮ ನೆಚ್ಚಿನ ರಾಗಿ ಮುದ್ದೆ ಮತ್ತು ಸೊಪ್ಪಿನ ಸಾರುಗಳನ್ನು ಅನೇಕ ಸ್ಥಳೀಯ ಕುರುಬ ನಾಯಕರ ಜೊತೆಯಲ್ಲಿ ಕಟ್ಟಿದರೆ, ಕಾಂಗ್ರೆಸ್ ನವರಿಗೆ ಕುರುಬ ಮತ ಸಿಗುತ್ತದೆಯೇ ಎಂದು ನೋಡಬೇಕಾಗಿದೆ. ಮಂಡ್ಯ ಜಿಲ್ಲೆಯಲ್ಲಿ 1.5 ಲಕ್ಷಕ್ಕೂ ಅಧಿಕ ಕುರುಬ ಜನಾಂಗದವರಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರ ಮತ ನಿರ್ಣಾಯಕವಾಗಲಿದೆ.

ಹೆಚ್‌ಡಿಕೆ ಭೇಟಿಯಿಂದ ಕುರುಬ ಮತಗಳು ಬರಲಿ, ಇಲ್ಲದಿರಲಿ, ಜೆಡಿಎಸ್‌ನತ್ತ ಕುರುಬರ ಮನ ಒಲಿಸುತ್ತದೆ. ಪಕ್ಷಕ್ಕೆ ದಕ್ಷಿಣದಲ್ಲಿ ಪ್ರಮುಖ ಕುರುಬ ನಾಯಕರಿಲ್ಲ, ಅದರ ಏಕೈಕ ಕುರುಬ ಮುಖ ಬೀದರ್‌ನ ಬಂಡೆಪ್ಪ ಕಾಶೆಂಪೂರ್. ಮಂಡ್ಯದ ಕೆಆರ್ ನಗರ, ಮಳವಳ್ಳಿ ಮತ್ತು ನಾಗಮಂಗಲದಲ್ಲಿ ಒಟ್ಟು 1.25 ಲಕ್ಷ ಕುರುಬ ಮತಗಳಿವೆ. ಕುಮಾರಸ್ವಾಮಿ ಮತ್ತು ಅಡಗೂರು ವಿಶ್ವನಾಥ್ ಅವರ ಭೇಟಿ ಎರಡು ಸಮುದಾಯಗಳ ನಡುವೆ ಸಮನ್ವಯತೆ ತರುವುದು ಖಚಿತ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com