2-ಎ ಮೀಸಲಾತಿಗಾಗಿ ಪಂಚಮಸಾಲಿಗಳ ಒತ್ತಡ ತಂತ್ರ ಅಸಂವಿಧಾನಿಕ: ಸಿದ್ದರಾಮಯ್ಯ

ವಿಧಾನ ಪರಿಷತ್ತಿನಲ್ಲಿ ನಿನ್ನೆ ಶೂನ್ಯ ವೇಳೆಯಲ್ಲಿ ಎಂಎಲ್ಸಿ ಹನುಮಂತ ನಿರಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗಕ್ಕೆ ಯಾವುದೇ ಸಮುದಾಯವನ್ನು ಸೇರಿಸಲು ಅಥವಾ ತೆಗೆದುಹಾಕಲು ನಿಗದಿತ ಕಾರ್ಯವಿಧಾನವಿದೆ.
2-ಎ ಮೀಸಲಾತಿಗಾಗಿ ಪಂಚಮಸಾಲಿಗಳ ಒತ್ತಡ ತಂತ್ರ ಅಸಂವಿಧಾನಿಕ: ಸಿದ್ದರಾಮಯ್ಯ
Updated on

ಬೆಳಗಾವಿ: 2-ಎ ಪ್ರವರ್ಗದಡಿ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯಗಳ ಒತ್ತಡದ ತಂತ್ರ ಸಂಪೂರ್ಣ ಅಸಾಂವಿಧಾನಿಕ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಪಂಚಮಸಾಲಿಗಳ ಬೇಡಿಕೆಯ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿಲ್ಲ ಎಂಬ ಸೂಚನೆಯನ್ನು ನೀಡಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ನಿನ್ನೆ ಶೂನ್ಯ ವೇಳೆಯಲ್ಲಿ ಎಂಎಲ್ಸಿ ಹನುಮಂತ ನಿರಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗಕ್ಕೆ ಯಾವುದೇ ಸಮುದಾಯವನ್ನು ಸೇರಿಸಲು ಅಥವಾ ತೆಗೆದುಹಾಕಲು ನಿಗದಿತ ಕಾರ್ಯವಿಧಾನವಿದೆ. 1992 ರ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಆದೇಶದಂತೆ, ಪ್ರತಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮುದಾಯಗಳನ್ನು ಪಂಚಮಸಾಲಿ ವರ್ಗಕ್ಕೆ ಸೇರಿಸಲು ಅಥವಾ ತೆಗೆದುಹಾಕಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದರು. ಆಯೋಗವು ಶಿಫಾರಸುಗಳನ್ನು ನೀಡುವ ಮೊದಲು ವಿವಿಧ ಮಾನದಂಡಗಳನ್ನು ಅನುಸರಿಸಬೇಕು.

2002ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಲು ಸರ್ಕಾರ ಪ್ರವರ್ಗ 1, 2ಎ, 2ಬಿ, 3ಎ ಮತ್ತು 3ಬಿ ಎಂದು ವರ್ಗ ಮಾಡಿತ್ತು ಎಂದರು. ಆ ಸಮಯದಲ್ಲಿ ಪಂಚಮಸಾಲಿ ಸಮುದಾಯದಿಂದ 2ಎ ವರ್ಗಕ್ಕೆ ಸೇರಿಸಲು ಯಾವುದೇ ಬೇಡಿಕೆ ಇರಲಿಲ್ಲ ಎಂದು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನಿರಾಕರಿಸಿದಾಗ ಮಾಜಿ ಸಚಿವ ಮುರಗೇಶ್ ನಿರಾಣಿ ಅವರು ಈ ವಿಷಯವನ್ನು ಪ್ರಸ್ತಾಪಿಸಲು ಪ್ರಾರಂಭಿಸಿದರು, ಕಳೆದ ಮೂರು ದಶಕಗಳಿಂದ ಆಂದೋಲನ ನಡೆಯುತ್ತಿದೆ ಎಂದ ನಿರಾಣಿ, ಸಿಎಂ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು ಹಲವು ಬಿಜೆಪಿ ಎಂಎಲ್‌ಸಿಗಳೂ ನಿರಾಣಿ ಜತೆಗೂಡಿ ಸಿಎಂ ವಿರುದ್ಧ ಟೀಕೆ ಮಾಡಿದರು.

