35 ವರ್ಷ ಜೊತೆಗೆ ಸಂಸಾರ ಮಾಡಿದ್ದೀವಿ, 3 ವರ್ಷ ಆ ಕಡೆ ಹೋಗಿದ್ದರು ಅಷ್ಟೇ: ವೈರಲ್ ಫೋಟೋ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಕಾಂಗ್ರೆಸ್ ಕಡೆ ಮುಖ ಮಾಡಿರುವ ಸೋಮಶೇಖರ್‌, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಜೊತೆ ಚರ್ಚೆ ನಡೆಸಿದ್ದಾರೆ.
ಡಿ.ಕೆ ಶಿವಕುಮಾರ್ ಮತ್ತು ಎಸ್.ಟಿ ಸೋಮಶೇಖರ್
ಡಿ.ಕೆ ಶಿವಕುಮಾರ್ ಮತ್ತು ಎಸ್.ಟಿ ಸೋಮಶೇಖರ್
Updated on

ಬೆಂಗಳೂರು: 35 ವರ್ಷ ಜೊತೆಗೆ ನಾವು ಸಂಸಾರ ಮಾಡಿದ್ದೀವಿ. ಇವಾಗ 3 ವರ್ಷ ಅಷ್ಟೇ ಆ ಕಡೆ ಹೋಗಿದ್ದರು ಎಂದು ಎಸ್ ಟಿ ಸೋಮಶೇಖರ್ ಜೊತೆಗಿನ ಫೋಟೋ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ನಡೆದ ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಜೊತೆಯಾಗಿ ತೆರಳಿದರು.

ಕಾಂಗ್ರೆಸ್ ಕಡೆ ಮುಖ ಮಾಡಿರುವ ಸೋಮಶೇಖರ್‌, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ, ಕಾಂಗ್ರೆಸ್‌ ಸೇರುವ ಬಗ್ಗೆ ಬಹಿರಂಗವಾಗಿ ಅವರು ಎಲ್ಲಿಯೂ ಮಾತನಾಡಿಲ್ಲ.

ಡಿ.ಕೆ ಶಿವಕುಮಾರ್ ಮತ್ತು ಎಸ್.ಟಿ ಸೋಮಶೇಖರ್
ಸಿಎಂ ಬದಲಾವಣೆ ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿ ಸೃಷ್ಟಿಸಿರುವ ದೊಡ್ಡ ಸುಳ್ಳು: ಎಸ್ ಟಿ ಸೋಮಶೇಖರ್

ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ.ಕೆ. ಶಿವಕುಮಾರ್‌ ಮತ್ತು ಸೋಮಶೇಖರ್‌ ಅವರು ವಿಶೇಷ ವಿಮಾನದಲ್ಲಿ ತೆರಳಿದರು. ಕಾರ್ಯಕ್ರಮ ಮುಗಿದ ಬಳಿಕ ಅದೇ ವಿಮಾನದಲ್ಲಿ ಮರಳಿದರು.

ಈ ಸಂಬಂಧ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಬರುವ ಕುರಿತಾದ ಸುದ್ದಿ ವಿಚಾರವಾಗಿ ಮಾರ್ಮಿಕವಾಗಿ ಉತ್ತರ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com