ಬೆಂಗಳೂರು ಗ್ರಾಮಾಂತರ: ಕಾಂಗ್ರೆಸ್ ಗೆ ಮಹಿಳೆಯರ 'ಗ್ಯಾರಂಟಿ' ವೋಟ್? 'ಹೃದಯವಂತನ' ಪರ ನಿಲ್ಲುವನೇ ಮತದಾರ!

ಚುನಾವಣಾ ಪ್ರಚಾರದ ಆರಂಭದಲ್ಲೇ ಜಿದ್ದಾಜಿದ್ದಿನ ಅಖಾಡಗಳಲ್ಲಿ ಪ್ರಮುಖ ಕ್ಷೇತ್ರ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಗುರುತಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚುನಾವಣಾ ಪ್ರಚಾರದ ಆರಂಭದಲ್ಲೇ ಜಿದ್ದಾಜಿದ್ದಿನ ಅಖಾಡಗಳಲ್ಲಿ ಪ್ರಮುಖ ಕ್ಷೇತ್ರ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಗುರುತಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಸೋಲಿಸಲು ಜೆಡಿಎಸ್-ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಬಿಜೆಪಿ ಘೋಷಿಸಿದಾಗಿನಿಂದ ಕನಕಪುರದ 51 ವರ್ಷದ ಮೀನಾಕ್ಷಿ (ಹೆಸರು ಬದಲಿಸಲಾಗಿದೆ) ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಮತ ಹಾಕುವ ಕುಟುಂಬದಿಂದ ಬಂದಿರುವ ಅವರು ಡಾ. ಮಂಜುನಾಥ್‌ಗೆ ಮತ ಹಾಕುವ ಮೂಲಕ ಗೌರವವನ್ನು ತೋರಿಸಲು ಉತ್ಸುಕರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ ಮಂಜುನಾಥ್ ಅವರ ಸಮಯೋಚಿತ ಪ್ರಜ್ಞೆಯಿಂದ ಮೀನಾಕ್ಷಿ ಅವರ ರೈತ ಪತಿಯ ಜೀವ ಉಳಿದಿತ್ತು. ಡಾಕ್ಟರ್ ಮಂಜುನಾಥ್ ದೇವರು ಎಂದು ನಾವೆಲ್ಲರೂ ನಂಬುತ್ತೇವೆ. ನಾವು ಭರವಸೆ ಕಳೆದುಕೊಂಡಿದ್ದೆವು, ಅವರು ಇಲ್ಲದಿದ್ದರೆ ಆರು ವರ್ಷಗಳ ಹಿಂದೆ ನಾನು ನನ್ನ ಪತಿಯನ್ನು ಕಳೆದುಕೊಳ್ಳುತ್ತಿದ್ದೆಎಂದು ಮೀನಾಕ್ಷಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯಲ್ಲಿ 27.53 ಲಕ್ಷ ಮತದಾರರಿದ್ದಾರೆ. ಕ್ಷೇತ್ರವು ನಗರ ಮತ್ತು ಗ್ರಾಮೀಣ ಜನಸಂಖ್ಯೆಯ ಮಿಶ್ರಣವಾಗಿದೆ. ಬೆಂಗಳೂರು ದಕ್ಷಿಣದ ಸ್ವಲ್ಪ ಭಾಗ, ಆರ್‌ಆರ್ ನಗರ, ಮಾಗಡಿ, ಚನ್ನಪಟ್ಟಣ, ರಾಮನಗರ ಮತ್ತು ರಾಮನಗರ ಜಿಲ್ಲೆಯ ಕನಕಪುರ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಂಗಳೂರು ನಗರ ಹೊರತುಪಡಿಸಿ ಉಳಿದ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮತದಾರರ ಪ್ರಾಬಲ್ಯವಿದೆ. ಕುತೂಹಲಕಾರಿಯಾಗಿ ಎಲ್ಲೂ ಚುನಾವಣಾ ಉತ್ಸಾಹ ಕಾಣುತ್ತಿಲ್ಲ.

