ರಾಜ್ಯಸಭೆ ಚುನಾವಣೆ: 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಿಸಲು ಬಿಜೆಪಿ-ಜೆಡಿಎಸ್ ರಣತಂತ್ರ!

66 ಶಾಸಕರನ್ನು ಹೊಂದಿರುವ ಬಿಜೆಪಿಯು ತನ್ನ ಅಧಿಕೃತ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಮೂಲಕ ಒಂದು ಸ್ಥಾನ ಗೆಲ್ಲಬಹುದು. ಏಕೆಂದರೆ ಅದಕ್ಕೆ 45 ಮತಗಳು ಬೇಕಾಗುತ್ತವೆ.
ಕುಪೇಂದ್ರ ರೆಡ್ಡಿ
ಕುಪೇಂದ್ರ ರೆಡ್ಡಿKupendra Reddy
Updated on

ಬೆಂಗಳೂರು: ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಪ್ರತಿಷ್ಠೆ ಪಣಕ್ಕಿಟ್ಟಿದ್ದು, ಎನ್ ಡಿ ಎ ಒಕ್ಕೂಟ ಜೆಡಿಎಸ್‌ನ ‌ರಾಜ್ಯಸಭೆ ಮಾಜಿ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಅವರನ್ನು ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ, ಆದರೂ ಖಾಲಿ ಇರುವುದು ನಾಲ್ಕು ಸ್ಥಾನಗಳು ಮಾತ್ರ.

66 ಶಾಸಕರನ್ನು ಹೊಂದಿರುವ ಬಿಜೆಪಿಯು ತನ್ನ ಅಧಿಕೃತ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಮೂಲಕ ಒಂದು ಸ್ಥಾನ ಗೆಲ್ಲಬಹುದು. ಏಕೆಂದರೆ ಅದಕ್ಕೆ 45 ಮತಗಳು ಬೇಕಾಗುತ್ತವೆ, ಆದರೆ ಕೇಸರಿ ಪಕ್ಷವು ಭಾಂಡಗೆ ಅವರ ಸುರಕ್ಷಿತ ಬದಿಯಲ್ಲಿರಲು ಇನ್ನೂ ಎರಡು ಶಾಸಕರ ಮತಗಳನ್ನು ಭಾಂಡಗೆಗೆ ಹಂಚುವ ಸಾಧ್ಯತೆಯಿದೆ. ಉಳಿದ 19 ಮತಗಳನ್ನು ಕುಪೇಂದ್ರ ರೆಡ್ಡಿ ಅವರಿಗೆ ನೀಡಲಿದೆ, ಆದರೆ ಕೆಲವು ಅನಿಶ್ಚಿತತೆ ಇದೆ, ಎಸ್‌ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಸೇರಿದಂತೆ ಬಿಜೆಪಿಯೊಳಗಿನ ಕೆಲವು ‘ಅತೃಪ್ತರು’ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅವರು ಬಿಜೆಪಿಯ ಹೈಕಮಾಂಡ್ ಆದೇಶಕ್ಕೆ ಮಣಿದು ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸುತ್ತಾರೆಯೇ ಎಂದು ಕಾದು ನೋಡಬೇಕು.

19 ಜೆಡಿಎಸ್ ಶಾಸಕರ ಪೈಕಿ ಗುರ್ಮಿಟ್ಕಲ್ ಶಾಸಕ ಶರಣಗೌಡ ಕಂದಕೂರ್, ಹನೂರಿನ ಎಂಆರ್ ಮಂಜುನಾಥ್, ದೇವದುರ್ಗದ ಕರೆಮ್ಮ ಜಿ ನಾಯಕ ಸೇರಿದಂತೆ ಮೂವರು ಶಾಸಕರು ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಕುಪೇಂದ್ರ ರೆಡ್ಡಿ ಅವರು ಬಿಜೆಪಿ ಮತ್ತು ಜೆಡಿಎಸ್‌ ಶಾಸಕರನ್ನು, ಕಾಂಗ್ರೆಸ್‌ ಶಾಸಕರನ್ನೂ ಮನವೊಲಿಸುವ ಅಗತ್ಯವಿದೆ. ಆ ಮೂಲಕ ಗೆಲ್ಲಲು ಅಗತ್ಯವಿರುವ 45 ಮತಗಳ ಸಂಖ್ಯಾಬಲವನ್ನು ತಲುಪಬೇಕಿದೆ. ಕೆಲವು ಶಾಸಕರು ಮತದಾನದಿಂದ ದೂರ ಉಳಿಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಕುಪೇಂದ್ರ ರೆಡ್ಡಿ
ರಾಜ್ಯಸಭೆ ಚುನಾವಣೆ: ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ರೆಡ್ಡಿಗೆ ಗೌರವಾನ್ವಿತ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಆದರೆ ಪಕ್ಷದ ಶಾಸಕರಲ್ಲಿಉತ್ಸಾಹವಿಲ್ಲ, ಹೀಗಾಗಿ ರೆಡ್ಡಿಗೆ ಗೆಲುವು ಕಷ್ಟ ಎಂದು ಎಂದು ಬಿಜೆಪಿ ಶಾಸಕರೊಬ್ಬರು TNIE ಗೆ ತಿಳಿಸಿದ್ದಾರೆ .

ಫೆಬ್ರವರಿ 16 ರಂದು ನಡೆದ ಬೆಂಗಳೂರು ಶಿಕ್ಷಕರ ಸ್ಥಾನದ ಚುನಾವಣೆಯಲ್ಲಿ ಹೊಂದಾಣಿಕೆಯ ಕೊರತೆಯಿಂದ ಮೈತ್ರಿ ಪಾಲುದಾರರು ಈಗಾಗಲೇ ಸೋಲನುಭವಿಸಿದ್ದಾರೆ. ಜೆಡಿಎಸ್‌ನ ಅಭ್ಯರ್ಥಿ ಎ ಪಿ ರಂಗನಾಥ್ ಅವರು ಕಾಂಗ್ರೆಸ್‌ನ ಪುಟ್ಟಣ್ಣ ವಿರುದ್ಧ ಸೋತಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನೆಪದಲ್ಲಿ ಕಾಂಗ್ರೆಸ್ ತನ್ನ 135 ಶಾಸಕರನ್ನು ಸೋಮವಾರ ಸಂಜೆ ಬೆಂಗಳೂರಿನ ಹೊರವಲಯದಲ್ಲಿರುವ ಹಿಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಿದ್ದು, ಇದರಲ್ಲಿ ಪಕ್ಷದ ಹೈಕಮಾಂಡ್ ಭಾಗವಹಿಸಲಿದೆ. ಪಕ್ಷೇತರ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್ ಮತ್ತು ಪುಟ್ಟಸ್ವಾಮಿಗೌಡ ಅವರನ್ನೂ ಹಾಜರುಪಡಿಸುವಂತೆ ಮನವಿ ಮಾಡಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ. ತಮ್ಮ ಅಭ್ಯರ್ಥಿಗಳಾದ ಅಜಯ್ ಮಾಕನ್, ಜಿ ಸಿ ಚಂದ್ರಶೇಖರ್ ಮತ್ತು ಸೈಯದ್ ನಸೀರ್ ಹುಸೇನ್ ಅವರು ಸಾಕಷ್ಟು ಮತಗಳನ್ನು ಹೊಂದಿರುವುದರಿಂದ ಮೂರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಕಾಂಗ್ರೆಸ್ ನಾಯಕರಿಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com