ಡಿಕೆ ಸುರೇಶ್ ಸೋಲಿನಿಂದ ಪಾಠ ಕಲಿಯುತ್ತೇವೆ, ಎಲ್ಲಿ ಎಡವಿದ್ವಿ ಅನ್ನೋದರ ಬಗ್ಗೆ ಚರ್ಚಿಸುತ್ತೇವೆ: ಡಿಕೆ ಶಿವಕುಮಾರ್

ಏನು ಫಲಿತಾಂಶ ಬಂದಿದೆಯೋ ಅದನ್ನು ನಾನು ಸ್ವೀಕಾರ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್
ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್
Updated on

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷನಾಗಿ ಜನರ ತೀರ್ಪನ್ನು ಗೌರವಿಸುತ್ತೇನೆ. ಇಡೀ ದೇಶದಲ್ಲಿ ಇರಬಹುದು ರಾಜ್ಯದಲ್ಲಿ ಇರಬಹುದು, ವಿಶ್ವಾಸ ರಾಜಕೀಯ ಗೆದ್ದಂತಾಗಿದೆ, ಗೆದ್ದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏನು ಫಲಿತಾಂಶ ಬಂದಿದೆಯೋ ಅದನ್ನು ನಾನು ಸ್ವೀಕಾರ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಇಂದು ನಗರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಎಂ, ನಾನು ಬಹಳ ಅರ್ಥ ಮಾಡಿಕೊಳ್ಳಬೇಕು ಮಾಡಿಕೊಳ್ಳುತ್ತೇನೆ. ಮತದಾರರು ಪ್ರಜ್ಞಾವಂತರೂ ಅದರ ಬಗ್ಗೆ ನಾನು ಏನು ಮಾತನಾಡಲ್ಲ. ಎಲ್ಲೆಲ್ಲಿ ಹೆಚ್ಚು ಕಮ್ಮಿ ಆಗಿದೆ ಅದನ್ನ ಸರಿಪಡಿಸಿಕೊಳ್ಳೊ ಕೆಲಸ ಮಾಡ್ತೀವಿ. ಗ್ಯಾರಂಟಿಗಳಿಂದ ಇನ್ನು ಹೆಚ್ಚು ಸೀಟ್ ಗೆಲ್ಲೋ ವಿಶ್ವಾಸ ಇತ್ತು. ಆದರೆ ಎಲ್ಲಿ ಎಡವಿದ್ವಿ ಅನ್ನೋದರ ಬಗ್ಗೆ ಚರ್ಚೆ ಮಾಡ್ತೀವಿ. ಮೋದಿಯ ಅಲೆ ಅನ್ನೋದು ಕಡಿಮೆ ಆಗಿದೆ. ಅವರ ನಿರೀಕ್ಷೆ ಎಲ್ಲಾ ಕಡಿಮೆ ಆಗಿದೆ ಎಂದರು.

ಆಂಧ್ರ ಹಾಗೂ ಬಿಹಾರದಲ್ಲಿ ಮೈತ್ರಿಯಿಂದಾಗಿ ಅವರಿಗೆ ಮೆಜಾರಿಟಿ ಬಂದಿದೆ ಅಷ್ಟೇ. ಬಿಜೆಪಿಯವರಿಗೆ ಮೆಜಾರಿಟಿ ಅನ್ನೋದು ಬಂದಿಲ್ಲ. ನನ್ನ ತಮ್ಮ ಕ್ಷೇತ್ರದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದ. ಆದರೂ ಡಾ. ಮಂಜುನಾಥ್​​ ಗೆದ್ದಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್
Karnataka lok sabha result: ಬೆಂಗಳೂರು ಗ್ರಾಮಾಂತರದಲ್ಲಿ BJP ಭರ್ಜರಿ ಜಯ; ಡಾ. ಮಂಜುನಾಥ್, ಡಿಕೆ ಸುರೇಶ್ ಪ್ರತಿಕ್ರಿಯೆ

ನಮ್ಮ ಕ್ಷೇತ್ರದಲ್ಲಿ 50-70 ಮೆಜಾರಿಟಿಯಲ್ಲಿ ಗೆಲ್ತೀವಿ ಅಂತ ಅಂದುಕೊಂಡಿದ್ವಿ. ಆದರೆ ಅದು ಆಗಿಲ್ಲ. ಈ ಸೋಲಿನಿಂದ ಪಾಠ ಕಲಿಯುತ್ತೇವೆ. ಮನ್ಸೂರ್ ಅಲಿಖಾನ್ ಕೊನೆ ಕ್ಷಣದಲ್ಲಿ ಸೋತರು. ಪಾಲಿಟಿಕ್ಸ್ ನಲ್ಲಿ ಇದೆಲ್ಲ ಆಗುತ್ತೆ. ಆದ್ರೆ ನಾವು ನಮ್ಮ ಪ್ರಯತ್ನ ಮುಂದುವರೆಸುತ್ತೇವೆ ಎಂದು ಡಿಕೆಶಿ ತಿಳಿಸಿದರು.

ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಅಂದ್ರು, ಅದು ಮಾಡಲು ಸಾಧ್ಯವೇ ಇಲ್ಲ ಅನ್ನೋದು ತೋರಿಸಿದ್ದೇವೆ. ಭಾರತ್ ಜೋಡೋ ಯಾತ್ರೆ, ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದ ಹೆಚ್ಚು ಸೀಟ್ ಬಂದಿದೆ. ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಸೀಟ್ ಗೆದ್ದಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com