ಡಿ ಕೆ ಸುರೇಶ್
ಡಿ ಕೆ ಸುರೇಶ್

ಬ್ರ್ಯಾಂಡ್ ಬೆಂಗಳೂರು ಇಮೇಜ್ ಹಾಳು ಮಾಡುವುದೇ ಮೋದಿ ಹಿಡನ್ ಅಜೆಂಡಾ: ಡಿ ಕೆ ಸುರೇಶ್ (ಸಂದರ್ಶನ)

Summary

ರಾಜಕೀಯ ಜಿದ್ದಾಜಿದ್ದಿನ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ ಸುರೇಶ್ ಮೂರನೇ ಬಾರಿ ತಮ್ಮ ಅದೃಷ್ಟ ಪರೀಕ್ಷಿಸಿಲು ಕಣಕ್ಕಿಳಿದಿದ್ದಾರೆ. ಈ ಬಾರಿ ಸುರೇಶ್ ಅವರನ್ನು ಸೋಲಿಸಲು ಜೆಡಿಎಸ್-ಬಿಜೆಪಿ ಎರಡು ಪಕ್ಷಗಳು ಮೈತ್ರಿಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಸ್ಪರ್ಧಿಸಿದ್ದಾರೆ.

Q

ಈ ಚುನಾವಣೆಗೂ ಹಿಂದಿನ ಚುನಾವಣೆಗಳಿಗೂ ಏನು ವ್ಯತ್ಯಾಸ?

A

ಚುನಾವಣೆಗಳು ನನಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ನಾನು ಎಂಪಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಹಲವರ ಪರವಾಗಿ ಕೆಲಸ ಮಾಡಿದ್ದೇನೆ. ಚುನಾವಣಾ ಸಮಯದಲ್ಲಿ, ನಾವು ಮತ ​​ಕೇಳುತ್ತೇವೆ, ಇಲ್ಲದಿದ್ದರೆ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳುತ್ತೇವೆ.

Q

ಖಾತರಿ ಯೋಜನೆಗಳು ನಿಮ್ಮ ಮತದಾರರ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

A

ಕಳೆದ ಚುನಾವಣೆ ವೇಳೆ ಗ್ಯಾರಂಟಿ ಕಾರ್ಡ್ ನೀಡಿದ್ದೆವು. ಇದು ಫಲಿತಾಂಶಗಳಲ್ಲಿ ಸ್ವಲ್ಪ ವ್ಯತ್ಯಾಸ ಉಂಟು ಮಾಡಿತ್ತು. ಜನರು ನಮ್ಮನ್ನು ಸಂಪೂರ್ಣವಾಗಿ ನಂಬಲಿಲ್ಲ, ಆದರೆ ನಾವು ಎಲ್ಲಾ ಐದು ಖಾತರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯೋಜನೆಗಳಿಂದಾಗಿ ಅವರ ಜೀವನಶೈಲಿ ಬದಲಾಗಿದೆ. ಜಾತಿ, ರಾಜಕೀಯ ಪಕ್ಷಗಳ ಭೇದವಿಲ್ಲದೆ, ಜನರಿಗೆ ಗ್ಯಾರಂಟಿಗಳು ಸಹಾಯ ಮಾಡುತ್ತಿವೆ. ಇದು ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೆರವಾಗಲಿದೆ. ಶೇ, 80 ಕ್ಕಿಂತ ಹೆಚ್ಚು ಫಲಾನುಭವಿಗಳು, ವಿಶೇಷವಾಗಿ ಮಹಿಳೆಯರು ನಮಗೆ ಮತ ಹಾಕುತ್ತಾರೆ.

Q

ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದಾರಲ್ಲ?

A

ನಾನು ಈ ಹಿಂದೆ ಮೂರು ಚುನಾವಣೆಗೆ ಸ್ಪರ್ಧಿಸಿದ್ದು, ಮೂರೂ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಗೆಲ್ಲುವ ಆತ್ಮ ವಿಶ್ವಾಸ ಹೆಚ್ಚಿದೆ.

