ಆನಂದಯ್ಯ ಗಡ್ಡದೇವರಮಠ
ಆನಂದಯ್ಯ ಗಡ್ಡದೇವರಮಠ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಪರವಾಗಿದೆ, ಗೆಲುವು ಖಚಿತ: ಆನಂದಯ್ಯ ಗಡ್ಡದೇವರಮಠ (ಸಂದರ್ಶನ)

Published on

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿಯ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ನ ಆನಂದಯ್ಯ ಗಡ್ಡದೇವರಮಠ ಕಣಕ್ಕಿಳಿದಿದ್ದಾರೆ. ತಮ್ಮ ಪರ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೆಲಸ ಮಾಡುತ್ತವೆ ಎಂದಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಖಾತರಿಗಳು ನನ್ನ ಪರವಾಗಿ ಕೆಲಸ ಮಾಡುತ್ತಿವೆ ಏಕೆಂದರೆ ಅವೆಲ್ಲವನ್ನೂ ವಿವೇಚನೆಯಿಂದ ಜಾರಿಗೊಳಿಸಲಾಗಿದೆ ಮತ್ತು ಹೆಚ್ಚಿನ ಅರ್ಹ ಫಲಾನುಭವಿಗಳು ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಹೀಗಾಗಿ ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Q

ನಿಮ್ಮ ಪ್ರಚಾರ ಹೇಗೆ ನಡೆಯುತ್ತಿದೆ?

A

ನನ್ನ ಪ್ರಚಾರ ಅಭಿಯಾನಕ್ಕೆ ಸಮಾಜದ ಎಲ್ಲ ವರ್ಗಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಪಕ್ಷಕ್ಕೆ ಏಳು ಶಾಸಕರಿರುವುದರಿಂದ ಪಕ್ಷದ ಕಾರ್ಯಕರ್ತರೊಂದಿಗೆ ಶ್ರಮಿಸುತ್ತಿದ್ದಾರೆ. ನಾವು ಬೂತ್-ಟು-ಬೂತ್ ಮತ್ತು ಮನೆ-ಮನೆಗೆ ಹೋಗುತ್ತೇವೆ. ನಾವು ಮತದಾರರನ್ನು ಅವರ ಮನೆ ಬಾಗಿಲಿಗೆ ತೆರಳುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Q

ಪ್ರಚಾರದ ಪ್ರಮುಖ ಸಮಸ್ಯೆಗಳು ಯಾವುವು?

A

ನಾವು ಯಾವುದೇ ನಿರ್ದಿಷ್ಟ ವಿಷಯವನ್ನು ಮತದಾರರೊಂದಿಗೆ ಚರ್ಚಿಸುತ್ತಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಿಂತ ಹೆಚ್ಚಾಗಿ ಅವುಗಳಿಗೆ ಪರಿಹಾರವನ್ನು ಪ್ರಸ್ತಾಪಿಸುತ್ತಿದ್ದೇವೆ. ಆದರೆ, ಹಾವೇರಿ ಮತ್ತು ಗದಗ ಎರಡೂ ಜಿಲ್ಲೆಗಳ ಅಭಿವೃದ್ಧಿಯತ್ತ ನಮ್ಮ ಗಮನವಿದೆ. ಕಾಂಗ್ರೆಸ್ ಪ್ರಣಾಳಿಕೆ ಈಗಾಗಲೇ ಹೊರಬಿದ್ದಿರುವುದರಿಂದ ಮಹಿಳೆಯರು, ವಿದ್ಯಾರ್ಥಿಗಳಿಗೆ ನಗದು ಲಾಭ ಮತ್ತು ಕೃಷಿ ಸಾಲ ಮನ್ನಾ ಮುಂತಾದ ಭರವಸೆಗಳನ್ನು ನೀಡಲಾಗಿದೆ. ನಾವು ಈ ಸಂಭವನೀಯ ಪ್ರಯೋಜನಗಳನ್ನು ಮತದಾರರಿಗೆ ತಿಳಿಸುತ್ತಿದ್ದೇನೆ.

