ಒಕ್ಕಲಿಗ ಸಿಎಂ ಕೆಳಗಿಳಿಸಿದ್ದು ಬಿಜೆಪಿ ಹೇಳಿಕೆ: ಡಿಕೆಶಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ಗುರುವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: 'ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ಗುರುವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬಿಜೆಪಿ - ಜೆಡಿಎಸ್ ನಾಯಕರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್ ಅವರು, ಒಕ್ಕಲಿಗ ಸಿಎಂ ಕೆಳಗಿಳಿಸಿದ್ದು ಬಿಜೆಪಿ. ಇದನ್ನ ಭೇಟಿ ವೇಳೆ ಸ್ವಾಮೀಜಿಗಳು ಕೇಳಬೇಕಿತ್ತು ಎಂದು ಹೇಳಿದ್ದರು.

ಈ ಸಂಬಂಧ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಮತ್ತು ಹಿರಿಯ ವಕೀಲ ವಿವೇಕ್ ಎಸ್.ರೆಡ್ಡಿ ಅವರು ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಡಿಸಿಎಂ ಹೇಳಿಕೆಯಿಂದ ಒಕ್ಕಲಿಗ ಸಮುದಾಯ ಹಾಗೂ ಆದಿಚುಂಚನಗಿರಿ ಶ್ರೀಗಳ ಲಕ್ಷಾಂತರ ಅನುಯಾಯಿಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟು ಹಾಕಬಹುದು ಎಂದಿದ್ದಾರೆ.

ಡಿಕೆ ಶಿವಕುಮಾರ್
ಕಾಂಗ್ರೆಸ್ 'ಒಕ್ಕಲಿಗ' ಅಸ್ತ್ರಕ್ಕೆ BJP ಟಕ್ಕರ್; NDA ಅಭ್ಯರ್ಥಿಗಳಿಂದ ನಿರ್ಮಲಾನಂದ ಶ್ರೀ ಭೇಟಿ!

ಡಿಕೆ ಶಿವಕುಮಾರ್ ಅವರು, ಮತದಾರರ ಜಾತಿ ಮತ್ತು ಕೋಮು ಭಾವನೆಗಳ ಆಧಾರದ ಮೇಲೆ ಸುಳ್ಳು, ಆಧಾರರಹಿತ ಮತ್ತು ತಪ್ಪು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಜಕೀಯ ಮುಖಂಡರನ್ನು ಟೀಕಿಸುವ ಭರದಲ್ಲಿ ಶಿವಕುಮಾರ್ ಅವರು ಮತದಾರರ ಜಾತಿ ಮತ್ತು ಕೋಮು ಭಾವನೆಗಳ ಆಧಾರದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಮಾದರಿ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಿಕೆ ಶಿವಕುಮಾರ್ ಅವರ ಆರೋಪ ಸಾಮಾನ್ಯ ಮತದಾರರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com