ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು 2004 ರಿಂದ HDK ಕಸರತ್ತು: ಅಂದಿನಿಂದ ಇಂದಿನವರೆಗೂ ಕುಮಾರಸ್ವಾಮಿ ಜೆಡಿಎಸ್ ಪರಿಪಾಲಕ!

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಕರ್ನಾಟಕ ರಾಜಕೀಯದ ಚಾಣಕ್ಯ ಎಂದು ಪರಿಗಣಿಸಿದ ರಾಜಕೀಯ ವಿಶ್ಲೇಷಕರು ಈಗ ಅವರ ಪುತ್ರ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಜನತಾ ದಳದ (ಸೆಕ್ಯುಲರ್) ಪರಿಪಾಲಕ ಎಂದು ಕರೆದಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಕರ್ನಾಟಕ ರಾಜಕೀಯದ ಚಾಣಕ್ಯ ಎಂದು ಪರಿಗಣಿಸಿದ ರಾಜಕೀಯ ವಿಶ್ಲೇಷಕರು ಈಗ ಅವರ ಪುತ್ರ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಜನತಾ ದಳದ (ಸೆಕ್ಯುಲರ್) ಪರಿಪಾಲಕ ಎಂದು ಕರೆದಿದ್ದಾರೆ. ಪ್ರಾದೇಶಿಕ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿ ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದ್ದು, ಜೆಡಿಎಸ್ ನಾಯಕರು ಹೇಳಿಕೊಳ್ಳುವಂತೆ ಪಕ್ಷವು ಮೈತ್ರಿ ಪಾಲುದಾರ ಬಿಜೆಪಿಗೆ ಹತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿದೆ, ಇದರಲ್ಲಿ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ್ದಾರೆ.

ಅದರ ಪ್ರತಿಫಲವಾಗಿ ಕುಮಾರಸ್ವಾಮಿ ಅವರಿಗೆ ಸಚಿವ ಸಂಪುಟದ ಸ್ಥಾನ ಸಿಕ್ಕಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಕಾರಣದಿಂದ ಜೆಡಿಎಸ್ ತೀವ್ರ ಮುಜುಗರದ ವಾತಾವರಣ ಎದುರಿಸುತ್ತಿತ್ತು, ಆದರೆ ಕುಮಾರಸ್ವಾಮಿ ಮೋದಿ ಸಂಪುಟಕ್ ಸೇರಿರುವುದು ಪ್ರಾದೇಶಿಕ ಪಕ್ಷಕ್ಕೆ ಮತ್ತಷ್ಚು ಬಲ ನೀಡಿದಂತಿದೆ.ಈ ವಿಚಾರವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದ ಕಾರಣ ಕುಮಾರಸ್ವಾಮಿ ಪ್ರಜ್ವಲ್ ಅವರನ್ನು ಪಕ್ಷದಿಂದ ದೂರವಿಟ್ಟರು.

ಎಚ್.ಡಿ ಕುಮಾರಸ್ವಾಮಿ
ಎರಡು ಬಾರಿ ಕರ್ನಾಟಕ ಮುಖ್ಯಮಂತ್ರಿ ಹುದ್ದೆಯಿಂದ ಕೇಂದ್ರ ಸಚಿವ ಸ್ಥಾನದವರೆಗೆ: ಮತ್ತೊಮ್ಮೆ ಚಾಣಾಕ್ಷತೆ ಪ್ರದರ್ಶಿಸಿದ ಕುಮಾರಸ್ವಾಮಿ!

ಆದರೆ ಕರ್ನಾಟಕದಲ್ಲಿ ಪ್ಸೆಫಾಲಜಿಸ್ಟ್‌ಗಳ ಪ್ರಕಾರ, 2004ರಿಂದಲೂ ಪಕ್ಷದ ಸಂರಕ್ಷಕನಾಗಿ ಕುಮಾರಸ್ವಾಮಿಯವರ ಪಾತ್ರವು ದೊಡ್ಡದಿದೆ, 2004 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಅಧಿಕಾರ ಕಳೆದುಕೊಂಡ ನಂತರ, ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ರಚಿಸಲು ದೇವೇಗೌಡರು ಆಗಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಎನ್ ಧರಂ ಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಡಿಕೆ ಶಿವಕುಮಾರ್ ಅವರ ಟ್ರಬಲ್‌ಶೂಟರ್ ಆಗಿದ್ದ ಹಳೇ ಮೈಸೂರು ಭಾಗದ ಒಕ್ಕಲಿಗ ನಾಯಕ ಕೃಷ್ಣ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ಕಳುಹಿಸಲಾಯಿತು.

ಕಾಂಗ್ರೆಸ್‌ನಿಂದ ಬೆದರಿಕೆಯನ್ನು ಗ್ರಹಿಸಿದ ಕುಮಾರಸ್ವಾಮಿ ಅವರು 2006 ರಲ್ಲಿ ಧರಂ ಸಿಂಗ್ ಸರ್ಕಾರವನ್ನು ಪತನಗೊಳಿಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ಆದರೆ ಅವರು ಬಿಜೆಪಿಗೆ ಅಧಿಕಾರವನ್ನು ಹಸ್ತಾಂತರಿಸಲಿಲ್ಲ, ಇದು ದ್ರೋಹ ಎಂದು ಕರೆದರು ಮತ್ತು ಇದಕ್ಕೆ ಜೆಡಿಎಸ್ ಮತ್ತು ಕುಮಾರಸ್ವಾಮಿ ಬಹುದೊಡ್ಡ ಬೆಲೆ ನೀಡಬೇಕಾಯಿತು. 2013ರಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಾಗ ಮೈತ್ರಿಕೂಟದ ಪಾಲುದಾರರಾಗಿ ಜೆಡಿಎಸ್‌ಗೆ ಯಾವುದೇ ಪಾತ್ರವಿರಲಿಲ್ಲ. ಆದರೆ 2018 ರಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಗೆ ಒತ್ತಾಯಿಸಿತು ಆದರೆ ಸರ್ಕಾರವು ಅಲ್ಪಕಾಲಿಕವಾಗಿತ್ತು ಮತ್ತು 2019 ರಲ್ಲಿ ಸರ್ಕಾರ ಪತನವಾಯಿತು.

2023 ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದಾಗ, ಜೆಡಿಎಸ್ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸಿತು, ಕಾಂಗ್ರೆಸ್ ನಾಯಕರು ಪಕ್ಷದ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸಿದರು. ಮೋದಿ ಮತ್ತೊಮ್ಮೆ ಪ್ರದಾನಿಯಾಗುತ್ತಾರೆ ಎಂದು ತಿಳಿದಾಗ ಕುಮಾರಸ್ವಾಮಿ ತಮ್ಮ ತಪ್ಪು ತಿದ್ದಿಕೊಳ್ಳಲು ಗೌಡರ ಆಶೀರ್ವಾದದೊಂದಿಗೆ ಮತ್ತೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು, ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಂಪುಟದಲ್ಲಿ ಸಚಿವರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com