ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಹಿಂದುತ್ವದ ಭದ್ರಕೋಟೆಯಲ್ಲಿ ಕಾಂಗ್ರೆಸ್ ಪತಾಕೆ ಹಾರಿಸ್ತಾರಾ ಅಂಜಲಿ ನಿಂಬಾಳ್ಕರ್?

ವಿಧಾನಸಭಾ ಮಾಜಿಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) ವಿರುದ್ಧ ಖಾನಾಪುರದ ಮಾಜಿ ಶಾಸಕಿ ಕಾಂಗ್ರೆಸ್ ನ ಡಾ.ಅಂಜಲಿ ನಿಂಬಾಳ್ಕರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಕಾಗೇರಿ ಮತ್ತು ಅಂಜಲಿ ನಿಂಬಾಳ್ಕರ್
ಕಾಗೇರಿ ಮತ್ತು ಅಂಜಲಿ ನಿಂಬಾಳ್ಕರ್
Updated on

ಉತ್ತರ ಕನ್ನಡ: ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ನಿರಾಕರಿಸಿದೆ, 20 ವರ್ಷಗಳ ನಂತರ ಬಿಜೆಪಿ ಭದ್ರಕೋಟೆಯಾದ ಉತ್ತರ ಕನ್ನಡದಲ್ಲಿ ಬಿಜೆಪಿಗೆ ಹೊಸ ಸಂಸದರು ಆಯ್ಕೆಯಾಗಲಿದ್ದಾರೆ. ಉತ್ತರ ಕನ್ನಡದಿಂದ ಆರು ಬಾರಿ ಸಂಸದರಾಗಿರುವ ಅನಂತ ಕುಮಾರ್ ಹೆಗ್ಡೆ 2004 ರಿಂದ ಸತತವಾಗಿ ಗೆದ್ದಿದ್ದಾರೆ. ಇದಕ್ಕೂ ಮೊದಲು ಅವರು 1996 ಮತ್ತು 1998 ರಲ್ಲಿಯೂ ಗೆಲುವು ಸಾಧಿಸಿದ್ದರು.

2024ರ ಲೋಕಸಭೆ ಚುನಾವಣೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) ವಿರುದ್ಧ ಖಾನಾಪುರದ ಮಾಜಿ ಶಾಸಕಿ ಕಾಂಗ್ರೆಸ್ ನ ಡಾ.ಅಂಜಲಿ ನಿಂಬಾಳ್ಕರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹೆಗ್ಡೆ ಅವರ ನಿರ್ಗಮನದ ನಂತರ ಕ್ಷೇತ್ರದಲ್ಲಿ ಬಿಜೆಪಿ ತನ್ನನ್ನು ತಾನು ಮರುಸ್ಥಾಪಿಸುವ ಗುರಿಯನ್ನು ಹೊಂದಿದ್ದರೆ, ದಶಕಗಳ ನಂತರ ಈ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಆರು ಬಾರಿ ಶಾಸಕರಾಗಿದ್ದ ಕಾಗೇರಿ 2023ರ ವಿಧಾನಸಭೆ ಚುನಾವಣೆಯಲ್ಲಿ ಶಿರಸಿಯಲ್ಲಿ ಸೋತಿದ್ದರು. ಆದ್ದರಿಂದ, 2024 ರ ಚುನಾವಣೆಯು ಕಾಗೇರಿ ಅವರಿಗೆ ಮಹತ್ವ ಪೂರ್ಣದ್ದಾಗಿದೆ. ಕಾಗೇರಿ ಅಕ್ಷರಶಃ ತಮ್ಮ ರಾಜಕೀಯ ಜೀವನವನ್ನು ಮೊದಲಿನಿಂದ ಪ್ರಾರಂಭಿಸಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರದಿಂದ ಸೋತ ನಂತರ ಡಾ.ಅಂಜಲಿಯವರದ್ದೂ ಅದೇ ಕಥೆಯಾಗಿದೆ. ಕಾಗೇರಿ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಅದರಲ್ಲಿ1994–1999, 1999–2004, ಮತ್ತು 2004–2008ರಲ್ಲಿ ಅಂಕೋಲಾದಿಂದ ಮೂರು ಬಾರಿ ಹಾಗೂ 2008–2013, 2013–2018 ಮತ್ತು 2013-2018ರಲ್ಲಿ ಮೂರು ಬಾರಿ ಶಿರಸಿ ಸಿದ್ದಾಪುರದಿಂದ ಅಂಕೋಲಾವನ್ನು ಪ್ರತಿನಿಧಿಸಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಹೀಗಾಗಿ ಜಿಲ್ಲೆಯ ಹೆಸರಾಂತ ರಾಜಕೀಯ ನಾಯಕರಾಗಿ ಕಾಗೇರಿ ಪ್ರಸಿದ್ದರಾಗಿದ್ದಾರೆ.

