ನಮಗೆ ನಮ್ಮ ಕೆಲಸ ಕಾರ್ಯ ಮುಖ್ಯ, ಯಾರೇ ಅಭ್ಯರ್ಥಿಯಾದರೂ ಹೋರಾಟಕ್ಕೆ ಸಿದ್ಧ: ಡಿ.ಕೆ ಸುರೇಶ್

ಹಳೇ ವೈರಿಗಳು ಒಂದಾಗ್ತಿದ್ದಾರೋ, ಕಿತ್ತಾಡ್ತಿದ್ದಾರೋ ಗೊತ್ತಿಲ್ಲ. ಟಾರ್ಗೆಟ್ ಮಾಡೋದೆಲ್ಲವು ರಾಜಕಾರಣದಲ್ಲಿ ಸ್ವಾಭಾವಿಕ. ಇದಕ್ಕೆಲ್ಲಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಉತ್ತರ ಕೊಡುತ್ತಾರೆ ಎಂದರು.
ಡಿ.ಕೆ ಸುರೇಶ್
ಡಿ.ಕೆ ಸುರೇಶ್

ರಾಮನಗರ: ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಯೋಜನೆ ರೂಪಿಸುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ವರ್ಷದಲ್ಲಿ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವುದು ಸಹಜ. ನಾವು ಚುನಾವಣೆಯ ಹೊಸ್ತಿಲಲ್ಲಿದ್ದೇವೆ, ಅಭ್ಯರ್ಥಿ ಯಾರೇ ಬಂದರೂ ಅವರ ವಿರುದ್ಧ ಹೋರಾಟ ನಡೆಸಬೇಕಾಗಿರುವುದರಿಂದ ನಾನು ಮಾಡಿದ ಕೆಲಸವೇ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಮುಂದಾಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್, ನಮಗೆ ನಮ್ಮ ಕೆಲಸ ಕಾರ್ಯ ಮುಖ್ಯ, ಯಾರೇ ಅಭ್ಯರ್ಥಿ ಆದರೂ ಹೋರಾಟ ಮಾಡಬೇಕು. ಹಳೇ ವೈರಿಗಳು ಒಂದಾಗ್ತಿದ್ದಾರೋ, ಕಿತ್ತಾಡ್ತಿದ್ದಾರೋ ಗೊತ್ತಿಲ್ಲ. ಟಾರ್ಗೆಟ್ ಮಾಡೋದೆಲ್ಲವು ರಾಜಕಾರಣದಲ್ಲಿ ಸ್ವಾಭಾವಿಕ. ಇದಕ್ಕೆಲ್ಲಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಉತ್ತರ ಕೊಡುತ್ತಾರೆ ಎಂದರು.

ಡಿ.ಕೆ ಸುರೇಶ್
ಲೋಕಸಭೆ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಡಿ.ಕೆ ಸುರೇಶ್, ಮುದ್ದಹನುಮೇಗೌಡ, ಜಯಪ್ರಕಾಶ್ ಹೆಗ್ಡೆಗೆ ಸ್ಥಾನ !

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com