ರಘುಪತಿ ಭಟ್ ಬಗ್ಗೆ ಆಲಿಯಾ ಅಸ್ಸಾದಿ ಗೇಲಿ: ಬಿಜೆಪಿ ವರಿಷ್ಠರ ನಡೆಗೆ ಪ್ರತಾಪ್ ಸಿಂಹ ಅಸಮಾಧಾನ

ಆಲಿಯಾ ಅಸ್ಸಾದಿಯಿಂದ ರಘುಪತಿ ಭಟ್ ಗೇಲಿಗೆ ಒಳಗಾದ ಪರಿಸ್ಥಿತಿಯಿಂದಾಗಿ ಬಿಜೆಪಿ ವರಿಷ್ಠರ ನಡೆಗೆ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಘುಪತಿ ಭಟ್ ಬಗ್ಗೆ ಆಲಿಯಾ ಅಸ್ಸಾದಿ ಗೇಲಿ: ಬಿಜೆಪಿ ವರಿಷ್ಠರ ನಡೆಗೆ ಪ್ರತಾಪ್ ಸಿಂಹ ಅಸಮಾಧಾನ
Updated on

ಮೈಸೂರು: ಆಲಿಯಾ ಅಸ್ಸಾದಿಯಿಂದ ರಘುಪತಿ ಭಟ್ ಗೇಲಿಗೆ ಒಳಗಾದ ಪರಿಸ್ಥಿತಿಯಿಂದಾಗಿ ಬಿಜೆಪಿ ವರಿಷ್ಠರ ನಡೆಗೆ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಹಾಕಿರುವ ಅವರು, ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ತರಗತಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ್ದ ರಘುಪತಿ ಭಟ್ ಅವರಿಗೆ ಎಂಎಲ್ ಎ ಟಿಕೆಟ್ ಸಿಗಲಿಲ್ಲ. ಎಂಎಲ್ ಸಿ ಟಿಕೆಟ್ ಕೂಡಾ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೇ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೊಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದದ್ದು ದುರದೃಷ್ಟಕರ ಎಂದಿದ್ದಾರೆ.

ರಘುಪತಿ ಭಟ್ ಬಗ್ಗೆ ಆಲಿಯಾ ಅಸ್ಸಾದಿ ಗೇಲಿ: ಬಿಜೆಪಿ ವರಿಷ್ಠರ ನಡೆಗೆ ಪ್ರತಾಪ್ ಸಿಂಹ ಅಸಮಾಧಾನ
'ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು': ರಘುಪತಿ ಭಟ್ ಗೆ ವಿದ್ಯಾರ್ಥಿನಿ ಅಲಿಯಾ ಅಸಾದಿ ಟಾಂಗ್

ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಸಂಬಂಧ ನೋಟಿಸ್ ನೀಡಿದ್ದ ರಾಜ್ಯ ಬಿಜೆಪಿ ಶಿಸ್ತು ಸಮಿತಿ, ಪಕ್ಷದಿಂದ ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು. ರಘುಪತಿ ಭಟ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿದ ಕುರಿತು ಆಲಿಯಾ ಗೇಲಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com