ಕಾಗೇರಿ ಮತ್ತು ಅಂಜಲಿ ನಿಂಬಾಳ್ಕರ್
ಪತ್ನಿ ಅಂಜಲಿ ನಿಂಬಾಳ್ಕರ್‌ಗೆ ಕಾಂಗ್ರೆಸ್‌ ಟಿಕೆಟ್‌; ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವರ್ಗಾವಣೆಗೆ ಬಿಜೆಪಿ ಒತ್ತಾಯ

2018 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಗೆದ್ದ ಅಂಜಲಿ ನಿಂಬಾಳ್ಕರ್ ಖಾನಾಪುರದಲ್ಲಿ ಗೆಲುವು ಸಾಧಿಸಿದ್ದರು, ಹೀಗಾಗಿ ಅವರಿಗೆ ಈ ಕ್ಷೇತ್ರ ಹೊಸದಾಗಿದೆ. 2008ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕಾಗೇರಿ ಅವರು 2013ರವರೆಗೆ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ನೇತೃತ್ವದ ಸರ್ಕಾರದಲ್ಲಿಯೂ ಸಚಿವರಾಗಿ ಮುಂದುವರಿದಿದ್ದರು.

ಅನಂತಕುಮಾರ್ ಹೆಗಡೆ ಪ್ರಬಲ ಆರ್‌ಎಸ್‌ಎಸ್ ಬೆಂಬಲದೊಂದಿಗೆ 27 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರಿಂದ ಜಿಲ್ಲೆಯನ್ನು ಹಿಂದುತ್ವದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಫೈರ್‌ಬ್ರಾಂಡ್ ಹಿಂದುತ್ವದ ನಾಯಕ ಹೆಗ್ಡೆ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಆನಂದ್ ಅಸ್ನೋಟಿಕರ್ ವಿರುದ್ಧ 4,79,649 ಮತಗಳ ಅಂತರದಿಂದ ಗೆದ್ದಿದ್ದರು.

ಆದರೆ, ಅವರಿಗಿಂತ ಮೊದಲು ಕಾಂಗ್ರೆಸ್ ನಾಯಕರಾದ ದೇವರಾಯ ನಾಯ್ಕ್ ಮತ್ತು ಮಾರ್ಗರೇಟ್ ಆಳ್ವಾ ಲೋಕಸಭೆಯಲ್ಲಿ ಉತ್ತರ ಕನ್ನಡವನ್ನು ಪ್ರತಿನಿಧಿಸಿದ್ದರು. ಅಲ್ಲದೆ, ಮಾರ್ಗರೇಟ್ ಆಳ್ವಾ ಅವರ ಮಾವ ಜೋಕಿಮ್ ಆಳ್ವ ಅವರು 1952, 1957 ಮತ್ತು 1962 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡದಿಂದ ಗೆದ್ದರು. ಕಾಂಗ್ರೆಸ್ ಈಗ ಕಳೆದುಕೊಂಡಿರುವ ತನ್ನ ವೈಭವವನ್ನು ಮರಳಿ ಪಡೆಯುವ ಗುರಿ ಹೊಂದಿದೆ.

