ಕಟೀಲ್ ಬದಲಿಗೆ IIM ವಿದ್ಯಾವಂತ ಕಮ್ ಕ್ಯಾಪ್ಟನ್ ಬ್ರಿಜೇಶ್ ಚೌಟಾಗೆ ಬಿಜೆಪಿ ಟಿಕೆಟ್ ನೀಡಿದ್ದೇಕೆ? ಚೌಟಾ ಹಿನ್ನೆಲೆ ಏನು?

ಮೂರು ಬಾರಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಬದಲಿಗೆ 42 ವರ್ಷದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ನಳಿನ್ ಕುಮಾರ್ ಕಟೀಲ್-ಬ್ರಿಜೇಶ್ ಚೌಟಾ
ನಳಿನ್ ಕುಮಾರ್ ಕಟೀಲ್-ಬ್ರಿಜೇಶ್ ಚೌಟಾTNIE

ಮಂಗಳೂರು: ಮೂರು ಬಾರಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಬದಲಿಗೆ 42 ವರ್ಷದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಈ ಬದಲಾವಣೆಯು ಅನೇಕರಿಗೆ ದೊಡ್ಡ ಆಶ್ಚರ್ಯವನ್ನುಂಟು ಮಾಡಲಿಲ್ಲ. ಏಕೆಂದರೆ ಕೆಲವು ತಿಂಗಳ ಹಿಂದೆ ಚೌಟ ಅವರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದಾಗ ಮುಂದೆ ಪಕ್ಷವು ಅವರನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದು ಸ್ಪಷ್ಟವಾಗಿತ್ತು.

ಕಟೀಲ್ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದಂತೆಯೇ ಬದಲಾವಣೆ ನಿರೀಕ್ಷಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ರಾಜ್ಯದಲ್ಲಿ ಹೆಚ್ಚು ಸಾಕ್ಷರತೆಯ ಜಿಲ್ಲೆಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡದಿಂದ ಸಂಸದರಾಗಿ ಹೆಚ್ಚು ಸಕ್ರಿಯರಾಗಿರುವ ಹಾಗೂ ಸುಶಿಕ್ಷಿತ ಮುಖವನ್ನು ನೋಡಬೇಕೆಂಬ ಹಂಬಲ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಬಹಳ ಹಿಂದಿನಿಂದಲೂ ಇತ್ತು. ಇಂಗ್ಲಿಷ್ ಅಥವಾ ಹಿಂದೂ ಭಾಷೆಯಲ್ಲಿ ಮಾತನಾಡಲು ಕಟೀಲ್ ಸಮರ್ಥರಾಗದ ಕಾರಣ ಹಲವು ಬಾರಿ ಟೀಕೆಗೆ ಒಳಗಾಗಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನಿರಾಕರಿಸಿದ ನಂತರ ಹಿಂದುತ್ವದ ನಾಯಕ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದರು. ಆ ನಂತರ ಕಟೀಲ್ ಅವರನ್ನು ಬದಲಾಯಿಸಲು ಹಿಂದುತ್ವ ಕಾರ್ಯಕರ್ತರು ಅಭಿಯಾನವನ್ನು ಪ್ರಾರಂಭಿಸಿದ್ದು ಹೋರಾಟ ತೀವ್ರಗೊಂಡಿತು. ಇತ್ತೀಚೆಗಷ್ಟೇ ಪುತ್ತಿಲ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಕಟೀಲ್ ಅವರನ್ನು ಬದಲಿಸುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿ ಕಂಡುಬಂದಿದೆ.

ನಳಿನ್ ಕುಮಾರ್ ಕಟೀಲ್-ಬ್ರಿಜೇಶ್ ಚೌಟಾ
ಮೈಸೂರು ಲೋಕಸಭೆ ಕ್ಷೇತ್ರ: ಪ್ರತಾಪ್ ಸಿಂಹ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನ, ಟಿಕೆಟ್ ಕೈತಪ್ಪಿದ ಬೆನ್ನಲೇ ಸಿಂಹ ಹೇಳಿದ್ದೇನು?

