ಗೋವಿಂದ ಕಾರಜೋಳ.
ಗೋವಿಂದ ಕಾರಜೋಳ.

ಸಚಿವರಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸಗಳೇ ನನಗೆ ಶ್ರೀರಕ್ಷೆ: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ (ಸಂದರ್ಶನ)

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಚಿತ್ರದುರ್ಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳನ್ನು ಮಂಜೂರು ಮಾಡಿಸಿದ್ದಾರೆ. ಈ ಯೋಜನೆಗಳು ತಮ್ಮ ಗೆಲುವಿಗೆ ಸಹಾಯಮಾಡುತ್ತವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Q

ವೃತ್ತಿಜೀವನದಲ್ಲಿ ಮೊದಲ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೀರಿ...?

A

ದೇಶವನ್ನು ಸಮರ್ಥವಾಗಿ ಆಳುವ ಏಕೈಕ ಸಮರ್ಥ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಎಂದು ದೇಶದ ಜನರು ನಿರ್ಧರಿಸಿದ್ದಾರೆ. ಇಂದಿರಾಗಾಂಧಿ ನಂತರ ಇಂತಹ ಚುನಾವಣೆಗಳನ್ನು ನಾನು ನೋಡಿಲ್ಲ.

Q

ನಿಮ್ಮ ವಿರುದ್ಧ ನೀವು ಚಿತ್ರದುರ್ಗಕ್ಕೆ ಹೊರಗಿನವರು ಎಂಬ ಆರೋಪವಿದೆಯಲ್ಲಾ?

A

ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಹೊರಗಿನವರು ಮತ್ತು ಒಳಗಿನವರು ಎಂಬ ಪದವನ್ನು ಹರಡಲು ಪ್ರಯತ್ನಿಸಿತು. ಇಂದಿರಾಗಾಂಧಿ ರಾಯಬರೇಲಿಯಲ್ಲಿ ಸೋತಾಗ ಚಿಕ್ಕಮಗಳೂರಿಗೆ ಬಂದು ಗೆದ್ದರು. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿದ್ದು, ಬಾದಾಮಿಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಹೊರಗಿನವರಲ್ಲವೇ? ನಾನು ಉತ್ತರ ಕರ್ನಾಟಕದವನು ಮತ್ತು ಮಧ್ಯ ಕರ್ನಾಟಕದಿಂದ ಸ್ಪರ್ಧಿಸುತ್ತೇನೆ. ನನಗೆ ಇಲ್ಲಿ ಸಂಬಂಧಿಕರಿದ್ದಾರೆ. ಚಂದ್ರಪ್ಪನಿಗೆ ಇಲ್ಲಿ ಬಂಧು-ಬಳಗದವರೇ ಇಲ್ಲ, ಅವರೇ ನಿಜವಾದ ಹೊರಗಿನವರು.

Q

ಚಿತ್ರದುರ್ಗದ ಅಭಿವೃದ್ಧಿ ಬಗ್ಗೆ ನಿಮ್ಮ ಕಲ್ಪನೆ ಏನು?

A

ಚಿತ್ರದುರ್ಗ ರಾಜ್ಯದ ಆರ್ಥಿಕ ಕೇಂದ್ರವಾಗಲು ಸೂಕ್ತವಾಗಿದೆ. ಶ್ರೇಣಿ 2 ಮತ್ತು 3 ನಗರಗಳನ್ನು ನೋಡುತ್ತಿರುವ ಮೆಗಾ ಕೈಗಾರಿಕೆಗಳನ್ನು ತರಲು ಸಹಾಯವಾಗುವಂತೆ ವಿಮಾನ ನಿಲ್ದಾಣವನ್ನು ನಿರ್ಮಿಸಬೇಕು. ತುಮಕೂರಿನಿಂದ ದಾವಣಗೆರೆಗೆ ಮತ್ತು ಆಲಮಟ್ಟಿಯಿಂದ ಚಿತ್ರದುರ್ಗಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತೇನೆ. ಯುವಕರಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡಬೇಕು. ಜನರ ವಲಸೆ ಕಡಿಮೆ ಮಾಡಲು ಕೈಗಾರಿಕೆಗಳನ್ನು ತರಲು ಕ್ರಮಕೈಗೊಳ್ಳಲಾಗುವುದು.

Q

ಭದ್ರಾ ಮೇಲ್ದಂಡೆ ಯೋಜನೆಗೆ ನೀವು ಹೇಗೆ ಬೆಂಬಲ ನೀಡುವಿರಿ?

A

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವೇ ಈ ಯೋಜನೆಗೆ ಸಾಕಷ್ಟು ಹಣ ನೀಡಿತು. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 4,800 ಕೋಟಿ ರೂ ಹಣ ತಂದಿದ್ದೇನೆ. ಆದರೆ ಈಗಿನ ಸರ್ಕಾರ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ನಾನು ಆಯ್ಕೆಯಾದ ನಂತರ ಕೇಂದ್ರ ಘೋಷಿಸಿರುವ 5,300 ಕೋಟಿ ರೂ. ಅನುದಾನ ತಂದಿದ್ದೇನೆ. 2013ರಿಂದ 2018ರವರೆಗೆ ಸಿಎಂ ಆಗಿ ಸಿದ್ದರಾಮಯ್ಯ ಈ ಯೋಜನೆಗೆ ಹೆಚ್ಚಿನ ಹಣ ಮೀಸಲಿಟ್ಟಿಲ್ಲ.

Q

ಚಿತ್ರದುರ್ಗದಲ್ಲಿ ನಿಮ್ಮ ಬಗ್ಗೆ ಯಾವ ಅಭಿಪ್ರಾಯವಿದೆ?

A

ಇಲ್ಲಿಗೆ ಬಂದಾಗ ಆರಂಭದಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ಜನ ನನ್ನನ್ನು ಚೆನ್ನಾಗಿ ಸ್ವೀಕರಿಸುತ್ತಿದ್ದಾರೆ. ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ.

Q

ರಾಜ್ಯದ ಬಿಜೆಪಿ ಸಂಸದರು ಮೋದಿಯವರೊಂದಿಗೆ ಮಾತನಾಡಿಲ್ಲ, ಕರ್ನಾಟಕಕ್ಕಾಗಿ ಕೆಲಸ ಮಾಡಿಲ್ಲ ಎಂಬ ಆರೋಪವಿದೆಯಲ್ಲ...

A

ಪ್ರಧಾನಿಗೆ ಹೆಚ್ಚು ಬಿಡುವಿಲ್ಲ. ಸಂಸದರಾಗಿ, ನೀವು ನಿಮ್ಮ ಪ್ರಸ್ತಾವನೆಯನ್ನು ಲಿಖಿತವಾಗಿ ಪ್ರಧಾನ ಮಂತ್ರಿಗೆ ನೀಡಬೇಕು, ನಂತರ ನೀವು ಹಣವನ್ನು ಪಡೆಯುತ್ತೀರಿ. ನಮ್ಮ ಸಂಸದರು ಚೆನ್ನಾಗಿ ಮಾತನಾಡಿ ಪ್ರಸ್ತಾವನೆ ಸಲ್ಲಿಸಿದ್ದರಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂ. ಹರಿದು ಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com