ಬಿಜೆಪಿ ವಕ್ಫ್ ರ‍್ಯಾಲಿ: ಯತ್ನಾಳ್ ಅಭಿಯಾನದ ಬಳಿಕ ವಿಜಯೇಂದ್ರ ಶಕ್ತಿ ಪ್ರದರ್ಶನ

ವಿಜಯೇಂದ್ರ ಮತ್ತು ಯತ್ನಾಳ್ ನೇತೃತ್ವದ ಎರಡು ಬಣಗಳು ವಕ್ಫ್ ವಿವಾದದ ಕಿಚ್ಚಿನ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ವಿಜಯೇಂದ್ರ ನೇತೃತ್ವದ ಬಣ ಯತ್ನಾಳ್ ಪರ ಹೋರಾಟಕ್ಕೆ ಬಂದಿದ್ದವರು ಸೇರಿದಂತೆ ಬಿಜೆಪಿಯ ಎಲ್ಲ ನಾಯಕರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಯಿತು.
Vijayendra
ವಿಜಯೇಂದ್ರ ಮತ್ತಿತರರು
Updated on

ಬೀದರ್: ವಕ್ಫ್ ಮಂಡಳಿಯಿಂದ ರೈತರು ಮತ್ತು ಮಠಗಳ ಜಮೀನು ಕಬಳಿಕೆ ವಿರುದ್ಧದ 'ನಮ್ಮ ಭೂಮಿ ನಮ್ಮ ಹಕ್ಕು' ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಚಾಲನೆ ನೀಡಿದರು. ಬಿಜೆಪಿಯ ಹಿರಿಯ ನಾಯಕರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿರುವ ವಿಜಯೇಂದ್ರ, ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯಿಂದ ಅಭಿಯಾನ ಆರಂಭಿಸಿದರು.

ಕೆಲ ದಿನಗಳ ಹಿಂದೆ ವಿಜಯಪುರ ಸಂಸದ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಇದೇ ರೀತಿಯ ಅಭಿಯಾನ ಆರಂಭಿಸಿದ್ದರು. ವಿಜಯೇಂದ್ರ ಮತ್ತು ಯತ್ನಾಳ್ ನೇತೃತ್ವದ ಎರಡು ಬಣಗಳು ವಕ್ಫ್ ವಿವಾದದ ಕಿಚ್ಚಿನ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ವಿಜಯೇಂದ್ರ ನೇತೃತ್ವದ ಬಣ ಯತ್ನಾಳ್ ಪರ ಹೋರಾಟಕ್ಕೆ ಬಂದಿದ್ದವರು ಸೇರಿದಂತೆ ಬಿಜೆಪಿಯ ಎಲ್ಲ ನಾಯಕರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಯಿತು.

ಎರಡೂ ರ‍್ಯಾಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಕೂಡ ಉಪಸ್ಥಿತರಿದ್ದರು. ವಿಜಯೇಂದ್ರ, ಬಿ. ಶ್ರೀರಾಮುಲು ಮತ್ತು ರೇಣುಕಾಚಾರ್ಯ ಸೇರಿದಂತೆ ಬಹುತೇಕ ಯಾವುದೇ ಭಾಷಣಕಾರರು ಬೇರೆ ಯಾರೊಬ್ಬರ ವಿರುದ್ಧ ಮಾತನಾಡಲಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರವಲ್ಲದೆ ಬಿಜೆಪಿ ಹೈಕಮಾಂಡ್ ಗೂ ವಿಜಯೇಂದ್ರ ಅವರ ಶಕ್ತಿ ತೋರಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು.

ಬಿಎಸ್ ಯಡಿಯೂರಪ್ಪ ಅವರಿಗೆ ಜನ ರಾಜ ಹುಲಿ ಅಂತಾ ಕರೆಯುತ್ತಾರೆ. ಅವರ ಮಗ ಮರಿ ರಾಜಹುಲಿ ಎಂದು ಜನಪ್ರಿಯರಾಗಿದ್ದಾರೆ. ಅವರ ಸಾಮರ್ಥ್ಯವನ್ನು ವಯಸ್ಸಿಗೆ ಹೊಂದಾಣಿಕೆ ಮಾಡಬೇಡಿ ಆದರೆ, ಸಾಮರ್ಥ್ಯದಲ್ಲಿ ಒಬ್ಬ ಬಲಿಷ್ಠ ನಾಯಕ ಎಂಬುದನ್ನು ವಿಜಯೇಂದ್ರ ಸಾಬೀತುಪಡಿಸಿದ್ದಾರೆ. ಮುಡಾ ವಿವಾದವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

ಅನೇಕ ಕಾರಣಗಳಿಂದ ಉಪ ಚುನಾವಣೆಯಲ್ಲಿ ಪಕ್ಷ ಸೋತಿದ್ದು, ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ. ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದು, ವಿಜಯೇಂದ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶ್ರೀರಾಮುಲು ಹೇಳಿದರು. ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡಾ ಮಾತನಾಡಿದರು.

Vijayendra
ವಕ್ಫ್ ಆಸ್ತಿ ವಿವಾದ: JPC ಅಧ್ಯಕ್ಷರಿಗೆ ಯತ್ನಾಳ್ ಬಣದಿಂದ ವರದಿ ಸಲ್ಲಿಕೆ

ಕಲಬುರಗಿ ಜಿಲ್ಲೆಯಲ್ಲಿ ಒಣಹವೆಯಿಂದ 2 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ನಷ್ಟವಾಗಿರುವ ರೈತರ ನೆರವಿಗೆ ಬರುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಪರಿಹಾರ ನೀಡುವ ಬಗ್ಗೆ ಸರಕಾರ ಮಾತನಾಡಿಲ್ಲ. ಇತ್ತೀಚೆಗೆ ಯಡ್ರಾಮಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.

ರೈತರು ಮತ್ತು ಮಠಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಏಕೆ ಬಂತು ಎಂದು ಪ್ರಶ್ನಿಸಿದ ವಿಜಯೇಂದ್ರ, 1973-74ರ ಗೆಜೆಟ್ ನೋಟಿಫಿಕೇಶನ್ ಹಿಂಪಡೆಯುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com