ಮಿಲಾಗ್ರೆಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣದ ನಂತರ, ಚೌಟಾ ಅವರು ಸೇಂಟ್ ಅಲೋಶಿಯಸ್ ಕಾಲೇಜ್‌ನಿಂದ ತಮ್ಮ B.Sc ಮತ್ತು ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಕಾರ್ಯನಿರ್ವಾಹಕ ವ್ಯವಹಾರ ನಿರ್ವಹಣೆ ಕಾರ್ಯಕ್ರಮವನ್ನು ಮಾಡಿದರು. 2003ರಲ್ಲಿ, ಅವರು 8 ಗೂರ್ಖಾ ರೈಫಲ್ಸ್‌ನ 7ನೇ ಬೆಟಾಲಿಯನ್‌ಗೆ ನಿಯೋಜಿಸಲ್ಪಟ್ಟರು. ಅಸ್ಸಾಂ ಮತ್ತು ಮಣಿಪುರದಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿದರು. ಎಲೈಟ್ ಘಾಟಕ್ ತಂಡದ ಭಾಗವಾಗಿದ್ದರು. 2010ರವರೆಗೆ ಬೆಟಾಲಿಯನ್‌ಗೆ ಸಹಾಯಕರಾಗಿ ಸೇವೆ ಸಲ್ಲಿಸಿದರು. ನಂತರ 2013ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಇನ್ನು ತಮಗೆ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಚೌಟಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ದಕ್ಷಿಣ ಕನ್ನಡವನ್ನು ನಂಬರ್ ಒನ್ ಮಾಡಲು ಕೆಲಸ ಮಾಡುವುದಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಳಿನ್ ಕುಮಾರ್ ಕಟೀಲ್-ಬ್ರಿಜೇಶ್ ಚೌಟಾ
ಲೋಕಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ; ಪ್ರತಾಪ್ ಸಿಂಹಗೆ ಕೊಕ್, ಯದುವೀರ್ ಗೆ ಟಿಕೆಟ್

ಏತನ್ಮಧ್ಯೆ, ಚೌಟಾ ಅವರಿಗೆ ಲೋಕಸಭೆ ಟಿಕೆಟ್ ನೀಡಿರುವ ಪಕ್ಷದ ನಿರ್ಧಾರವನ್ನು ಕಟೀಲ್ ಸ್ವಾಗತಿಸಿದ್ದಾರೆ. ಹೊಸ ಮುಖಗಳಿಗೆ ಅವಕಾಶ ನೀಡುವ ಮತ್ತು ಆ ಮೂಲಕ ಪಕ್ಷದ ಅಡಿಪಾಯ ಮತ್ತು ಚಟುವಟಿಕೆಗಳನ್ನು ವಿಸ್ತರಿಸುವ ಪಕ್ಷದ ಚಿಂತನೆಗೆ ಅನುಗುಣವಾಗಿ ಬದಲಾವಣೆಯಾಗಿದೆ ಎಂದು ಹೇಳಿದರು. 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿ ಎಂದು ಹಾರೈಸಿದರು. ಪಕ್ಷ ಸಂಘಟನೆಗಾಗಿ ದುಡಿಯುವ ಸುಳಿವವನ್ನು ಕಟೀಲ್ ನೀಡಿದರು.

ಆರು ತಿಂಗಳ ಹಿಂದೆಯೇ ಪಕ್ಷದ ಹೈಕಮಾಂಡ್ ತಮ್ಮ ಅಭಿಪ್ರಾಯ ಕೇಳಿದ್ದು, ಹೊಸ ಮುಖಕ್ಕೆ ದಾರಿ ಮಾಡಿಕೊಡಲು ಸಿದ್ಧ ಎಂದು ಹೇಳಿದ್ದೆ ಎಂದರು. 15 ವರ್ಷಗಳಿಂದ ನನಗೆ ಸಿಕ್ಕ ಅವಕಾಶ ದೊಡ್ಡದು. ಭವಿಷ್ಯದಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಮತ್ತು ಪಕ್ಷ ನನಗೆ ಏನು ಗೊತ್ತುಪಡಿಸುತ್ತದೋ ಅದನ್ನು ಮಾಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com