'ವ್ಯಕ್ತಿ' ಮತ್ತು 'ವ್ಯಕ್ತಿತ್ವ' ಮಧ್ಯೆ ಮತದಾರರಿಗೆ ಪರೀಕ್ಷೆ: ಹೈವೋಲ್ಟೇಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ

ತಳಮಟ್ಟದಿಂದ ಬೆಳೆದು ಬಂದ ವೃತ್ತಿಪರ ರಾಜಕಾರಣಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ, ಪ್ರಭಾವಿ ಡಿ.ಕೆ.ಸುರೇಶ್ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸುವ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ, ಖ್ಯಾತ ಹೃದ್ರೋಗ ತಜ್ಞ ಹಾಗೂ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ರಾಜಕೀಯಕ್ಕೆ ಹೊಸಬರು.
ಡಿ ಕೆ ಸುರೇಶ್, ಡಾ ಮಂಜುನಾಥ್
ಡಿ ಕೆ ಸುರೇಶ್, ಡಾ ಮಂಜುನಾಥ್

ಬೆಂಗಳೂರು: ಬಿಸಿಲಿನ ಬೇಗೆಯ ನಡುವೆಯೂ ಈ ಬಾರಿ ಕರ್ನಾಟಕದ ಹೈವೋಲ್ಟೇಜ್ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರು ಚುರುಕಿನಿಂದ ಮತ ಚಲಾಯಿಸಿದರು. ಚುನಾವಣೆಯನ್ನು ಹಬ್ಬಕ್ಕೆ ಹೋಲಿಸಿ, ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸ್ಥಳೀಯ ಮುಖಂಡರು ದೂರದ ಊರುಗಳಲ್ಲಿ ನೆಲೆಸಿರುವ ಗ್ರಾಮ ಮತ್ತು ಪಟ್ಟಣಗಳ ಮತದಾರರಿಗೆ ಬಂದು ಮತ ಚಲಾಯಿಸುವಂತೆ ಆಹ್ವಾನಿಸುತ್ತಿರುವುದು ಕಂಡುಬಂತು. ಈ ಮೂಲಕ ತಮ್ಮ ಅಭ್ಯರ್ಥಿಯ ಗೆಲುವಿಕೆಗೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆ.

ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ನೋಡುವುದಾದರೆ ಇಲ್ಲಿ ‘ವ್ಯಕ್ತಿ ಅಥವಾ ವ್ಯಕ್ತಿತ್ವ’ವನ್ನು ಆಯ್ಕೆ ಮಾಡಲು ಮತದಾರರಿಗೆ ಪರೀಕ್ಷೆಯಾಗಿತ್ತು. ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಮತ್ತು ಬಿಜೆಪಿಯ ಡಾ.ಸಿ.ಎನ್.ಮಂಜುನಾಥ್ ಕಣದಲ್ಲಿದ್ದಾರೆ. ಮತದಾರರು ತಮ್ಮ ಹಕ್ಕು ಚಲಾಯಿಸಲು ಹಳ್ಳಿಗಳಲ್ಲಿಯೂ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸಿದ್ದು ಕಂಡುಬಂತು.

ತಳಮಟ್ಟದಿಂದ ಬೆಳೆದು ಬಂದ ವೃತ್ತಿಪರ ರಾಜಕಾರಣಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ, ಪ್ರಭಾವಿ ಡಿ.ಕೆ.ಸುರೇಶ್ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸುವ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ, ಖ್ಯಾತ ಹೃದ್ರೋಗ ತಜ್ಞ ಹಾಗೂ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ರಾಜಕೀಯಕ್ಕೆ ಹೊಸಬರು. ಆದರೆ ಅವರು ಸಮಾಜದಲ್ಲಿ ತಮ್ಮ ಸೇವೆಯ ಮೂಲಕ ಅಸಂಖ್ಯಾತ ಜನರ ಹೃದಯದಲ್ಲಿ ಸ್ಥಾನ ಪಡೆದ ಅಪರೂಪದ ವ್ಯಕ್ತಿಯಾಗಿ ಕಾಣುತ್ತಾರೆ. ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಂಜುನಾಥ್ ಹಾಲಿ ಸಂಸದ ಡಿ.ಕೆ.ಸುರೇಶ್‌ಗೆ ಕಠಿಣ ಕೌಂಟರ್‌ ನೀಡಿದ್ದಾರೆ.

ನಾವು ವಿಧಾನಸಭೆ ಮತ್ತು ಇತರ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ನ್ನು ಬೆಂಬಲಿಸುತ್ತೇವೆ, ಆದರೆ ಸಂಸತ್ ಚುನಾವಣೆಯಲ್ಲಿ ಡಿಕೆ ಸುರೇಶ್ ಅವರಿಗೆ ಮತ ನೀಡುತ್ತೇವೆ,ಅವರು ಸ್ಥಳೀಯವಾಗಿ ಲಭ್ಯವಿರುವ ಪ್ರಬಲ ವ್ಯಕ್ತಿ ಎಂದು ಬೆಂಗಳೂರು ಗ್ರಾಮಾಂತರ ಸಂಸದೀಯ ವ್ಯಾಪ್ತಿಗೆ ಒಳಪಡುವ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮತದಾರರ ಮುಜಾಹಿದ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com