ಆದಿ ಚುಂಚನಗಿರಿ ಮಠ ವಿಭಜಿಸಿದ್ದು ಯಾರು? ಶ್ರೀಗಳ ಫೋನ್‌ ಟ್ಯಾಪ್ ಮಾಡಿಸಿದ್ದು ಯಾರು? HDKಗೆ ಚಲುವರಾಯಸ್ವಾಮಿ ಟಾಂಗ್

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಮಠ ರಾಜಕೀಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ, ಜೆಡಿಎಸ್-ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಒಕ್ಕಲಿಗರ ಪ್ರಭಾವಿ ಮಠಾಧೀಶ ಆದಿ ಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿಯ ಭೇಟಿಗೆ ಮುಗಿಬೀಳುತ್ತಿದ್ದಾರೆ.
ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ
ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಮಠ ರಾಜಕೀಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ, ಜೆಡಿಎಸ್-ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಒಕ್ಕಲಿಗರ ಪ್ರಭಾವಿ ಮಠಾಧೀಶ ಆದಿ ಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿಯ ಭೇಟಿಗೆ ಮುಗಿಬೀಳುತ್ತಿದ್ದಾರೆ.

ಅಭ್ಯರ್ಥಿಗಳ ಈ ಭೇಟಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳ ನಡುವಿನ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಕುಮಾರಸ್ವಾಮಿ ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಂದು ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ದವರು ಇಂದು ಆಶೀರ್ವಾದ ಪಡೆಯಲು ಮಠಕ್ಕೆ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಾವು ಸಹ ಜೆಎಸ್‌ಎಸ್, ಸಿದ್ದಗಂಗಾ, ಚುಂಚನಗಿರಿ ಮಠಗಳಿಗೆ ನಾವು ಹೋಗುತ್ತೇವೆ, ಅವರು ಹೋಗಿದ್ದಾರೆ. ಇದು ಚುನಾವಣೆ ವೇಳೆ ಸಹಜವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಆದರೆ ಕುಮಾರಸ್ವಾಮಿ, ಸ್ವಾಮೀಜಿ ಫೋನ್ ಟ್ಯಾಪ್ ಮಾಡಿದ್ದಾರೆ. ಸ್ವಾಮೀಜಿಗಳು ಯಾರಿಗೂ ಪ್ರಚಾರ ಮಾಡೋಕೆ ಆಗಲ್ಲ. ಚುಂಚನಗಿರಿ ಮಠ ಒಕ್ಕಲಿಗ ಸಮುದಾಯ ಮಠ ಆದ್ರೂ ಸಹ ರಾಜ್ಯದಲ್ಲಿ ಅತ್ಯಂತ ಜಾತ್ಯತೀತ ಮಠವಾಗಿದೆ. ಎಲ್ಲಾ ಜಾತಿಗಳನ್ನು ಪ್ರೀತಿಸಿ ಬೆಳೆಸಿದವರು ಬಾಲಗಂಗಾಧರನಾಥ ಶ್ರೀಗಳು. ಜೆಡಿಎಸ್‌ನವರು ಬಾಲಗಂಗಾಧರ ಶ್ರೀಗಳಿಗೆ ಎಷ್ಟು ಕಿರುಕುಳ‌ ಕೊಟ್ಟರು ಎಂದು ಸಹ ಗೊತ್ತಿದೆ. ಅಂದು ಆದಿ ಚುಂಚನಗಿರಿ ಮಠವನ್ನು ವಿಭಜಿಸಿದ್ದರು, ಈಗ ಚುನಾವಣೆ ಬಂದಿದೆ. ಅದಕ್ಕೆ ಮಠಕ್ಕೆ‌ ಕುಮಾರಸ್ವಾಮಿ ಹೋಗ್ತಾ ಇದ್ದಾರೆ ಅಷ್ಟೇ ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ
ರಾಜಕೀಯ ಚಟುವಟಿಕೆಗಳ ತಾಣವಾದ ಆದಿ ಚುಂಚನಗಿರಿ ಮಠ: ಸ್ವಾಮೀಜಿಗಳ ಆಶೀರ್ವಾದಕ್ಕಾಗಿ ಗಿರಕಿ ಹೊಡೆಯುತ್ತಿರುವ ಅಭ್ಯರ್ಥಿಗಳು!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com