ಪ್ರಾಮಾಣಿಕ CM ಬೇಕು ಎಂದರೆ ನನ್ನ ಹೆಸರೇ ಮೊದಲು ಬರುತ್ತದೆ; ಶಾಮನೂರು ಶಿವಶಂಕರಪ್ಪ ಡೇಟ್‌ expiry ಆಗಿದೆ: ಯತ್ನಾಳ್

ಭ್ರಷ್ಟಾಚಾರ ಅಥವಾ ಏನಾದರೂ ಹಗರಣ ಇದ್ದಿದ್ದರೆ ನನ್ನನ್ನ ಬಿಡ್ತಿದ್ರಾ? ಈ ಹಿಂದೆ ನನ್ನ ಮೇಲೂ ದಾಳಿ ಮಾಡಿಸಿದ್ದಾರೆ, ಗುಪ್ತಚರ ಇಲಾಖೆಯನ್ನೂ ಬಿಟ್ಟಿದ್ದರು. ಎಲ್ಲವನ್ನೂ ನೋಡಿದ್ರೂ ಏನೂ ಆಗಲಿಲ್ಲ.
Basanagouda Patil Yatnal
ಬಸನಗೌಡ ಪಾಟೀಲ ಯತ್ನಾಳ್
Updated on

ಬಾಗಲಕೋಟೆ: ನಾನೇಕೆ ಮುಖ್ಯಮಂತ್ರಿ ಆಗಬಾರದು. ನನ್ನಲ್ಲಿ ಏನು ಕೊರತೆ ಇದೆ. ಪ್ರಾಮಾಣಿಕರನ್ನು ಆಯ್ಕೆ ಮಾಡಲು ಮುಂದಾದರೆ ಅಥವಾ ಒಳ್ಳೆಯ ಮನುಷ್ಯ ಬೇಕೆಂದು ದೇವರು ಆದೇಶಿಸಿದರೆ, ನನ್ನ ಹೆಸರು ಮೊದಲು ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವಣ್ಣನ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ಷೇಪ ವ್ಯಕ್ತಪಡಿಸಿದರು.ಶಾಮನೂರು ಶಿವಶಂಕರಪ್ಪನವರ ಡೇಟ್‌ ಎಕ್ಸ್‌ಪೈರಿ ಆಗಿದೆ ಎಂದರು. ಭ್ರಷ್ಟಾಚಾರ ಅಥವಾ ಏನಾದರೂ ಹಗರಣ ಇದ್ದಿದ್ದರೆ ನನ್ನನ್ನ ಬಿಡ್ತಿದ್ರಾ? ಈ ಹಿಂದೆ ನನ್ನ ಮೇಲೂ ದಾಳಿ ಮಾಡಿಸಿದ್ದಾರೆ, ಗುಪ್ತಚರ ಇಲಾಖೆಯನ್ನೂ ಬಿಟ್ಟಿದ್ದರು. ಎಲ್ಲವನ್ನೂ ನೋಡಿದ್ರೂ ಏನೂ ಆಗಲಿಲ್ಲ. ಅದಕ್ಕೆ ಸುಮ್ಮನೆ ಕೂತಿದ್ದಾರೆ ಅಷ್ಟೇ. ನನ್ನ ಮೇಲೆ ಆ ಭಗವಂತನ ಕೃಪೆ ಇದೆ, ಜನರ ಶಕ್ತಿ ನನ್ನೊಂದಿಗೆ ಇದೆ ಎಂದು ಹೇಳಿದರು.

ಇದಕ್ಕೂ ಮುನ್ನ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಸಂತ್ರಸ್ತರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದ ಅವರು, ‘ಯುಕೆಪಿ ಕುರಿತು ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಯೋಜನೆ ಲಾಭ ಪಡೆಯುವ ಏಳು ಜಿಲ್ಲೆಗಳ ಜನಪ್ರತಿನಿಧಿಗಳು ಒಮ್ಮೆಲೇ ಹೋರಾಟ ಆರಂಭಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಹೆದರುತ್ತಾರೆ’ ಎಂದರು.

