ಮೈಸೂರು ಕ್ಷೇತ್ರ ಟಿಕೆಟ್ ಪ್ರತಾಪ್ ಸಿಂಹ ಕೈತಪ್ಪುತ್ತಾ: ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಹೇಳಿದ್ದೇನು?

ಹೊಸಬರಿಗೆ ಟಿಕೆಟ್ ನೀಡಲು ಚರ್ಚೆ ನಡೆಯುತ್ತಿದೆ ಎಂದ ಆರ್ ಅಶೋಕ್
ಆರ್ ಅಶೋಕ್-ಬಿ ವೈ ವಿಜಯೇಂದ್ರ
ಆರ್ ಅಶೋಕ್-ಬಿ ವೈ ವಿಜಯೇಂದ್ರ

ಬೆಂಗಳೂರು: 'ಪಕ್ಷದೊಳಗೆ ನಾಲ್ಕು ಗೋಡೆಗಳ ನಡುವೆ ನಡೆಯುವ ಚರ್ಚೆಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ್ದಾರೆ.

ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಂಸದ ಪ್ರತಾಪ್ ಸಿಂಹ ಕೈತಪ್ಪಲಿದ್ದು ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ನೀಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ನಾಲ್ಕು ಗೋಡೆ ಮಧ್ಯೆ ಅನೇಕ ವಿಚಾರ ಚರ್ಚೆ ಆಗಿದೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ಎಂದಿದ್ದು, ಪರೋಕ್ಷವಾಗಿ ಪ್ರತಾಪ್ ಸಿಂಹ್ ಗೆ ಟಿಕೆಟ್ ಮಿಸ್ ಆಗುವ ಸುಳಿವು ನೀಡಿದರಾ ಎಂಬ ಅನುಮಾನ ಮೂಡಿದೆ.

ಊಹಾಪೋಹಾಗಳಿಗೆ ಉತ್ತರ ಕೊಡಲ್ಲ: ನಾಲ್ಕು ಗೋಡೆಗಳ ಮಧ್ಯೆ ನಡೆದ ಚರ್ಚೆ ಬಹಿರಂಗಪಡಿಸಲ್ಲ. ಒಂದಂತೂ ಸ್ಪಷ್ಟ ರಾಜ್ಯದ 28 ಕ್ಷೇತ್ರಗಳಲ್ಲಿ ಉತ್ತಮ, ಗೆಲ್ಲುವ ಅಭ್ಯರ್ಥಿ ಹಾಕುತ್ತೇವೆ, ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನಿಂದಲೇ ಕೆಲಸ ಮಾಡುತ್ತೇವೆ ಎಂದರು.

ಆರ್ ಅಶೋಕ್-ಬಿ ವೈ ವಿಜಯೇಂದ್ರ
ಚೆನ್ನೈ-ಬೆಂಗಳೂರು-ಮೈಸೂರು ಬುಲೆಟ್ ರೈಲು ಯೋಜನೆ: ರಾಮನಗರದ ರೈತ ಕುಟುಂಬಗಳಿಗೆ ಜಮೀನು ಕಳೆದುಕೊಳ್ಳುವ ಆತಂಕ

ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ, ಅಪ್ಪಚ್ಚು ರಂಜನ್‌, ಮೈಸೂರು ಮಹರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರು ಚರ್ಚೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಸಿಗಲ್ವಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿಜಯೇಂದ್ರ, ಆತರ ಏನೂ ಇಲ್ಲ. ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ ಎಂದಷ್ಟೇ ಹೇಳಿದರು. ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಬಗ್ಗೆ ಡಾ ಮಂಜುನಾಥ್ ಜೊತೆ ಮಾತಾಡಿದ್ದೀರಾ ಎಂಬ ಪ್ರಶ್ನೆಗೆ ಏನು ಮಾತಾಡದೇ ಕೈಮುಗಿದು ಈ ವಿಚಾರ ನಿಮ್ಮಿಂದಲೇ ಕೇಳುತ್ತಿದ್ದೇನೆ ಎಂದರು.

ಇನ್ನು ಈ ಬಗ್ಗೆ ಮಾತನಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ಕಳೆದ ಬಾರಿ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದಂತೆ ಈ ಬಾರಿ ಕೂಡ ಕೆಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡಲು ಚರ್ಚೆ ನಡೆಯುತ್ತಿರುವುದಂತೂ ನಿಜ. ಕರ್ನಾಟಕದಿಂದ ನಾವು ಸರ್ವೆ ಮಾಡಿ ವರದಿಯನ್ನು ಕಳುಹಿಸಿದ್ದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ, ನಾಳೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು ನಾಳೆಯೇ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗುವ ನಿರೀಕ್ಷೆಯಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com