ಯಾವುದೇ ಪ್ರಾಕ್ಟಿಕಲ್ ಜ್ಞಾನ ಇಲ್ಲದ ವ್ಯಕ್ತಿ: ರಾಹುಲ್ ವಿರುದ್ಧ ದೇವೇಗೌಡ ವಾಗ್ದಾಳಿ

ಯಾವುದೇ ಪ್ರಾಕ್ಟಿಕಲ್ ಜ್ಞಾನವಿಲ್ಲದವರು ಮಾತ್ರ ಆ ರೀತಿ ಮಾತನಾಡಲು ಸಾಧ್ಯ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿರುದ್ಧ ಬುಧವಾರ ಕಟುವಾಗಿ ಟೀಕಿಸಿದ್ದಾರೆ.
ಎಚ್ ಡಿ ದೇವೇಗೌಡ - ರಾಹುಲ್ ಗಾಂಧಿ
ಎಚ್ ಡಿ ದೇವೇಗೌಡ - ರಾಹುಲ್ ಗಾಂಧಿ

ಬೆಂಗಳೂರು: ಯಾವುದೇ ಪ್ರಾಕ್ಟಿಕಲ್ ಜ್ಞಾನವಿಲ್ಲದವರು ಮಾತ್ರ ಆ ರೀತಿ ಮಾತನಾಡಲು ಸಾಧ್ಯ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿರುದ್ಧ ಬುಧವಾರ ಕಟುವಾಗಿ ಟೀಕಿಸಿದ್ದಾರೆ.

ಯಾವುದೇ ಕಾರಣಕ್ಕೂ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ಖಚಿತವಾಗಿರುವ ಪಕ್ಷ ಮಾತ್ರ ಈ ರೀತಿ ಅನೇಕ ಭರವಸೆಗಳನ್ನು ನೀಡಬಲ್ಲದು ಎಂದು 90 ವರ್ಷದ ಮಾಜಿ ಪ್ರಧಾನಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಲೇವಡಿ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, "ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದೆ. ಆದರೆ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಖಚಿತವಾಗಿ ಗೊತ್ತಿರುವ ಏಕೈಕ ಪಕ್ಷ ಮಾತ್ರ ಇಷ್ಟು ಭರವಸೆ ನೀಡುತ್ತದೆ" ಎಂದರು.

ಕಾಂಗ್ರೆಸ್ ಈ ದೇಶವನ್ನು "ತಲೆಕೆಳಗಾಗಿ" ಮಾಡಲು ಬಯಸುತ್ತಿದೆ ಮತ್ತು ಅದು ನೀಡಿದ ಯಾವುದೇ ಭರವಸೆಗಳು ಈಡೇರಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ಸಂಪತ್ತು ಸಮೀಕ್ಷೆ ಮಾಡಿ, ಮರು ಹಂಚಿಕೆ ಮಾಡಲು ಬಯಸುತ್ತಿದ್ದಾರೆ. ಅವರು ತಮ್ಮನ್ನು ತಾವು ಮಾಸ್ ಲೀಡರ್ ಎಂದು ಭಾವಿಸಿದ್ದಾರೆಯೇ? ಎಂದು ದೇವೇಗೌಡರು ಪ್ರಶ್ನಿಸಿದರು.

ಎಚ್ ಡಿ ದೇವೇಗೌಡ - ರಾಹುಲ್ ಗಾಂಧಿ
ಡಾ.ಮಂಜುನಾಥ್ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಲು ಮೋದಿ ಮತ್ತು ಅಮಿತ್ ಶಾ ಉತ್ಸುಕ: ಹೆಚ್ ಡಿ ದೇವೇಗೌಡ

ರಾಹುಲ್ ಗಾಂಧಿ ಕ್ರಾಂತಿಯ ಕನಸು ಕಾಣುತ್ತಿದ್ದಾರೆ. ಸಂಪತ್ತು ಮರುಹಂಚಿಕೆ ಬಗ್ಗೆ ಮಾತನಾಡುವ ಮೂಲಕ, ಮಾರುಕಟ್ಟೆ ಸುಧಾರಣೆಗಳನ್ನು ತಂದು ರಾಷ್ಟ್ರದ ಸಂಪತ್ತನ್ನು ಹೆಚ್ಚಿಸಿದ ಇಬ್ಬರು ಕಾಂಗ್ರೆಸ್ ಪ್ರಧಾನಿಗಳನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ" ಎಂದು ಪಿವಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ದೇವೇಗೌಡರು ಸ್ಮರಿಸಿದರು.

ಕಾಂಗ್ರೆಸ್ ಪ್ರಣಾಳಿಕೆ ನ್ಯಾಯ ಪತ್ರದಿಂದ ಕೆಲವು ಅಂಶಗಳನ್ನು ಪ್ರಸ್ತಾಪಿಸಿದ ದೇವೇಗೌಡರು, ರಾಹುಲ್ ಗಾಂಧಿ ಅವರು 30 ಲಕ್ಷ ಹೊಸ ಕೇಂದ್ರ ಸರ್ಕಾರಿ ಉದ್ಯೋಗಗಳನ್ನು ನೀಡುವ ಭರವಸೆ ನೀಡಿದ್ದಾರೆ. ಆದರೆ "ಕೇವಲ 40 ಲಕ್ಷ ಉದ್ಯೋಗಗಳು ಮಂಜೂರಾಗಿವೆ. ಅವರು ರಾತ್ರೋರಾತ್ರಿ 30 ಲಕ್ಷ ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತಾರೆ? ಆ ಜನರಿಗೆ ಎಷ್ಟು ಸಂಬಳ ನೀಡುತ್ತಾರೆ? ಅವರು ಎಲ್ಲಿ ಕೆಲಸ ಮಾಡುತ್ತಾರೆ" ಎಂದು ಮಾಜಿ ಪ್ರಧಾನಿ ಪ್ರಶ್ನಿಸಿದರು.

"ಯಾವುದೇ ಪ್ರಾಯೋಗಿಕ ಜ್ಞಾನವಿಲ್ಲದವರು ಮಾತ್ರ ಈ ರೀತಿ ಮಾತನಾಡಬಲ್ಲರು. ಪಿ ಚಿದಂಬರಂ ಅವರು ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದರು. ಅವರು ರಾಹುಲ್ ಗಾಂಧಿಯವರ ಅಪಕ್ವ ಆರ್ಥಿಕ ವಿಚಾರಗಳನ್ನು ಒಪ್ಪುತ್ತಾರೆಯೇ?" ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com