ಡಾ ಸಿ ಎನ್ ಮಂಜುನಾಥ್
ಡಾ ಸಿ ಎನ್ ಮಂಜುನಾಥ್

ಮೇಕೆದಾಟು ಜಲಾಶಯ ನಿರ್ಮಾಣ ಸಮಸ್ಯೆ ಬಗೆಹರಿಸಲು ಸಾಧ್ಯ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು: ಡಾ. ಸಿ.ಎನ್.ಮಂಜುನಾಥ್ (ಸಂದರ್ಶನ)

Summary

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಸದ್ಯಕ್ಕೆ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಅಳಿಯ ಡಾ. ಸಿಎನ್ ಮಂಜುನಾಥ್ ನಡುವಿನ ಸಮರ ಹೆಚ್ಚು ಗಮನ ಸೆಳೆದಿದೆ. ಪ್ರಚಾರ ಕಾರ್ಯದ ನಡುವೆಯೂ ಡಾ. ಸಿಎನ್ ಮಂಜುನಾಥ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ, ಅದರ ಆಯ್ದ ಭಾಗ ಇಲ್ಲಿದೆ.

Q

ನಿಮ್ಮ ಪ್ರಚಾರ ಅಭಿಯಾನಕ್ಕೆ ಪ್ರತಿಕ್ರಿಯೆ ಹೇಗಿದೆ?

A

ನಾನು ಪ್ರಚಾರ ಮಾಡುತ್ತಿರುವ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಮೂರು ನಗರ ಕ್ಷೇತ್ರಗಳು ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಜನರು ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ.

Q

ನೀವು ಎಂದಾದರೂ ರಾಜಕೀಯಕ್ಕೆ ಬರುವ ಬಗ್ಗೆ ಯೋಚಿಸಿದ್ದೀರಾ?

A

ನನ್ನ ಕನಸಿನಲ್ಲಿಯೂ ನಾನು ರಾಜಕೀಯಕ್ಕೆ ಬರಬೇಕೆಂದು ಬಯಸಿರಲಿಲ್ಲ. ನಾನು ನನ್ನ ಕೆಲಸಗಳಲ್ಲಿ ನಿರತನಾಗಿದ್ದೆ. ಆದರೆ ನಿವೃತ್ತಿಯ ನಂತರ, ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಜಾರಿಗೆ ತಂದ ಬದಲಾವಣೆಗಳಿಂದಾಗಿ ಜನರು ನಾನು ರಾಜಕೀಯಕ್ಕೆ ಸೇರಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು. ಹಲವಾರು ಸ್ಥಳಗಳಲ್ಲಿ ನಡೆದ ಅಭಿನಂದನವಾ ಕಾರ್ಯಕ್ರಮಗಳಲ್ಲಿ ರಾಜಕೀಯಕ್ಕೆ ಬರುವಂತೆ ಜನ ನನಗೆ ಒತ್ತಾಯಿಸಿದರು.

Q

ಬಿಜೆಪಿಯಿಂದಲೇ ಏಕೆ ಸ್ಪರ್ಧೆ?

A

ಕ್ಷೇತ್ರ ಮತ್ತು ಪಕ್ಷದ ಆಯ್ಕೆಯನ್ನು ಎರಡೂ ಪಕ್ಷಗಳ ಹೈಕಮಾಂಡ್‌ಗಳು ಮಾಡುತ್ತವೆ. ಅದು ನನ್ನ ನಿರ್ಧಾರವಾಗಿರಲಿಲ್ಲ.

Q

ರಾಜಕೀಯ ಪಕ್ಷದ ಅಭ್ಯರ್ಥಿ ಮತ್ತು ವೈದ್ಯ ವೃತ್ತಿ ನಡುವೆ ಯಾವ ರೀತಿ ಹೋಲಿಕೆ ನಿಮಗೆ ಕಾಣುತ್ತಿದೆ?

A

ಆಗ ನಾನು ರೋಗಿಗಳಿಂದ ಸುತ್ತುವರೆದಿದ್ದೆ ಮತ್ತು ಈಗ ಜನರಿಂದ ಸುತ್ತುವರಿದಿದ್ದೇನೆ. ಇವೆರಡೂ ಜನ-ಕೇಂದ್ರಿತ ಉದ್ಯೋಗಗಳು ಮತ್ತು ಅವರ ಸಂಕಟ ಮತ್ತು ಸಮಸ್ಯೆಗಳನ್ನು ಆಲಿಸುವುದು ಮುಖ್ಯವಾಗಿದೆ.

Q

ನಿಮ್ಮ ಮಾವನಿಂದ ನೀವು ಏನಾದರೂ ಸಲಹೆ ಪಡೆದಿದ್ದೀರಾ?

A

ಅವರ ಜೊತೆ ಯಾವುದೇ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅಥವಾ ಎಚ್.ಡಿ.ರೇವಣ್ಣ, ಎಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮೊದಲಿನಿಂದಲೂ ಜನರನ್ನು ಟೀಕಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಬಿಜೆಪಿ ಮತ್ತು ಜೆಡಿಎಸ್ ಮಾಡುವ ಕೆಲಸಗಳಿಗೆ ಮಾತ್ರ ಒತ್ತು ನೀಡುತ್ತೇನೆ ಮತ್ತು ಯಾವುದೇ ವೈಯಕ್ತಿಕ ದಾಳಿ ಮಾಡುವುದಿಲ್ಲ.

Q

ನೀವು ಆಯ್ಕೆಯಾದರೆ ಜನರು ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?

A

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಮೇಕೆದಾಟು ಜಲಾಶಯ ನಿರ್ಮಾಣ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಂತಿಮವಾಗಿ ರಾಜ್ಯಕ್ಕೆ ಲಾಭವಾಗಬೇಕಿದೆ. ರಾಮನಗರ, ಚನ್ನಪಟ್ಟಣ, ಮಾಗಡಿಯಲ್ಲಿ ರೇಷ್ಮೆ ಕೃಷಿ ಪ್ರಧಾನ ಕಸುಬಾಗಿದ್ದು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಬೇಕು. ರೇಷ್ಮೆ ಬೆಲೆಗಳು ಕುಸಿದರೆ, ನಾವು ಅವರಿಗೆ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಸಹಾಯ ಮಾಡಬೇಕಾಗಿದೆ.

ಭಾರತದಲ್ಲಿ ಶೇಕಡಾ 13 ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತವೆ, ಅನೇಕ ಸ್ಥಳಗಳಲ್ಲಿ ಟ್ರಾಮಾ ಕೇರ್ ಸೆಂಟರ್‌ಗಳ ಕೊರತೆಯೂ ಇದಕ್ಕೆ ಒಂದು ಕಾರಣ, ನಾನು ಈ ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇನೆ ಇದರಿಂದಾಗಿ ಒಬ್ಬರು ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ಪಡೆಯಬಹುದು. ರಾಮನಗರದಲ್ಲಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ನ್ನು ಶೀಘ್ರ ಆರಂಭಿಸುವ ಅಗತ್ಯವಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯನ್ನು ಇನ್ನಷ್ಟು ಬಲಪಡಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳು ಈ ಕಾರ್ಡ್ ತೆಗೆದುಕೊಳ್ಳುವಂತೆ ಮಾಡಲು ನಾವು ಬೆಲೆ ಪರಿಷ್ಕರಣೆ ಮಾಡಬೇಕಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com