ಮೂರು ದಶಕಗಳಿಂದ ಬೇಡಿಕೆ ಇದೆಯೇ ಎಂದು ಪ್ರಶ್ನಿಸಿದ ಸಿಎಂ, 2002ರಲ್ಲಿ ವರ್ಗೀಕರಣವಾದಾಗ ಏಕೆ ಎತ್ತಲಿಲ್ಲ. ಇದಲ್ಲದೆ, ನಾನು 4 ದಶಕಗಳಿಂದ ವಿಧಾನಸಭೆಯಲ್ಲಿದ್ದೇನೆ. ನಾನು ಹಲವಾರು ಪ್ರತಿಭಟನೆಗಳನ್ನು ನೋಡಿದ್ದೇನೆ, ಆದರೆ ಈ ಪ್ರತಿಭಟನೆಯನ್ನು ಎಂದಿಗೂ ನೋಡಿರಲಿಲ್ಲ ಎಂದರು.

ಹಿಂದಿನ ಬಿಜೆಪಿ ಸರ್ಕಾರವು 2ಎ ಅಡಿಯಲ್ಲಿ ನೀಡಲಾದ ಮೀಸಲಾತಿಯನ್ನು ಬದಲಾಯಿಸುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ಅಫಿಡವಿಟ್ ನೀಡಿತ್ತು. ಹೀಗಿದ್ದರೂ ಬಿಜೆಪಿ ಸರ್ಕಾರ ಕೇವಲ ರಾಜಕೀಯ ಲಾಭಕ್ಕಾಗಿ ಮುಸ್ಲಿಮರಿಗೆ 2ಎ ಅಡಿಯಲ್ಲಿ ನೀಡಲಾಗಿದ್ದ ಶೇಕಡ 4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿದೆ. ಆದರೆ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶದವರೆಗೆ ತನ್ನ ಆದೇಶವನ್ನು ಜಾರಿಗೊಳಿಸುವುದಿಲ್ಲ ಎಂದು ಬಿಜೆಪಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು ಎಂದು ಹೇಳಿದರು.

2-ಎ ಮೀಸಲಾತಿಗಾಗಿ ಪಂಚಮಸಾಲಿಗಳ ಒತ್ತಡ ತಂತ್ರ ಅಸಂವಿಧಾನಿಕ: ಸಿದ್ದರಾಮಯ್ಯ
ಪಂಚಮಸಾಲಿ ಪ್ರತಿಭಟನೆ ಶಮನಗೊಳಿಸದ ಸರ್ಕಾರ; ಗಾಯದ ಮೇಲೆ 'ಉಪ್ಪು' ಸವರಿದ CM ಹೇಳಿಕೆ; ಕಿಚ್ಚು ಹೊತ್ತಿಸಿದ 'ಪರಂ' ಸಮರ್ಥನೆ!

ಆಗ ಮಧ್ಯಪ್ರವೇಶಿಸಿದ ಬಿಜೆಪಿ ಎಂಎಲ್‌ಸಿ ರವಿಕುಮಾರ್, ಸಂವಿಧಾನವು ಧರ್ಮ ಆಧಾರಿತ ಮೀಸಲಾತಿಯನ್ನು ಅನುಮತಿಸದ ಕಾರಣ ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಅಸಂವಿಧಾನಿಕ ಎಂದು ಪ್ರತಿಪಾದಿಸಿದರು. ಇದಕ್ಕೆ ಕಾಂಗ್ರೆಸ್ ಎಂಎಲ್ ಸಿ ಡಾ.ಯತೀಂದ್ರ, ಅದು ನಿಜವೇ ಆಗಿದ್ದರೆ ಬಿಜೆಪಿಯವರು ಏಕೆ ನ್ಯಾಯಾಲಯದ ಮೊರೆ ಹೋಗುವುದಿಲ್ಲ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಸಿಎಂ, ಗುಜರಾತ್‌ನ ಬಿಜೆಪಿ ಸರ್ಕಾರವೂ ಈಗಾಗಲೇ ಮುಸ್ಲಿಮರಿಗೆ ಹಲವು ವರ್ಷಗಳಿಂದ ಮೀಸಲಾತಿ ನೀಡಿದೆ ಎಂದಾಗ ಆಡಳಿತ ಮತ್ತು ವಿರೋಧ ಪಕ್ಷದ ಎಂಎಲ್‌ಸಿಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸಿಎಂ ಉತ್ತರ ಮುಗಿಯುವ ಮುನ್ನವೇ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಮಧ್ಯಾಹ್ನ ಊಟಕ್ಕೆ ಮುಂದೂಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com