ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಅಳೆದೂ ತೂಗಿ ಕಡೆಗೂ ಕೋಟಾ ಶ್ರೀನಿವಾಸ್ ಪೂಜಾರಿಗೆ ಬಿಜೆಪಿ ಟಿಕೆಟ್!

ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಕ್ಕಿದೆ.
ಕೋಟಾ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ TNIE

ಬೆಂಗಳೂರು: ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಕ್ಕಿದೆ. ಹಲವು ತಿರುವುಗಳ ನಂಟರ ಶ್ರೀನಿವಾಸ ಪೂಜಾರಿ ಅವರು ಗೆಲ್ಲುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗಿದೆ. 2018-19 ವರೆಗೆ ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕರಾಗಿ ಹಾಗೂ 2019-23 ವರೆಗೆ ವಿಧಾನ ಪರಿಷತ್ ನ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಬಿಜೆಪಿಯ ನಿಷ್ಠಾವಂತ, ಬಿಲ್ಲವ ಸಮುದಾಯದ ಶ್ರೀನಿವಾಸ್ ಪೂಜಾರಿ ತಮ್ಮ ರಾಜಕೀಯ ಜೀವನದಲ್ಲಿ ವಿವಾದ ರಹಿತವಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿರುವುದರಿಂದ ಬಿಜೆಪಿಗೆ ಈ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಒತ್ತಡ ಇತ್ತು.

2023 ರ ವಿಧಾನಸಭಾ ಚುನಾವಣೆಯಿಂದಲೂ ಬಿಜೆಪಿ ಬಿಲ್ಲವರನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. 2022 ರಲ್ಲಿ ಗಣರಾಜ್ಯೋತ್ಸವ ಪರೇಡ್ ಗೆ ನಾರಾಯಣ ಗುರು ಅವರ ಸ್ತಬ್ಧ ಚಿತ್ರವನ್ನು ಕೇಂದ್ರ ತಿರಸ್ಕರಿಸಿತ್ತು ಎಂಬ ಕಾರಣ ನೀದಿ ಬಿಜೆಪಿ ಸರ್ಕಾರದ ವಿರುದ್ಧ ಪ್ರಚಾರ ನಡೆಸಿತ್ತು.

ಕೋಟಾ ಶ್ರೀನಿವಾಸ ಪೂಜಾರಿ
ಬಿಜೆಪಿ ಕುರಿತು ಗೂಂಡಾಗಿರಿ ಹೇಳಿಕೆ: ಸಿಎಂ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು- ಕೋಟಾ ಶ್ರೀನಿವಾಸ ಪೂಜಾರಿ

ಎರಡು ದಶಕಗಳ ಹಿಂದೆ ರಾಜ್ಯದ ಕರಾವಳಿ ಪ್ರದೇಶದ ರಾಜಕೀಯ ವಲಯದಲ್ಲಿ ಹಿಂದುತ್ವದ ಅಂಶವು ಪ್ರಮುಖ ಅಂಶವಾಗಿ ಹೊರಹೊಮ್ಮುವವರೆಗೆ, ಬಿಲ್ಲವರು ತಮ್ಮ ಸಮುದಾಯದ ಜನರಿಗೆ ಐತಿಹಾಸಿಕ ಕಾರಣಗಳಿಗಾಗಿ ಮಾಜಿ ಕಾಂಗ್ರೆಸ್ ಸಿಎಂ ದೇವರಾಜ ಅರಸ್ ಅವರು ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯ ಪರಿಣಾಮ ಕಾಂಗ್ರೆಸ್‌ ನತ್ತ ಹೆಚ್ಚು ಒಲವು ಹೊಂದಿದ್ದರು. ಈ ಕಾಯ್ದೆ ಸಾವಿರಾರು ಕೃಷಿ ಕಾರ್ಮಿಕರನ್ನು, ಮುಖ್ಯವಾಗಿ ಭೂರಹಿತ ಬಿಲ್ಲವರನ್ನು ಬಂಟ್ ಮತ್ತು ಬ್ರಾಹ್ಮಣರಂತಹ ಮೇಲ್ವರ್ಗ ಸಮುದಾಯದ ಭೂಮಾಲೀಕರ ಹಿಡಿತದಿಂದ ಮುಕ್ತಗೊಳಿಸಿತು.

