Mallikarjuna kharge and Siddaramaiah
ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ

ಮುಡಾ ಪ್ರಕರಣ: ಸಿದ್ದರಾಮಯ್ಯಗೆ 'ಕೈ' ನಾಯಕರ ಬೆಂಬಲ ಕೇವಲ ಕಣ್ಣೊರೆಸುವ ತಂತ್ರ? ಖರ್ಗೆಗೆ ಪಟ್ಟ ಕಟ್ಟಲು ತೆರೆಮರೆ ಕಸರತ್ತು!

ಆದರೆ ಯಾವುದೇ ಏಜೆನ್ಸಿಗಳು ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿದರೆ ಅಥವಾ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದರೆ ಆಗ ಸಿಎಂ ಅವರನ್ನು ಸಮರ್ಥಿಸಿಕೊಳ್ಳುವುದು ಕಾಂಗ್ರೆಸ್‌ಗೆ ಕಷ್ಟವಾಗುತ್ತದೆ.
Published on

ಕಲಬುರಗಿ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಪರಾಧಿ ಎಂದು ಸಚಿವ ಸಂಪುಟ, ಹೈಕಮಾಂಡ್ ಸೇರಿದಂತೆ ಇಡೀ ಕಾಂಗ್ರೆಸ್ ಸಂಪೂರ್ಣ ಬೆನ್ನಿಗೆ ನಿಂತಿದೆ. ಅವರಿಗೆ ಈಗ ಸಿಗುತ್ತಿರುವ ಬೆಂಬಲ ಗ್ಯಾರಂಟಿ ಇಲ್ಲ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನು ಬೆಂಬಲಿಸದಿದ್ದರೇ ತಪ್ಪು ಸಂಕೇತವನ್ನು ರವಾನಿಸುತ್ತದೆ ಎಂದರು. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿರುವುದು ನಿಜವಾದರೂ, ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯನವರನ್ನು ಆಹ್ವಾನಿಸಿ ವಿವರಣೆ ಕೇಳುವ ಅಥವಾ ನೋಟಿಸ್ ಅನ್ನು ಬಹಿರಂಗಗೊಳಿಸುವ ಅಗತ್ಯವಿಲ್ಲ, ಹೀಗಾಗಿ ಸಿಎಂ ರಾಜೀನಾಮೆ ನೀಡಬೇಕಿಲ್ಲ ಎಂದರು.

ಆದರೆ ಯಾವುದೇ ಏಜೆನ್ಸಿಗಳು ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿದರೆ ಅಥವಾ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದರೆ ಆಗ ಸಿಎಂ ಅವರನ್ನು ಸಮರ್ಥಿಸಿಕೊಳ್ಳುವುದು ಕಾಂಗ್ರೆಸ್‌ಗೆ ಕಷ್ಟವಾಗುತ್ತದೆ. ಈಗಾಗಲೇ, ವಿರೋಧ ಪಕ್ಷವಾದ INDIA ಅಂಗವಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರನ್ನು ಮುಂದುವರಿಸಲು ಕಾಂಗ್ರೆಸ್‌ಗೆ ಅವಕಾಶ ನೀಡಿದ್ದಕ್ಕಾಗಿ ಪ್ರಶ್ನಿಸಿದೆ. ಹಲವು ರಾಜ್ಯಗಳಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಲಿದ್ದು, ಪಕ್ಷವು ಅವರ ಪರವಾಗಿ ನಿಲ್ಲುವುದು ಕಷ್ಟ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂಬ ಚರ್ಚೆ ಈಗಾಗಲೇ ಪಕ್ಷದೊಳಗೆ ನಡೆದಿದೆ.

Mallikarjuna kharge and Siddaramaiah
ಸಿಎಂ ಹುದ್ದೆ ಕಳೆದುಕೊಳ್ಳುತ್ತಾರೆಯೇ ಸಿದ್ದರಾಮಯ್ಯ?: ಕಾಂಗ್ರೆಸ್ ನಲ್ಲಿ 'ಕುರ್ಚಿ' ರಾಜಕೀಯ ಆರಂಭ?

ಮಂಗಳವಾರ ಕಲಬುರಗಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕದಲ್ಲಿ ಇನ್ನೂ 10 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರಲಿದೆ ಎಂದು ಹೇಳಿದ್ದರೂ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಹೇಳಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಅಭ್ಯರ್ಥಿಯಾಗುವುದನ್ನು ಬೆಂಬಲಿಸುವುದಾಗಿ ಕಳೆದ ವರ್ಷ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧರಾಗಿದ್ದೀರಾ ಎಂಬ ಪ್ರಶ್ನೆಗೆ ಅವರು ಮುಗುಳ್ನಕ್ಕು ಸುಮ್ಮನಾದರು.

ಸಿದ್ದರಾಮಯ್ಯ ಅವರೇ ಮುಂದುವರಿದರೂ ಅಥವಾ ಶಿವಕುಮಾರ್ ಅಥವಾ ಪರಮೇಶ್ವರ್ ಸಿಎಂ ಆಗಿದ್ದರೂ ಉಳಿದ ಮೂರೂವರೆ ವರ್ಷಗಳ ಅವಧಿಗೆ ಕಾಂಗ್ರೆಸ್ ಸರ್ಕಾರ ಅಲುಗಾಡಲಿದೆ ಎಂದು ಮೂಲಗಳು ತಿಳಿಸಿವೆ.

ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿರೋಧಿಸದ ಕಾರಣ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡಿದರೆ ಖರ್ಗೆ ಅವರೇ ಪರ್ಯಾಯ ನಾಯಕ ಎಂಬುದಂತು ಸತ್ಯ. ಕೆಲ ವರ್ಷಗಳ ಹಿಂದೆ ಎಐಸಿಸಿ ಅಧ್ಯಕ್ಷರಾಗುವ ಮುನ್ನ ಖರ್ಗೆ ಅವರು ತಾವು ದಲಿತರು ಎಂಬ ಕಾರಣಕ್ಕೆ ಪಕ್ಷ ಸಿಎಂ ಸ್ಥಾನ ನೀಡಿದರೆ ಅದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com