ಬಿಜೆಪಿ ಸಂಸದರು ಗಂಡಸರಲ್ಲ; ದೆಹಲಿಗೆ ಹೋಗಿ ಟಿಎ-ಡಿಎ ತೆಗೆದುಕೊಂಡು ಬರೋದಷ್ಟೇ ಇವರ ಕೆಲಸ: ಶಾಸಕ ಬಾಲಕೃಷ್ಣ

ಬಿಜೆಪಿ ಸಂಸದರೆಲ್ಲಾ ಗಂಡಸರಲ್ಲ, ಶೋ ಪೀಸ್‌ಗಳು. ಕೇವಲ ದೆಹಲಿಗೆ  ಹೋಗೋದು ಟಿಎ-ಡಿಎ ತೆಗೆದುಕೊಂಡು ಬರೋದು ಅಷ್ಟೇ ಇವರ ಕೆಲಸ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಚ್.ಸಿ.ಬಾಲಕೃಷ್ಣ
ಎಚ್.ಸಿ.ಬಾಲಕೃಷ್ಣ
Updated on

ರಾಮನಗರ: ಬಿಜೆಪಿ ಸಂಸದರೆಲ್ಲಾ ಗಂಡಸರಲ್ಲ, ಶೋ ಪೀಸ್‌ಗಳು. ಕೇವಲ ದೆಹಲಿಗೆ  ಹೋಗೋದು ಟಿಎ-ಡಿಎ ತೆಗೆದುಕೊಂಡು ಬರೋದು ಅಷ್ಟೇ ಇವರ ಕೆಲಸ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೇಂದ್ರದಿಂದ ಅನುದಾನ ತಾರತಮ್ಯ ಖಂಡಿಸಿ ದೆಹಲಿಯಲ್ಲಿ ಹೋರಾಟ ವಿಚಾರ ಕುರಿತು ರಾಮನಗರದ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ಹೆಚ್ಚು ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮ ಕರ್ನಾಟಕ. ಆದರೆ ನಮಗೆ ಕೊಡಬೇಕಾದ ಅನುದಾನವನ್ನು ಕೇಂದ್ರ ನಮಗೆ ಕೊಡುತ್ತಿಲ್ಲ.

ಬಿಜೆಪಿಯ ಸಂಸದರು ನರೇಂದ್ರ ಮೋದಿಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ. ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನ ನೋಡಿ ಕಲಿಯಲಿ ಎಂದು ಟೀಕೆ ಮಾಡಿದರು.

ಬಿಜೆಪಿ ಎಂಪಿಗಳು, ಮಂತ್ರಿಗಳು ರಾಜ್ಯದ ಪರ ಧ್ವನಿ ಎತ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಪಾಪ ನಮ್ಮ ಹೋರಾಟ ನೋಡಿ ಬಿಜೆಪಿಯ ಗಂಡಸರು ಹೋರಾಟ ಮಾಡುತ್ತಾರಾ ಎಂದು ನೋಡೋಣ. ಮಾಡಿಲ್ಲ ಅಂದರೆ ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ ಎಂದರ್ಥ. ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಬಿಜೆಪಿ ಸಂಸದರನ್ನ ಟೀಕಿಸುವ ಭರದಲ್ಲಿ ಮಾಗಡಿ ಶಾಸಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಬಿಜೆಪಿ ಸಂಸದರೆಲ್ಲಾ ಶೋ ಪೀಸ್ ಗಳು. ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತಕೊಂಡು ಬರೋದು ಅಷ್ಟೇ ಇವರ ಕೆಲಸ. ಬಿಜೆಪಿ ಎಂಪಿಗಳು, ಮಂತ್ರಿಗಳು ರಾಜ್ಯದ ಧ್ವನಿ ಎತ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಪಾಪ, ನಮ್ಮ ಹೋರಾಟ ನೋಡಿಯಾದರೂ ಬಿಜೆಪಿಯ ಗಂಡಸರು ಹೋರಾಟ ಮಾಡ್ತಾರಾ ನೋಡೋಣ. ಇದರ ಅರ್ಥ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲ ಅಂತ.! ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಅರ್ಥ ಎಂದು ಬಿಜೆಪಿ ಸಂಸದರ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com