ಆದಾಗ್ಯೂ, ಸ್ವಲ್ಪ ಸಮಯದ ನಂತರ, ಬಿಜೆಪಿ ಹಿಂದುತ್ವದ ಅಂಶವನ್ನು ಹಿಡಿದಿಟ್ಟುಕೊಂಡು ಈ ಪ್ರದೇಶವನ್ನು ಹಿಂದುತ್ವದ ಭಾವನೆಗಳ ಪ್ರಯೋಗಾಲಯವಾಗಿ ಪರಿವರ್ತಿಸಿತು. ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯತ್ತ ಮುಖಮಾಡಿದರು ಮತ್ತು ಬಿಜೆಪಿ ಕೂಡ ಅವರಿಗೆ ಪಕ್ಷದ ಸ್ಥಾನಗಳನ್ನು ನೀಡುವ ಮೂಲಕ ಬಿಲ್ಲವ ಯುವಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿತು. ಇನ್ನು ಬಿಜೆಪಿ ಕೂಡ ಇತರೆ ಸಮುದಾಯಗಳ ಹೊರತಾಗಿ ಬಿಲ್ಲವ ಸಮುದಾಯದಿಂದಲೂ ಉತ್ತಮ ನಾಯಕರನ್ನು ಹೊಂದಿದೆ. ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಲ್ಲವ ಮತಗಳ ಪ್ರಮುಖ ಭಾಗವು ತನ್ನಿಂದ ಹೊರ ಹೋಗದಂತೆ ನೋಡಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಿದೆ. ಇದರೊಂದಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿದರೆ, ರಾಜಕೀಯವಾಗಿ ಪ್ರಬಲವಾಗಿರುವ ಬಂಟ್ ಸಮುದಾಯದ ಹೆಗ್ಡೆ ಮತ್ತು ಬಿಲ್ಲವ ಸಮುದಾಯದ ಕೋಟಾ ಶ್ರೀನಿವಾಸ ಪೂಜಾರಿ ನಡುವಿನ ಹೋರಾಟ ಕುತೂಹಲ ಮೂಡಿಸಿದೆ.

ಕೋಟಾ ಶ್ರೀನಿವಾಸ ಪೂಜಾರಿ
ನಾನು ಫೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುತ್ತೇನೆ, ಗೆಲ್ಲುತ್ತೇನೆ: ಶೋಭಾ ಕರಂದ್ಲಾಜೆ

ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವುದು ಆಡಳಿತ ವಿರೋಧಿ ಅಲೆಯನ್ನು ತಪ್ಪಿಸುವ ಎಚ್ಚರಿಕೆಯ ನಡೆ ಎಂದು ವಿಶ್ಲೇಷಿಸಲಾಗಿದೆ. ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಒಂದು ಭಾಗ 'ಗೋ-ಬ್ಯಾಕ್- ಶೋಭಾ' ಅಭಿಯಾನವನ್ನು ಪ್ರಾರಂಭಿಸಿತ್ತು. ಅವರು ಮತದಾರರು, ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರುವುದಿಲ್ಲ ಮತ್ತು ಅಭಿವೃದ್ಧಿ ಯೋಜನೆಗಳನ್ನು ತಂದಿಲ್ಲ ಎಂದು ಆರೋಪಿಸಿದ್ದರು. ಬೆಂಗಳೂರು ಉತ್ತರದಲ್ಲಿ ಅವರಿಗೆ ಅವಕಾಶ ನೀಡಲಾಗಿದ್ದರೂ, ಶೋಭಾ ಅವರು ಈ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com