ತಳಮಟ್ಟದ ಸಮೀಕ್ಷೆಯಿಂದ ಹುಮ್ಮಸ್ಸು: ಹಳೆ ಮೈಸೂರು ಭಾಗದಲ್ಲಿ 4-5 ಸ್ಥಾನಗಳಿಗೆ 'ದಳಪತಿ'ಗಳ ಪಟ್ಟು ಸಾಧ್ಯತೆ!

ಜನವರಿ 22ರಂದು ಉದ್ಘಾಟನೆಗೊಳ್ಳಲಿರುವ ರಾಮಮಂದಿರ ವಿಚಾರ ಹಾಗೂ ಕರಸೇವಕರ ಬಂಧನ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾದ-ವಿವಾದ ನಡೆಯುತ್ತಿದ್ದರೆ, ಈ ಮಧ್ಯೆ ರಾಜ್ಯ ಜೆಡಿಎಸ್ ಮುಖ್ಯಸ್ಥ ಹೆಚ್ ಡಿ ಕುಮಾರಸ್ವಾಮಿ ಅವರು ಸದ್ದಿಲ್ಲದೆ ಚುನಾವಣೆಗೆ ಸಜ್ಜಾಗಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಮೈಸೂರು: ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ-ಜೆಡಿಎಸ್ ಟಿಕೆಟ್ ಹೇಗೆ ಹಂಚಿಕೆ ಮಾಡಿಕೊಳ್ಳುತ್ತದೆ ಎಂಬ ಕುತೂಹಲವಿದೆ. ಜನವರಿ 22ರಂದು ಉದ್ಘಾಟನೆಗೊಳ್ಳಲಿರುವ ರಾಮಮಂದಿರ ವಿಚಾರ ಹಾಗೂ ಕರಸೇವಕರ ಬಂಧನ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾದ-ವಿವಾದ ನಡೆಯುತ್ತಿದ್ದರೆ, ಈ ಮಧ್ಯೆ ರಾಜ್ಯ ಜೆಡಿಎಸ್ ಮುಖ್ಯಸ್ಥ ಹೆಚ್ ಡಿ ಕುಮಾರಸ್ವಾಮಿ ಅವರು ಸದ್ದಿಲ್ಲದೆ ಚುನಾವಣೆಗೆ ಸಜ್ಜಾಗಿದ್ದಾರೆ. 

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ನಂತರ ಜೆಡಿಎಸ್ ಆಂತರಿಕ ಸಮೀಕ್ಷೆಯನ್ನು ನಡೆಸಿದೆ, ಸಮೀಕ್ಷೆಯ ವರದಿಗಳ ಪ್ರಕಾರ ಪಕ್ಷವು ತನ್ನ ಮೈತ್ರಿ ಪಾಲುದಾರ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ 28 ಸ್ಥಾನಗಳ ಪೈಕಿ ನಾಲ್ಕರಿಂದ ಐದು ಸ್ಥಾನಗಳನ್ನು ಕೇಳಬಹುದು ಎಂದು ಹೇಳಲಾಗುತ್ತಿದೆ. 

ಮುಂದಿನ ವಾರ ಸಂಕ್ರಾಂತಿ ಹಬ್ಬವಿದೆ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಂತರ ಸೀಟು ಹಂಚಿಕೆ ಮಾತುಕತೆ ಆರಂಭವಾಗುವ ಸಾಧ್ಯತೆಯಿದೆ, ಇದಕ್ಕಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನೂ ಆಹ್ವಾನಿಸಲಾಗಿದೆ. ವಾಸ್ತವ ವರದಿಯಿಂದ ಉತ್ತೇಜಿತವಾಗಿರುವ ಜೆಡಿಎಸ್ ಹಾಸನ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ನಿರೀಕ್ಷಿತ ಸ್ಥಾನಗಳನ್ನು ಹೊರತುಪಡಿಸಿ ತುಮಕೂರು, ಕೋಲಾರ ಮತ್ತು ಮೈಸೂರು ಸ್ಥಾನಗಳಿಗೆ ಬಿಜೆಪಿ ಮುಂದೆ ಬೇಡಿಕೆಯಿಡಬಹುದು ಎಂದು ಹೇಳಲಾಗುತ್ತಿದೆ. 

ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಮತ್ತು ಕೋಲಾರದಲ್ಲಿ ಮುನಿಸ್ವಾಮಿ ತಮ್ಮ ಪಕ್ಷ ತಮ್ಮನ್ನು ಕಣಕ್ಕಿಳಿಸುವ ವಿಶ್ವಾಸದಲ್ಲಿದ್ದಾರೆ. ಪ್ರಸ್ತುತ ಲೋಕಸಭೆಯಲ್ಲಿ ಜೆಡಿಎಸ್ ಹಾಸನದ ಪ್ರಜ್ವಲ್ ರೇವಣ್ಣರನ್ನು ಮಾತ್ರ ಹೊಂದಿದೆ. ತುಮಕೂರಿನಲ್ಲಿ ಕಳೆದ ಬಾರಿ ದೇವೇಗೌಡರನ್ನು ಕಣಕ್ಕಿಳಿಸಿ ಸೋತಿರುವ ಜೆಡಿಎಸ್, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯವರ ಸೋಲಿನ ಜೊತೆಗೆ, ತನ್ನ ಚುನಾವಣಾ ತಂತ್ರವನ್ನು ಈ ಬಾರಿ ಬದಲಾಯಿಸಿದೆ. ಸಮೀಕ್ಷೆಯ ಫಲಿತಾಂಶಗಳ ನಂತರ ತಳಮಟ್ಟದಿಂದ ಪ್ರತಿಕ್ರಿಯೆಯನ್ನು ಪಡೆಯುವ ಸಾಧ್ಯತೆಯಿದೆ.

ಕಳೆದ ಬಾರಿ ಮೈಸೂರು, ತುಮಕೂರು, ಮಂಡ್ಯ, ಹಾಸನ ಮತ್ತು ಕೊಡಗಿನಲ್ಲಿ ಬಿಜೆಪಿಯ ಶೇಕಡಾ 22.98ಗಳ ವಿರುದ್ಧ (14,85,142 ಮತಗಳು) ಶೇಕಡಾ 32.18 (20,79,498 ಮತಗಳು) ಮತದಾನದಲ್ಲಿ ಯಶಸ್ವಿಯಾಗಿರುವುದರಿಂದ ಹಳೇ ಮೈಸೂರಿನಲ್ಲಿ ಜೆಡಿಎಸ್ ನಾಯಕರು ಚೌಕಾಶಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. . ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿಯ 4,94,898 ಮತಗಳ ವಿರುದ್ಧ ಜೆಡಿಎಸ್ 6,05,791 ಮತಗಳನ್ನು ಪಡೆದಿದೆ.

ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ತುಮಕೂರುಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಬಹುದು ಮತ್ತು ಲೋಕಸಭೆಯಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಬಹುದು. ಸಮೀಕ್ಷೆಯು ಜಾತಿ ಸಮೀಕರಣಗಳು, ತಳಹದಿಯ ಬಲ, ಜನರ ಮನಸ್ಥಿತಿ ಮತ್ತು ಖಾತರಿ ಅಂಶಗಳ ಪ್ರಭಾವದ ಮೇಲೆ ಕೇಂದ್ರೀಕರಿಸಿದೆ.

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕೆಲವು ನಾಯಕರು ಆರಂಭದಲ್ಲಿ ಅಸಮಾಧಾನಗೊಂಡಿದ್ದರೂ, ವಿಧಾನಸೌಧದ ಒಳಗೆ ಮತ್ತು ಹೊರಗೆ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಒಂದು ತಿಂಗಳಿನಿಂದ ಸಮನ್ವಯವು ಸುಧಾರಿಸಿದೆ. ಸ್ಥಾನ ಹಂಚಿಕೆ ಅಂತಿಮಗೊಂಡ ನಂತರ ಕಾರ್ಯ ಸಂಬಂಧ ಸುಧಾರಿಸುತ್ತದೆ ಮತ್ತು ಪಕ್ಷಗಳ ನಡುವಿನ ಮತಗಳ ವರ್ಗಾವಣೆಯತ್ತ ಗಮನ ಹರಿಸಲಾಗುವುದು ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com