ಬೇಡ ಎಂದರೂ ಬೆಳಗಾವಿ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್‌ ಫಿಕ್ಸ್? ಮಾತುಕತೆ ವೇಳೆ ಶೆಟ್ಟರ್​ಗೆ BSY ಕೊಟ್ಟ ಅಭಯವೇನು?

ಮುಂಬರುವ ಲೋಕಸಭೆ ಚುನಾವಣಗೆ ಧಾರವಾಡ ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಹೈಕಮಾಂಡ್‌ ಮತ್ತು ರಾಜ್ಯ ನಾಯಕರು ಬೆಳಗಾವಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.
ಬೇಡ ಎಂದರೂ ಬೆಳಗಾವಿ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್‌ ಫಿಕ್ಸ್? ಮಾತುಕತೆ ವೇಳೆ ಶೆಟ್ಟರ್​ಗೆ BSY ಕೊಟ್ಟ ಅಭಯವೇನು?

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣಗೆ ಧಾರವಾಡ ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಹೈಕಮಾಂಡ್‌ ಮತ್ತು ರಾಜ್ಯ ನಾಯಕರು ಬೆಳಗಾವಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ಕಳೆದ ರಾತ್ರಿ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಸುದೀರ್ಘ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ ಜಗದೀಶ್ ಶೆಟ್ಟರ್ ಅವರು ಕೊನೆಗೂ ಬಿಜೆಪಿ ಹಿರಿಯ ನಾಯಕ ಅಮಿತ್‌ ಶಾ ಮತ್ತು ಬಿ.ಎಸ್‌. ಯಡಿಯೂರಪ್ಪ ಅವರ ಮಾತಿಗೆ ಕಟ್ಟುಬಿದ್ದು ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೇಡ ಎಂದರೂ ಬೆಳಗಾವಿ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್‌ ಫಿಕ್ಸ್? ಮಾತುಕತೆ ವೇಳೆ ಶೆಟ್ಟರ್​ಗೆ BSY ಕೊಟ್ಟ ಅಭಯವೇನು?
ಲೋಕಸಭೆ ಚುನಾವಣೆ: ಜಗದೀಶ್ ಶೆಟ್ಟರ್ ಪ್ರಬಲ ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿಕೊಂಡ ಪ್ರಹ್ಲಾದ್ ಜೋಶಿ

ಬಿಜೆಪಿ ಎರಡನೇ ಪಟ್ಟಿಯಂತೆ ಹಾವೇರಿ ಮತ್ತು ಧಾರವಾಡ ಎರಡೂ ಕ್ಷೇತ್ರಗಳು ಮಿಸ್‌ ಆದ ಹಿನ್ನೆಲೆಯಲ್ಲಿ ಶೆಟ್ಟರ್‌ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದರು. ಅಲ್ಲದೆ ತಮ್ಮ ಆಪ್ತರ ಜತೆ ಮಾತುಕತೆ ನಡೆಸಿ ಮುಂದಿನ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದರು. ಆದರೆ ಬಿಎಸ್ ವೈ ಜೊತೆಗಿನ ಮಾತುಕತೆ ನಂತರ ಜಗದೀಶ್ ಶೆಟ್ಟರ್ ಸಮಾಧಾನಗೊಂಡಿದ್ದಾರೆ.

ಮಂಗಳಾ ಅಂಗಡಿ ಅವರು ಬೆಳಗಾವಿಯ ಹಾಲಿ ಸಂಸದರಾಗಿದ್ದು ಅವರನ್ನು ಬದಲಿಸುವುದಿದ್ದರೆ ಅವರ ಇಬ್ಬರ ಮಕ್ಕಳಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿ, ಆಗ ಅಂಗಡಿ ಮತ್ತು ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿದಂತೆ ಆಗುತ್ತದೆ ಎಂದು ಹೇಳಿದ್ದರು. ಆದರೆ ಬೆಳಗಾವಿಯಿಂದಲೇ ಸ್ಪರ್ಧೆ ಮಾಡುವಂತೆ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಅವರೇ ಸ್ಪರ್ಧೆ ಮಾಡೋದು ಖಚಿತ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com