ಹವ್ಯಕ ಬ್ರಾಹ್ಮಣ, ಕಾಗೇರಿ ಅವರು ತಮ್ಮ ಸಮುದಾಯದ ಬೆಂಬಲವನ್ನು ಹೊಂದಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಹಿಂದುಳಿದ ಸಮುದಾಯಗಳು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಮತಗಳಿವೆ.

ಕಾಗೇರಿ ಮತ್ತು ಅಂಜಲಿ ನಿಂಬಾಳ್ಕರ್
ನಮ್ಮ ತ್ಯಾಗದ ಫಲದಿಂದ ಅಧಿಕಾರ ಅನುಭವಿಸಿದ್ದೀರಿ: ಕಾಗೇರಿ ವಿರುದ್ಧ ಹೆಬ್ಬಾರ್ ಟೀಕಾ ಪ್ರಹಾರ

ಬ್ರಾಹ್ಮಣರು ಮತ್ತು ಲಿಂಗಾಯತರು ಜಿಲ್ಲೆಯಾದ್ಯಂತ ಹರಡಿದ್ದಾರೆ, ಸಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಅವರ ಪುತ್ರ ಚುನಾವಣಾ ಕಣದಿಂದ ದೂರ ಉಳಿದಿರುವುದು ಕಾಂಗ್ರೆಸ್‌ ಗೆಲುವಿಗೆ ಸಹಾಯವಾಗುವ ಸಾಧ್ಯತೆಯಿದೆ, ಹೆಗ್ಡೆ ಅವರಿಗೆ ಟಿಕೆಟ್ ಸಿಗದೆ ಬೇಸರಗೊಂಡಿರುವುದು ಕಾಗೇರಿ ಅವರಿಗೆ ಮತ್ತಷ್ಟು ಕಠಿಣವಾಗಲಿದೆ.

ಕ್ಷೇತ್ರವು ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ . ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಮತ್ತು ಯಲ್ಲಾಪುರ ಕ್ಷೇತ್ರಗಳಾಗಿವೆ. ನೆರೆಯ ಬೆಳಗಾವಿ ಜಿಲ್ಲೆಯಿಂದ ಖಾನಾಪುರ ಮತ್ತು ಕಿತ್ತೂರು ಕ್ಷೇತ್ರಗಳು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸೇರಿವೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಐದರಲ್ಲಿ ಕಾಂಗ್ರೆಸ್ ಗೆದ್ದಿದೆ. ಕ್ಷೇತ್ರವು ಗಣನೀಯ ಸಂಖ್ಯೆಯ ಮರಾಠ ಮತದಾರರನ್ನು ಹೊಂದಿದೆ, ಹೆಚ್ಚಿನ ಪ್ರಮಾಣದಲ್ಲಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ಸಮುದಾಯಗಳನ್ನು ಹೊಂದಿರುವುದರಿಂದ ಡಾ ಅಂಜಲಿ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ರಾಜ್ಯ ಸರ್ಕಾರದ ಭರವಸೆಗಳು ಬಿಜೆಪಿಯನ್ನು ಸೋಲಿಸಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ.

ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ, ಕುಣಬಿಗಳು ಮತ್ತು ಹಾಲಕ್ಕಿ ಒಕ್ಕಲಿಗರಿಗೆ ಎಸ್‌ಟಿ ಟ್ಯಾಗ್ ನಿರಾಕರಣೆ, ಪ್ರಾಜೆಕ್ಟ್ ಸೀ ಬರ್ಡ್ ಮತ್ತು ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಪರಿಹಾರ ನೀಡಿರುವುದು ಮತ್ತು ಗ್ರೀನ್ ಫೀಲ್ಡ್ ನಿರ್ಮಾಣಕ್ಕೆ ಭೂ ಸ್ವಾಧೀನದಂತಹ ಸಮಸ್ಯೆಗಳು ಎರಡೂ ರಾಜಕೀಯ ಪಕ್ಷಗಳಿಗೆ ಹೊರೆಯಾಗಲಿವೆ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ, ಹೊಸ ಸಂಸದರು ಕ್ಷೇತ್ರದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುತ್ತಾರೆ ಎಂದು ಜಿಲ್ಲೆಯ ಜನರು ಭರವಸೆಯಿಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com