ಸಾಂದರ್ಭಿಕ ಚಿತ್ರ
ಜೆಡಿಎಸ್ ಪಕ್ಷ ಸರಿ ಇಲ್ಲವೆಂದು ದೇವೇಗೌಡರ ಬುದ್ದಿವಂತ ಅಳಿಯ ಬಿಜೆಪಿ ಸೇರಿದ್ದಾರೆ: ಡಿ.ಕೆ ಸುರೇಶ್

ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಬಿಜೆಪಿ-ಜೆಡಿಎಸ್ ಮೈತ್ರಿಯ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಆಟಿಕೆ ತಯಾರಕರು ವಾಸಿಸುವ ಚನ್ನಪಟ್ಟಣದ ಕಲಾನಗರ ವಾರ್ಡ್‌ನ ಸೈಯದ್ ಬಶೀರುದ್ದೀನ್, ಚನ್ನಪಟ್ಟಣ ಕ್ಷೇತ್ರವೊಂದರಲ್ಲೇ 2.7 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

2023ರಲ್ಲಿ ಈ ಕ್ಷೇತ್ರದಿಂದ ಬರೋಬ್ಬರಿ ಸುಮಾರು 1 ಲಕ್ಷ ಮತಗಳನ್ನು ಪಡೆದ ಜೆಡಿಎಸ್ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರ ಪರವಾಗಿ ನಾವು ಇಷ್ಟು ವರ್ಷ ಇದ್ದೆವು. ನಮ್ಮ ಮತಗಳು ಅವರಿಗೆ ಜಯ ತಂದುಕೊಟ್ಟವು. ಆದರೆ ಈಗ ಬಿಜೆಪಿ ಜೊತೆ ಕೈ ಜೋಡಿಸಿ ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಡಿ.ಕೆ.ಸುರೇಶ್ ಅವರಿಗೆ ಮತ ನೀಡಿ ಇಲ್ಲಿಂದ ಒಂದು ಲಕ್ಷ ಮತ ಲೀಡ್ ನಲ್ಲಿ ಗೆಲ್ಲಿಸಲಿದ್ದೇವೆ ಎಂದರು. ಕಲಾನಗರದಲ್ಲಿ 2,700ಕ್ಕೂ ಹೆಚ್ಚು ಮತದಾರರು ಕುಶಲಕರ್ಮಿಗಳಿದ್ದಾರೆ.

ಮತ್ತೊಂದೆಡೆ, ಹಲವರು ಡಾ ಮಂಜುನಾಥ್ ಅವರನ್ನು ‘ದಳದ ಮನುಷ್ಯ’ (ಜೆಡಿಎಸ್‌ನ ವ್ಯಕ್ತಿ) ಎಂದು ಕರೆಯುತ್ತಾರೆ. ಡಾ.ಮಂಜುನಾಥ್ ನಮ್ಮ ದೇವೇಗೌಡರ ಅಳಿಯ, ಇನ್ನೇನು ಬೇಕು,ಅವರನ್ನು ಗೆಲ್ಲಿಸಲು ಅವರು ದಳದ ಮನುಷ್ಯ ಎಂದು ಮಾಗಡಿ ತಾಲೂಕಿನ ದೊಡ್ಡಮುಡಿಗೆರೆಯ ನಿಜಲಿಂಗಪ್ಪ ಹೇಳಿದ್ದಾರೆ. ಈ ಮಧ್ಯೆ, ತನ್ನ ಗ್ಯಾರಂಟಿ ಯೋಜನೆಗಳ ಮೇಲೆ ಅವಲಂಬಿತವಾಗಿರುವ ಕಾಂಗ್ರೆಸ್, ಮಾಗಡಿ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಅನೇಕ ಮಹಿಳೆಯರ ಬೆಂಬಲವನ್ನು ಪಡೆದುಕೊಂಡಿದೆ, ಈ ಯೋಜನೆಗಳು ಆರ್ಥಿಕ ಸ್ವಾತಂತ್ರ್ಯ ನೀಡಿದೆ ಎಂದು ಅವರು ಹೇಳುತ್ತಾರೆ. ಆದರೆ ಪುರುಷರು ಇದರಿಂದ ಸಂತೋಷವಾಗಿಲ್ಲ. ಹೀಗಾಗಿ ಕಾಂಗ್ರೆಸ್ ಗೆಲ್ಲಬಾರದು ಎಂಬ ಕಾರಣದಿಂದ ಮಂಜುನಾಥ್ ಅವರಿಗೆ ಮತ ಹಾಕುತ್ತೇನೆ ಎಂದು ಮಾಗಡಿಯ ಹುಚ್ಚಯ್ಯ ತಿಳಿಸಿದ್ದಾರೆ.

