ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ರಾಜಧರ್ಮದಲ್ಲಿ ನಂಬಿಕೆಯಿದೆ, ಸಂವಿಧಾನ- ಕಾನೂನಿನ ಮುಂದೆ ನಾನು ಸಾಮಾನ್ಯ ಮನುಷ್ಯ: ಯದುವೀರ್ (ಸಂದರ್ಶನ)

ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ರಾಜಕೀಯ ಪಯಣ, ವೈಯಕ್ತಿಕ ಮೌಲ್ಯಗಳು, ಮೈಸೂರಿನ ಬಗ್ಗೆ ಇರುವ ದೂರದೃಷ್ಟಿ ಮತ್ತು ಸಮಗ್ರ ಅಭಿವೃದ್ಧಿಯ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Q

ನಿಮ್ಮ ತಂದೆ ನಾಲ್ಕು ಅವಧಿಗೆ ಕಾಂಗ್ರೆಸ್ ಸಂಸದರಾಗಿದ್ದರು, ಆದರೆ ನೀವು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೀರಿ. ಕಾಂಗ್ರೆಸ್ ಕೂಡ ನಿಮಗೆ ಟಿಕೆಟ್ ನೀಡುವಂತೆ ಸಂಪರ್ಕಿಸಿದೆ ಎನ್ನಲಾಗಿದೆ, ನೀವು ಬಿಜೆಪಿ ಆಯ್ಕೆ ಮಾಡಲು ಕಾರಣವೇನು?

A

ನನ್ನ ತಂದೆ 4 ಬಾರಿ ಸಂಸದರಾಗಿದ್ದರು, ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್‌ಗಳಲ್ಲಿ ತಲಾ ಒಂದು ಬಾರಿ ಸೋತಿದ್ದರು. ಆದರೆ, ನನ್ನ ಮೌಲ್ಯಗಳು, ತತ್ವಗಳು ಮತ್ತು ದೃಷ್ಟಿಕೋನಕ್ಕೆ ಅನುಗುಣವಾಗಿ ಬಿಜೆಪಿ ಆಯ್ಕೆ ಮಾಡಿಕೊಂಡಿರುವುದು ನನ್ನ ವೈಯಕ್ತಿಕ ನಿರ್ಧಾರ. ಪ್ರಧಾನಿ ನರೇಂದ್ರ ಮೋದಿಯವರ ಪರಿವರ್ತನಾಶೀಲ ನಾಯಕತ್ವವನ್ನು ನಾನು ಮೆಚ್ಚುತ್ತೇನೆ.

Q

ಈ ಚುನಾವಣೆಯನ್ನು ರಾಜಮನೆತನದ ಸದಸ್ಯರು ಮತ್ತು ಸಾಮಾನ್ಯರ ನಡುವಿನ ಹೋರಾಟ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಇದನ್ನು ನೀವು ಹೇಗೆ ಪರಿಹರಿಸುತ್ತೀರಿ ಅಥವಾ ಹೇಗೆ ನಿರಾಕರಿಸುತ್ತೀರಿ?

A

ನಾನು ಯಾವುದನ್ನೂ ನಿರಾಕರಿಸಲು ಬಯಸುವುದಿಲ್ಲ. ನಾನು ನನ್ನ ಹಿನ್ನೆಲೆಯನ್ನು ಮರೆಮಾಚುತ್ತಿಲ್ಲ. ನನ್ನ ಕುಟುಂಬ ಬಹಳ ಒಳ್ಳೆಯ ಕೆಲಸ ಮಾಡಿದೆ, ಭಾರತದಲ್ಲಿ ರಾಜಪ್ರಭುತ್ವದ ಕಲ್ಪನೆ ವಿಭಿನ್ನವಾಗಿದೆ. ಇದು ರಾಜಧರ್ಮವಾಗಿದೆ ನಾಯಕತ್ವಕ್ಕೆ ತತ್ವಗಳು ಬಹಳ ಅಧಿಕೃತವಾಗಿವೆ. ನಾವು ಈ ತತ್ವಗಳನ್ನು ಪ್ರಸ್ತುತ ಪ್ರಜಾಪ್ರಭುತ್ವ ಸಂಸ್ಥೆಯೊಂದಿಗೆ ಸಕಾರಾತ್ಮಕ ರೀತಿಯಲ್ಲಿ ಮುನ್ನಡೆಸುತ್ತೇವೆ. ನಾನು ಕೂಡ ಸಂವಿಧಾನ ಮತ್ತು ಕಾನೂನಿನ ಮುಂದೆ ಸಾಮಾನ್ಯ ಮನುಷ್ಯ. ಜನರಿಗೆ ಎಲ್ಲಾ ವಿಷಯಗಳ ಬಗ್ಗೆ ತಿಳಿದಿದೆ.

