
ಮೈಸೂರು: ಕೆಫೆ ಕಾಫಿ ಡೇ ಮಾಲೀಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಹೆಗಡೆ ಅವರ ಸಾವಿಗೆ ಡಿಕೆ ಶಿವಕುಮಾರ್‌ಅವರೇ ಕಾರಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸ್ಪೋಟಕ ಆರೋಪ ಮಾಡಿದ್ದಾರೆ.
ಶನಿವಾರ ಮೈಸೂರಿನಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ‘ಸಿದ್ದಾರ್ಥ ಆತ್ಮಹತ್ಯೆ ಗೆ ಕಾರಣ ಆಗಿದ್ದು ಯಾರು ಶಿವಕುಮಾರ್ ಅವರೇ..? ಅವರ ಆತ್ಮಹತ್ಯೆಗೆ ಕಾರಣ ಯಾರು ಅನ್ನೋದನ್ನ ಜನಗಳ ಮುಂದೆ ಇಡ್ತೀರಾ ಶಿವಕುಮಾರ್ ಅವರೇ..’ಎಂದು ಪ್ರಶ್ನಿಸಿದ್ದಾರೆ.
ನನ್ನ ಮಗನ ರಾಜಕೀಯ ಜೀವನಕ್ಕಾಗಿ ಅಣ್ಣನ ಮಗನನನ್ನ ಜೈಲಿಗೆ ಕಳಿಸಿದ್ದೇನೆ ಎಂದು ನೀವು ನನ್ನ ಮೇಲೆ ಆರೋಪ ಮಾಡಿದ್ದೀರಿ. ಆದರೆ, ಯಾವ ಎಸ್‌ಎಂ ಕೃಷ್ಣ, ಕೊತ್ವಾಲನ ಜೊತೆ ಜೀವನ ಮಾಡಿಕೊಂಡಿದ್ದ ನಿಮಗೆ ರಾಜಕೀಯ ಜೀವನ ಕೊಟ್ಟಿದ್ದರೋ, ರಾಜಕೀಯದಲ್ಲಿ ಬೆಳೆಸಿದ್ದೀರೋ ಅವರ ಮನೆಯನ್ನೇ ಹಾಳು ಮಾಡಿದ್ದೀರಿ’ ಎಂದು ಈ ಹೊಸದಾದ ಗಂಭೀರವಾದ ಆರೋಪ ಮಾಡಿದ್ದಾರೆ. ಕೃಷ್ಣ ಅವರು ಶಿವಕುಮಾರ್ ಅವರಿಗೆ ರಾಜಕೀಯ ಜೀವನವನ್ನು ನೀಡಿದ್ದಲ್ಲದೆ, ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ತಲುಪಲು ನೆರವಾದರು. “ಅವರ ಅಳಿಯ ಶಿವಕುಮಾರ್ ಅವರ ಆತ್ಮಹತ್ಯೆಗೆ ಯಾರು ಹೊಣೆ?ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮ್ಯಾನ್‌ಹೋಲ್ ಕ್ಯಾಪ್‌ಗಳನ್ನು ಕದ್ದು ಮಾರಿ ಜೀವನ ಸಾಗಿಸುತ್ತಿದ್ದವರು ಈಗ ನನ್ನ ಬಗ್ಗೆ, ನನ್ನ ತಂದೆ ಎಚ್‌ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ದೇವೇಗೌಡರ ಆಸ್ತಿ ಬಗ್ಗೆ ಶಿವಕುಮಾರ್ ಪ್ರಶ್ನೆ ಎತ್ತಿದ್ದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ತಂದೆ ಹೊಲದಲ್ಲಿ ಕೆಲಸ ಮಾಡಿದರೂ ಶಿವಕುಮಾರ್ ಶ್ರೀಮಂತನಾದದ್ದು ಹೇಗೆ? ದೇವೇಗೌಡರು ಡಿಪ್ಲೊಮಾ ಮುಗಿಸಿದ ನಂತರ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂದು ಟಾಂಗ್ ನೀಡಿದ್ದಾರೆ.
ಶಿವಕುಮಾರ್ ಅವರು ಅತ್ಯಂತ ಕುತಂತ್ರ ಮತ್ತು ಸೇಡಿನ ರಾಜಕಾರಣಿಯಾಗಿದ್ದು, ಸಿಡಿ ಹಗರಣದಲ್ಲಿ ಭವಾನಿ (ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ಅವರ ಪತ್ನಿ) ಅವರನ್ನು ಫಿಕ್ಸ್ ಮಾಡಿಸಿದ್ದಾರೆ. ರೇವಣ್ಣ ಅವರ ಇಬ್ಬರು ಪುತ್ರರು ಜೈಲು ಪಾಲಾಗುವಂತೆ ಮಾಡಿದ್ದಾರೆ. ಇಂತಹ ಪಿತೂರಿಗಳನ್ನು ಜನರು ನಂಬಬೇಕೇ? ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಬಂಡೆಯಂತೆ ನಿಲ್ಲುವ ಭರವಸೆ ನೀಡಿದ್ದರು ನಂತರ ಏನಾಯಿತು, ಈಗ ಸಿಎಂ ಸಿದ್ದರಾಮಯ್ಯ ಅವರಿಗೂ ಅಂತಹುದ್ದೇ ಅಶ್ವಾಸನೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
Advertisement