ಮಹಿಳೆಯರಿಗೆ 2,000 ರೂಪಾಯಿ ಆರ್ಥಿಕ ನೆರವು, ಉಚಿತ ಪ್ರಯಾಣ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗಿದೆ. ನಮಗಾಗಿ ಏನಿದೆ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮಗಾಗಿ ಏನನ್ನೂ ಕೊಟ್ಟಿಲ್ಲ, ನಾನೇಕೆ ಅವರಿಗೆ ಮತ ಹಾಕಬೇಕು? ಎಂದು ಅವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಗೆ ಮತ ಹಾಕದಿರಲು ಹಲವು ಜನ ಹಲವು ಕಾರಣಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳಲ್ಲದೆ ಮಹಿಳೆಯರಿಗೆ ಇನ್ನೂ ಹಲವು ವಿಶೇಷ ಸೌಲಭ್ಯಗಳಿವೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ
ಡಿಕೆಶಿ- ದೇವೇಗೌಡ ಕುಟುಂಬಗಳ 'ಟೈಟಾನಿಕ್' ಘರ್ಷಣೆ: ಹೈವೋಲ್ಟೇಜ್ ಕಣವಾದ ಬೆಂಗಳೂರು ಗ್ರಾಮಾಂತರ; ಮೈತ್ರಿ ಅಭ್ಯರ್ಥಿಗೆ 'ಕ್ಲೀನ್ ಇಮೇಜ್' ವರದಾನ!

ಪ್ರತಿಯೊಂದು ಸರ್ಕಾರವೂ ಒಂದು ರೀತಿಯಲ್ಲಿ ಒಳ್ಳೆಯದನ್ನು ಮಾಡುತ್ತದೆ. ನಮ್ಮ ಪಂಚಾಯತ್ ಸದಸ್ಯರ ಶಿಫಾರಸಿನಂತೆ ನಾವು ಮತ ಚಲಾಯಿಸುತ್ತೇವೆ. ಅಷ್ಟಕ್ಕೂ ಏನಾದರೂ ಬೇಕಾದರೆ ಪಂಚಾಯಿತಿಗೆ ಹೋಗುತ್ತೇವೆ ಎಂದು ರಾಮನಗರದ ಚಿಕ್ಕಸೂಳಿಕೆರೆಯ ಕೆಂಪಮ್ಮ (ಹೆಸರು ಬದಲಿಸಲಾಗಿದೆ) ತಿಳಿಸಿದ್ದಾರೆ. ಆದರೆ ಪಕ್ಕದ ಗ್ರಾಮದ ದೇವಮ್ಮ (ಹೆಸರು ಬದಲಿಸಲಾಗಿದೆ) ಕಾಂಗ್ರೆಸ್ ಅಭ್ಯರ್ಥಿ ಗೆಲುವು ಬಯಸಿದ್ದಾರೆ. ನಾವು ಇತರ ಪಕ್ಷಗಳಿಂದ 500 ಅಥವಾ 1000 ರೂಪಾಯಿಗಳನ್ನು ಪಡೆಯಬಹುದು ಆದರೆ ನನಗೆ ಉಚಿತ ಅಕ್ಕಿ ಮತ್ತು ಹಣವನ್ನು ನೀಡುವವರಿಗೆ ನಾನು ಮತ ಹಾಕದಿದ್ದರೆ ಶಿವನು ನನ್ನನ್ನು ಕ್ಷಮಿಸುವುದಿಲ್ಲ. ನಾನು ಶಾಂತಿ ನೆಮ್ಮದಿಯಿಂದ ಊಟ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿದೆ, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ ಹೀಗಾಗಿ ಈ ಬಾರಿ ಸುರೇಶ್‌ಗೆ ಗೆಲುವು ಸುಲಭವಲ್ಲ ಎಂದು ರಾಮನಗರದ ರೈತನಾಗಿ ಮಾರ್ಪಟ್ಟಿರುವ ಸಿವಿಲ್ ಎಂಜಿನಿಯರ್ ರವಿಕುಮಾರ್ ಹೇಳಿದರು. ಒಂದು ವರ್ಗದ ಜನರು ಸುರೇಶ್ ಅವರ ಕೆಲಸಕ್ಕಾಗಿ ಮತ್ತು ಸ್ಥಳೀಯರು ಎಂಬ ಕಾರಣಕ್ಕೆ ಅವರ ಪರವಾಗಿದ್ದಾರೆ. ಇದೇ ವೇಳೆ ಕೆಲವರು ಮಂಜುನಾಥ್ ಗೆಲ್ಲಬೇಕು ಎಂದು ಬಯಸಿದ್ದಾರೆ. ಹೀಗಾಗಿ ಈ ಬಾರಿ ಬೆಂಗಳೂರು ಗ್ರಾಮಾಂತರ ಭಾರೀ ಕುತೂಹಲ ಮೂಡಿಸಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com