ಕಾಂಗ್ರೆಸ್‌ನಲ್ಲಿ ಈಗ ಸಂಪುಟ ಪುನರ್‌ರಚನೆ ಅಂತಿದ್ದಾರೆ. ಅದು ನಡೆಯುವುದೇ ಆದರೆ ನಮ್ಮ ಉತ್ತರ ಕರ್ನಾಟಕದ ನಾಯಕರಿಗೆ ಜಲಸಂಪನ್ಮೂಲ ಸಚಿವ ಸ್ಥಾನ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ. ನೀರಾವರಿ ಇಲಾಖೆ ಹಾಗೂ ಜಲ ಸಂಪನ್ಮೂಲ ಸಚಿವ ಸ್ಥಾನ ನಮ್ಮ ಉತ್ತರ ಕರ್ನಾಟಕ ಭಾಗದವರಿಗೆ ಸಿಗಬೇಕು. ಏಕೆಂದರೆ ಜಲಸಂಪನ್ಮೂಲ ಸಚಿವರಾಗಿದ್ದಾಗ ನಮ್ಮ ಭಾಗದ ನಾಯಕರು ಬಹಳ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರಿದ್ದಾಗ, ಗೋವಿಂದ ಕಾರಜೋಳ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್‌ ಅವರಿಂದಲೂ ಈ ಭಾಗಕ್ಕೆ ನ್ಯಾಯ ಸಿಕ್ಕಿದೆ. ಇದನ್ನ ಬಿಟ್ಟರೆ ಬೇರೆ ಭಾಗದವರಿಗೆ ಕಾಳಜಿ ಇರೋದಿಲ್ಲ ಎಂದಿದ್ದಾರೆ.

Basanagouda Patil Yatnal
ಈಗ ನಾನು ಸೈಲೆಂಟ್, ಜಾರಕಿಹೊಳಿ ವೈಲೆಂಟ್; ದೆಹಲಿ ನಾಯಕರಿಂದ ನನಗೆ ಶಹಬಾಸ್ ಗಿರಿ: ಯತ್ನಾಳ್

ಅಧಿವೇಶನದಲ್ಲಿ ಮೊದಲ ದಿನದಿಂದ ಯುಕೆಪಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸದಿದ್ದರೆ ಏಳೂ ಜಿಲ್ಲೆಗಳಲ್ಲಿ ಬಂದ್ ಮಾಡಿ, ಸುವರ್ಣಸೌಧ ಅಲುಗಾಡಿಸಲು ಸಿದ್ಧರಾಗಬೇಕು. ಬೆಂಬಲ ನೀಡದ ಶಾಸಕರನ್ನು ಗ್ರಾಮದೊಳಕ್ಕೆ ಬಿಟ್ಟುಕೊಳ್ಳುವುದಿಲ್ಲವೆಂದು ಎಚ್ಚರಿಕೆ ನೀಡಿ’ ಎಂದರು. ಯುಕೆಪಿ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರ ನೋಡಿದರೆ ಆಲಮಟ್ಟಿಯಂತಹ 10 ಅಣೆಕಟ್ಟು ನಿರ್ಮಿಸಬಹುದಿತ್ತು. ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳದಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಇನ್ನಾದರೂ ಲೂಟಿ ಮಾಡದೇ ರೈತರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪಕ್ಷಾತೀತವಾಗಿ ಹೋರಾಡೋಣ ಎಂದರು. ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕೋರ್‌ ಕಮಿಟಿ ಸಭೆ ಕುರಿತು ಮಾತನಾಡಿದ ಯತ್ನಾಳ್‌, ಅವರು ಕೋರ್ ಕಮಿಟಿ ಮಾಡಲಿ. ಅವರು ನನ್ನನ್ನು ಏಕೆ ಕೋರ್ ಕಮಿಟಿ ಸಭೆಗೆ ಕರೆಯಬೇಕು? ನಾನು ಕೋರ್ ಕಮಿಟಿಯ ಸದಸ್ಯ ಅಲ್ಲ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಸಾಮಾನ್ಯ ಶಾಸಕ ಎಂದು ಯತ್ನಾಳ್‌ ಟಾಂಗ್‌ ಕೊಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com