Q

ಕ್ಷೇತ್ರ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

A

ನಮಗೆ ಶಾಶ್ವತ ನೀರಾವರಿ ಸೌಲಭ್ಯ ಬೇಕು. ಸಿಂಗಟಾಲೂರು ಏತ ನೀರಾವರಿ ಸೌಲಭ್ಯ ಸೇರಿದಂತೆ ಹಲವು ನೀರಾವರಿ ಯೋಜನೆಗಳು ಕಳೆದ ಹಲವು ವರ್ಷಗಳಿಂದ ಬಾಕಿ ಉಳಿದಿವೆ. ಅಲ್ಲದೇ ಹಿರೇಕೆರೂರಿನಲ್ಲಿ ಕುಮುದ್ವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸುವ ಪ್ರಸ್ತಾವನೆ ಇದೆ. ನಾವು ಅವುಗಳನ್ನು ಕಾರ್ಯಗತಗೊಳಿಸಬೇಕಾಗಿದೆ. ಗದಗ-ಯಲವಗಿ, ರಾಣೆಬೆನ್ನೂರು-ಶಿವಮೊಗ್ಗ, ಮುಂಡರಗಿ-ಹರಪನಹಳ್ಳಿ ಮತ್ತು ಇನ್ನೂ ಕೆಲವು ಹೊಸ ಹಳಿಗಳ ನಡುವೆ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು. ಈ ಯೋಜನೆಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು. ಬ್ಯಾಡಗಿ-ಮೆಣಸಿನಕಾಯಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಹತ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದ, ಈ ಉತ್ಪನ್ನಕ್ಕೆ ಕೈಗಾರಿಕೆಗಳು ಮೌಲ್ಯವನ್ನು ಒದಗಿಸಬೇಕೆಂದು ನಾನು ಬಯಸುತ್ತೇನೆ. ಗಮನಹರಿಸಬೇಕಾದ ಇತರ ಕ್ಷೇತ್ರಗಳೆಂದರೆ ಆಹಾರ ಸಂಸ್ಕರಣಾ ಘಟಕಗಳಲ್ಲಿ ಹೂಡಿಕೆ ಮತ್ತು ರಾಣೆಬೆನ್ನೂರಿನಲ್ಲಿ ಮೆಕ್ಕೆ ಜೋಳದ ಕ್ಲಸ್ಟರ್, ತೈಲ ಗಿರಣಿಗಳು ಮತ್ತು ಸಕ್ಕರೆ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುವುದು. ಈ ಯೋಜನೆಗಳಿಂದ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಸುತ್ತದೆ.

Q

ಐದು ಗ್ಯಾರಂಟಿಗಳು ಪಕ್ಷಕ್ಕೆ ಹೇಗೆ ಸಹಾಯ ಮಾಡುತ್ತಿವೆ?

A

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ನನ್ನ ಪರವಾಗಿ ಕೆಲಸ ಮಾಡುತ್ತಿವೆ ಏಕೆಂದರೆ ಅವೆಲ್ಲವನ್ನೂ ವಿವೇಚನೆಯಿಂದ ಜಾರಿಗೊಳಿಸಲಾಗಿದೆ ಮತ್ತು ಹೆಚ್ಚಿನ ಅರ್ಹ ಫಲಾನುಭವಿಗಳು ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. 1-2% ಅಂತರವಿರಬಹುದು, ಆದರೆ ಅವುಗಳನ್ನು ಕಾರ್ಯಗತಗೊಳಿಸಲು ರಚಿಸಲಾದ ಸಮಿತಿಗಳು ಇದನ್ನು ತುಂಬಲು ಕಾಳಜಿ ವಹಿಸುತ್ತಿವೆ. ಜನ ಖುಷಿಯಾಗಿದ್ದಾರೆ. ಅಲ್ಲದೆ, ಈ ಯೋಜನೆಗಳು ಗ್ರಾಮಸ್ಥರಲ್ಲಿ ಹಣವನ್ನು ಉಳಿಸುವ ಭಾವನೆಯನ್ನು ಬೆಳೆಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com