Q

ಪ್ರಧಾನಿ ಮೋದಿ, ಕೇಂದ್ರ ಸಚಿವರು ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಬೆಂಗಳೂರು ನಗರ ಮತ್ತು ಗ್ರಾಮಾಂತರಕ್ಕೆ ಪ್ರಚಾರಕ್ಕೆ ಬರುತ್ತಿದ್ದಾರೆ, ನಿಮ್ಮ ಅಭಿಪ್ರಾಯವೇನು?

A

ನೀರಿನ ಸಮಸ್ಯೆ ಸೇರಿದಂತೆ ಕರ್ನಾಟಕದ ಯಾವುದೇ ಸಮಸ್ಯೆಗಳನ್ನು ಅವರು ಬಗೆಹರಿಸಿಲ್ಲ. ವಾಸ್ತವವಾಗಿ, ಯೋಗಿ ಆದಿತ್ಯನಾಥ್ ನಮ್ಮ ಹಣವನ್ನು ತೆಗೆದುಕೊಂಡು ತಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ. ಒಂದು ಕಾಲದಲ್ಲಿ ಬೆಂಗಳೂರಿಗೆ ಕಂಪನಿಗಳು ಬರುತ್ತಿದ್ದವು, ಈಗ ಅಹಮದಾಬಾದ್‌ಗೆ ಹೋಗುತ್ತಿವೆ. ಬ್ರಾಂಡ್ ಬೆಂಗಳೂರಿನ ಇಮೇಜ್ ಹಾಳು ಮಾಡುವುದೇ ಮೋದಿಯವರ ಹಿಡನ್ ಅಜೆಂಡಾ. ಇದು ಅವರ ರಾಜ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ, ಆದರೆ ಕರ್ನಾಟಕಕ್ಕೆ ನೀಡಲಾಗುತ್ತಿಲ್ಲ.

Q

ಚುನಾವಣೆಯಲ್ಲಿ ರಾಮಮಂದಿರ ಪ್ರಮುಖ ವಿಷಯವಾಗುತ್ತದೆ ಎಂದು ನೀವು ಭಾವಿಸುತ್ತೀರಾ?

A

ಕರ್ನಾಟಕದಲ್ಲಿ ಅನೇಕ ದೇವಾಲಯಗಳಿವೆ, ಇಲ್ಲಿ ದೇವರು ಮತ್ತು ದೇವಾಲಯಗಳಿಗೆ ಕೊರತೆಯಿಲ್ಲ. ಕರ್ನಾಟಕದಲ್ಲಿ ರಾಮನನ್ನು ಪೂಜಿಸುವವರು ಕಡಿಮೆ. ನನ್ನ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿದ್ದೇನೆ, ಆದರೆ ಅದರ ಬಗ್ಗೆ ಎಲ್ಲಿಯೂ ನಾನು ತಮಟೆ ಬಾರಿಸುತ್ತಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ರಾಮನನ್ನು ಬಳಸಿಕೊಳ್ಳುತ್ತಿದೆ.

Q

ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಹೇಗೆ ನೋಡುತ್ತೀರಿ, ಕಳೆದ ಬಾರಿ ಇದೇ ಜೆಡಿಎಸ್ ನಿಮ್ಮ ಜೊತೆಗಿತ್ತು...

A

ನನ್ನನ್ನು ಇಷ್ಟಪಡುವವರು ಜೆಡಿಎಸ್ ಮತ್ತು ಬಿಜೆಪಿಯಲ್ಲಿದ್ದಾರೆ. ನಾನು ಮಾಡಿದ ಕೆಲಸಗಳಿಂದಾಗಿ ಅವರು ನನಗೆ ಮತ ಹಾಕಲು ಬಯಸುತ್ತಾರೆ. ನನ್ನನ್ನು ಕಳೆದುಕೊಂಡರೆ ತಮ್ಮ ಜಿಲ್ಲೆಗೆ ನಷ್ಟ ಎಂಬುದು ಅವರಿಗೆ ಗೊತ್ತು. ತಮಗೆ ಮತ ಬರುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತು ಹಾಗಾಗಿಯೇ ತಮ್ಮ ಅಳಿಯನಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com