ನಾಲ್ಕೈದು ದಿನದಲ್ಲಿ ತಂದೆಗೆ ಶಸ್ತ್ರಚಿಕಿತ್ಸೆ; ನನ್ನ ಆಯಸ್ಸನ್ನು ಕುಮಾರಸ್ವಾಮಿಗೆ ಧಾರೆ ಎರೆಯುತ್ತೇನೆ: ನಿಖಿಲ್ ಭಾವುಕ

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದನ್ನು ನೆನಪಿಸಿಕೊಂಡು ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ಭಾವುಕರಾದರು.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದನ್ನು ನೆನಪಿಸಿಕೊಂಡು ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ಭಾವುಕರಾದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆದ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ನಾಲ್ಕೈದು ದಿನಗಳಲ್ಲಿ ಕುಮಾರಣ್ಣ ಅವರು ಮತ್ತೆ ಮೂರನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಅವರು ಕ್ಷೇಮವಾಗಿ ಆಸ್ಪತ್ರೆಯಿಂದ ವಾಪಸ್ ಬರುತ್ತಾರೆ.

ಅದಕ್ಕಾಗಿ ನನ್ನ ಇಷ್ಟದೈವ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯನ್ನು ಬೇಡಿಕೊಂಡಿದ್ದೇನೆ. ನನ್ನ ಆಯುಸ್ಸು ಧಾರೆ ಎರೆದು ಆ ಮಂಜುನಾಥ ಸ್ವಾಮಿ ತಂದೆಯವರ ಆಯುಸ್ಸು ಹೆಚ್ಚಿಸಲಿ. ನಾನು ಮಂಜುನಾಥಸ್ವಾಮಿಯ ಭಕ್ತ, ನಮ್ಮ ತಂದೆಗೆ ಜನಸೇವೆ ಮಾಡಲು ಇನ್ನಷ್ಟು ಶಕ್ತಿ, ಅವಕಾಶ ಕೊಡು ಎಂದು ಆ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ಅವರು ಭಾರವಾದ ದನಿಯಲ್ಲಿ ಹೇಳಿದರು.

ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಮತ್ತೆ ನಿಖಿಲ್ ಸ್ಪರ್ಧೆಗೆ ಒಪ್ಪಿಸುತ್ತೇನೆ, ಮಾರ್ಚ್‌ 25ಕ್ಕೆ ಘೋಷಣೆ: ಎಚ್ ಡಿ ಕುಮಾರಸ್ವಾಮಿ

ಕುಮಾರಣ್ಣನವರು ಚಿಕಿತ್ಸೆ ಪಡೆಯುವಾಗ ಅವರ ಜವಾಬ್ದಾರಿಗಳನ್ನು ನನ್ನ ಹೆಗಲ ಮೇಲೆ ಹಾಕಿಕೊಂಡು ರಾಜ್ಯ ಸುತ್ತಬೇಕು. ಪಕ್ಷ ಉಳಿಸುವ ಜವಾಬ್ದಾರಿ ನನ್ನದೆಂದು ಅಪ್ಪನಿಗೆ ಮಾತು ಕೊಟ್ಟಿದ್ದೇನೆ. ಹೀಗಾಗಿ ಈ ಚುನಾವಣೆಗೆ ನಿಲ್ಲಲು ಮಾತು ಕೊಟ್ಟು ಮೋಸ ಮಾಡಲು ನಾನು ತಯಾರಿಲ್ಲ ಎಂದರು. ನನ್ನ ಹಣೆಯಲ್ಲಿ ಬರೆದ ದಿನ ಎಂಎಲ್‌ಎನೋ, ಎಂಪಿನೋ ಆಗುತ್ತೇನೆ. ಎಲ್ಲದಕ್ಕೂ ಯೋಗ, ಯೋಗ್ಯತೆ ಇರಬೇಕು. ಅಧಿಕಾರ, ಸ್ಥಾನ ಬರುವವರೆಗೂ ಕಾಯುತ್ತೇನೆ ಎಂದು ಭಾವುಕರಾದರು.

ಶಸ್ತ್ರಚಿಕಿತ್ಸೆಯ ನಂತರ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಉದ್ದಗಲಕ್ಕೂ ಪ್ರವಾಸ ಮಾಡುತ್ತಾರೆ. ನಾನು ಕೂಡ ಹಳ್ಳಿ ಹಳ್ಳಿಗೂ ಹೋಗುತ್ತೇನೆ. ಜನರ ಕಾಲು ಕಟ್ಟುತ್ತೇನೆ. ನಾವು ಏನು ತಪ್ಪು ಮಾಡಿದ್ದೇವೆ ಎಂದು ಕೇಳುತ್ತೇನೆ ಎಂದು ಹೇಳಿದರು.

ಮಾರ್ಚ್‌ 21ರಂದು ಚೆನ್ನೈನಲ್ಲಿ ನನ್ನ ಶ್ವಾಸಕೋಶ ಶಸ್ತ್ರಚಿಕಿತ್ಸೆ ಇದೆ. ಇದು 3ನೇ ಶಸ್ತ್ರಚಿಕಿತ್ಸೆ. ಅಮೆರಿಕಾದಿಂದ ನಾಲ್ವರು ಖ್ಯಾತ ವೈದ್ಯರು ಬರುತ್ತಿದ್ದು ಜೀವಕ್ಕೆ ಯಾವುದೇ ಅಪಾಯವಾಗದಂತೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com