Q

ಜಾತಿಯ ರೇಖೆಗಳನ್ನು ಮೀರಿ, ಜನರು ರಾಜಮನೆತನದ ಸದಸ್ಯರನ್ನು ಆಯ್ಕೆ ಮಾಡಿದ್ದರು, ಆದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಒಮ್ಮೆ ಬಿಜೆಪಿ ಟಿಕೆಟ್‌ನಲ್ಲಿ ಸೋತಿದ್ದರು. ಇದು ನಿಮಗೆ ಅಡ್ಡಿಯಾಗಬಹುದೇ?

A

ಯಾವುದೇ ಅಡ್ಡಿಯಿಲ್ಲ, ಆ ಚುನಾವಣೆಯಲ್ಲಿ ಶ್ರೀಕಂಠದತ್ತ ಒಡೆಯರ್ ಸೋಲಲು ಹಲವು ಅಂಶಗಳು ಕಾರಣವಾಗಿದ್ದವು. ಈಗ ಅಂತಹ ಅಂಶಗಳಿಲ್ಲ. ಪ್ರಧಾನಿ ಮತ್ತು ಕೇಂದ್ರ ನಾಯಕತ್ವದ ಪ್ರಭಾವ ಅದ್ಭುತವಾಗಿದೆ. ಅವರು ಒಬಿಸಿ ಮತ್ತು ದಲಿತರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ. ಬಿಜೆಪಿ ಎಲ್ಲರನ್ನೂ ಸಮಾನವಾಗಿ ನೋಡುತ್ತಿದೆ ಮತ್ತು ಉತ್ತಮ ಭಾರತವನ್ನು ಸದೃಢಗೊಳಿಸಲು ಎಲ್ಲರನ್ನೂ ಒಟ್ಟಿಗೆ ಸೇರಿಸುತ್ತಿದೆ.

Q

ಕಾಂಗ್ರೆಸ್‌ಗೆ ಒಕ್ಕಲಿಗ ಬೆಂಬಲವಿದೆ, ವಿರೋಧ ಪಕ್ಷದ ಮೈತ್ರಿಯನ್ನು ಹೇಗೆ ಎದುರಿಸುತ್ತೀರಿ?

A

ನಾವೆಲ್ಲರೂ ಒಂದು ಸಮಾಜ, ಒಂದು ರಾಜ್ಯ ಮತ್ತು ಒಂದು ದೇಶದಲ್ಲಿ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ನಾನು ನಂಬುತ್ತೇನೆ, ಆದರೆ ವೈಯಕ್ತಿಕ ಸಾಮರ್ಥ್ಯದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಸಮುದಾಯ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರ ಬಳಿ ಹೋಗುತ್ತಿದ್ದೇನೆ. ನಾನು ಮೈಸೂರಿನ ಬಿಷಪ್, ಸರ್ ಖಾಜಿ ಮತ್ತು ಎಲ್ಲಾ ಮಠಾಧೀಶರನ್ನು ಭೇಟಿ ಮಾಡಿದ್ದೇನೆ.

Q

ನಿಮ್ಮ ಕುಟುಂಬ ಪರಂಪರೆಯ ಸಂರಕ್ಷಣೆಯ ಬಗ್ಗೆ ಧ್ವನಿಯೆತ್ತಿದೆ, ನೀವು ಇದನ್ನು ಮುಂದುವರಿಸುತ್ತೀರಾ?

A

ಅದು ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿರುತ್ತದೆ. ನಾನು ಸದ್ಯ ಮಾಲೀಕತ್ವದ ಬಗ್ಗೆ ಚರ್ಚಿಸುತ್ತೇನೆ ಮತ್ತು ಭವಿಷ್ಯದ ಪೀಳಿಗೆಯು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ಮರುಸ್ಥಾಪಿಸಿ ಅದರೊಂದಿಗೆ ಮುಂದುವರಿಯುತ್ತೇನೆ.

Q

ಆಯ್ಕೆಯಾದರೆ, ಮೈಸೂರಿನ ಬಗ್ಗೆ ನಿಮ್ಮ ದೃಷ್ಟಿ ಏನು ಮತ್ತು ಮೈಸೂರು-ಕೊಡಗಿಗೆ ನೀವು ಏನು ನೀಡಬಹುದು?

