
ಬೆಳಗಾವಿ: ವಿನಾಶಕಾರಿ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ವಯನಾಡಿನಲ್ಲಿ ಮನೆ ನಿರ್ಮಿಸಲು ತಮ್ಮ ಸರ್ಕಾರ ಭೂಮಿ ಖರೀದಿಸಲು ಸಿದ್ಧವಾಗಿದೆ ಎಂಬ ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಗಾಗಿ ಕೆಲಸ ಮಾಡ್ತಿದಿರೋ ಅಥವಾ ಗಾಂಧಿ ಕುಟುಂಬಕ್ಕಾಗಿ ಮಾಡ್ತಿದಿರೋ ಎಂಬುದನ್ನು ತಿಳಿಯಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿನ ಕೆಲವೊಂದು ಮೂಲಭೂತ ಸಮಸ್ಯೆಗಳನ್ನು ಪ್ರಸ್ತಾಪಿಸಿರುವ ವಿಜಯೇಂದ್ರ, ರಾಜ್ಯದ ಜನರು, ಅಭಿವೃದ್ಧಿಗೆ ಆದ್ಯತೆ ನೀಡುವ ನಾಯಕತ್ವ ಬೇಕಾಗಿದೆ. ರಾಜಕೀಯ ಓಲೈಕೆಗಾಗಿ ರಾಜ್ಯದ ಅಗತ್ಯಗಳನ್ನು ಬದಿಗೊತ್ತುವ ನಾಯಕತ್ವ ಬೇಡ ಎಂದು ಕಿಡಿಕಾರಿದ್ದಾರೆ. ವಯನಾಡು ಲೋಕಸಭಾ ಕ್ಷೇತ್ರವನ್ನು ಪ್ರಸ್ತುತ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅದರ ಪ್ರತಿನಿಧಿಯಾಗಿದ್ದರು.
ವಿನಾಶಕಾರಿ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ವಯನಾಡಿನಲ್ಲಿ ಮನೆ ನಿರ್ಮಿಸಲು ತಮ್ಮ ಸರ್ಕಾರ ಭೂಮಿ ಖರೀದಿಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 9 ರಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಗೆ ಪತ್ರ ಬರೆದಿದ್ದರು.
ಈ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಜಯೇಂದ್ರ, ಕರ್ನಾಟಕದಲ್ಲಿ ರಸ್ತೆಗಳು ಟಾರ್ ಇಲ್ಲದೆ ಗುಂಡಿಗಳಿಂದ ತುಂಬಿವೆ. ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೊಳಪಟ್ಟಿದೆ. ನಿರುದ್ಯೋಗ ಹೆಚ್ಚಾಗುತ್ತದೆ. ಆದಾಗ್ಯೂ, ಸಿದ್ದರಾಮಯ್ಯ ಈ ಹಿಂದೆ ಭರವಸೆ ನೀಡದಂತೆ ವಯನಾಡಿನಲ್ಲಿ ಭೂಮಿ ಖರೀದಿಗೆ ಮುಂದಾಗಿದ್ದಾರೆ. ಸರ್, ನೀವು ಕರ್ನಾಟಕ ಜನರ ಪರವಾಗಿ ಕೆಲಸ ಮಾಡ್ತಿದಿರೋ ಅಥವಾ ಗಾಂಧಿ ಕುಟುಂಬಕ್ಕೆ ಮಾಡ್ತಿದ್ದಿರೋ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನರು, ಅಭಿವೃದ್ಧಿಗೆ ಆದ್ಯತೆ ನೀಡುವ ನಾಯಕತ್ವ ಬೇಕಾಗಿದೆ. ರಾಜಕೀಯ ಓಲೈಕೆಗಾಗಿ ರಾಜ್ಯದ ಅಗತ್ಯಗಳನ್ನು ಬದಿಗೊತ್ತುವ ನಾಯಕತ್ವ ಬೇಡ ಎಂದು ಕಿಡಿಕಾರಿದ್ದಾರೆ.
Advertisement