A

ಸಾವಯವ ಅಭಿವೃದ್ಧಿ ಪ್ರಮುಖ ಅಂಶ, ಮೈಸೂರು ಮತ್ತು ಕೊಡಗು ಎರಡೂ ಪ್ರಾಥಮಿಕವಾಗಿ ಕೃಷಿ ಮತ್ತು ಪ್ರವಾಸೋದ್ಯಮವನ್ನು ಅವಲಂಬಿಸಿವೆ. ಮೈಸೂರಿನಲ್ಲಿ ಅಕ್ಕಿ, ರಾಗಿ, ಕೊಡಗಿನಲ್ಲಿ ಕಾಫಿಗೆ ಸರಿಯಾದ ಪುಷ್ಟಿ ನೀಡಬೇಕು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಯವರ ದೂರದೃಷ್ಟಿಯನ್ನು ನಾನು ಬೆಂಬಲಿಸುತ್ತೇನೆ. ಪರ್ಯಾಯ ಕೃಷಿಯನ್ನು ಸುಧಾರಿಸುವತ್ತ ಗಮನಹರಿಸುತ್ತೇನೆ. ಹೆಚ್ಚಿನ ಸಾಮರ್ಥ್ಯ ಹೊಂದಿರುವ ಮೈಸೂರು ಮತ್ತು ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಬಲಪಡಿಸುತ್ತೇನೆ.

Q

ಮೈಸೂರಿನಲ್ಲಿ ಹೆಚ್ಚಿನ ಬಂಡವಾಳ ಡಿಕೆ ಆಗುತ್ತಿಲ್ಲವಲ್ಲ....

A

ಕೈಗಾರಿಕೆಗಳಿಗೆ ಮೈಸೂರಿನಲ್ಲಿ ದೊಡ್ಡ ಉತ್ತೇಜನದ ಅಗತ್ಯವಿದೆ. ಸ್ಥಿರವಾದ ಆರ್ಥಿಕ ಚಾಲನೆ ನೀಡುವ ಅಗತ್ಯವಿದೆ. ಮೈಸೂರಿನಲ್ಲಿ ಕೈಗಾರಿಕೆಗಳು ಉತ್ತಮ ಸಾಮರ್ಥ್ಯ ಹೊಂದಿವೆ. ನಾನು ಸುಸ್ಥಿರ ಕೈಗಾರಿಕೆಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತೇನೆ ಮತ್ತು ಐಟಿ ವಿಷಯದಲ್ಲಿ, ನಾವು ಬೆಂಗಳೂರಿಗೆ ಆಧಾರ ಸ್ತಂಭವಾಗಬಲ್ಲೆವು. ಇದೇ ರೀತಿಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಅದರ ಒತ್ತಡವನ್ನು ಕಡಿಮೆ ಮಾಡಬಹುದು. ಆಹಾರ ತಂತ್ರಜ್ಞಾನ, ಸೈಬರ್ ಭದ್ರತೆ, ಅಗ್ರಿಟೆಕ್ ಮೇಲೆ ಗಮನಹರಿಸಬೇಕು.

Q

ನಿಮ್ಮನ್ನು ಸಂಪರ್ಕಿಸುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಈ ಊಹಾಪೋಹಗಳನ್ನು ನೀವು ಹೇಗೆ ಪರಿಹರಿಸುತ್ತೀರಿ?

A

ನಾನು ಈಗಾಗಲೇ ಕಚೇರಿಯನ್ನು ಸ್ಥಾಪಿಸಿದ್ದೇನೆ. ಜನರು ನನ್ನನ್ನು ಸಂಪರ್ಕಿಸಲು ಮೈಸೂರು ಮತ್ತು ಕೊಡಗಿನಲ್ಲಿ ಸರ್ಕಾರಿ ಸೌಲಭ್ಯಗಳಿವೆ, ಅವರು ಅಲ್ಲಿ ನನ್ನನ್ನು ಭೇಟಿಯಾಗಬಹುದು. ನಾನು ಉತ್ತಮ ಸಿಬ್ಬಂದಿಯನ್ನು ಹೊಂದಿದ್ದೇನೆ ಮತ್ತು ಸಂಸದರ ಕಚೇರಿಯು ಅವರ ಕುಂದುಕೊರತೆಗಳನ್ನು ನಿವಾರಿಸುವಂತೆ ಖಂಡಿತವಾಗಿಯೂ ನೋಡಿಕೊಳ್ಳುತ್ತೇನೆ.

ಸಂದರ್ಶನ: ಕೆ. ಶಿವಕುಮಾರ್ ಮತ್ತು ಕೆ.ಕೆ ಕಾರ್ತಿಕ್

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

Related Stories

No stories found.

Advertisement

X
Kannada Prabha
www.kannadaprabha.com