ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ: ಶೀಘ್ರವೇ ಡಿವಿಎಸ್ 'ಮನ್ ಕೀ ಬಾತ್'!

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಹಾಲಿ ಸಂಸದ ಡಿವಿ ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರವೇ ತಾವು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಡಿವಿ ಸದಾನಂದ ಗೌಡ
ಡಿವಿ ಸದಾನಂದ ಗೌಡOnline Desk

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಹಾಲಿ ಸಂಸದ ಡಿವಿ ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರವೇ ತಾವು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇಂದು 71 ನೇ ವರ್ಷಕ್ಕೆ ಕಾಲಿಟ್ಟಿರುವ ಮಾಜಿ ಕೇಂದ್ರ ಸಚಿವ ಡಿವಿಎಸ್, ಮತ್ತೊಮ್ಮೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡದೇ ಇದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಪಕ್ಷ ಕರ್ನಾಟಕದಲ್ಲಿ ಬದಲಾವಣೆ ಇರುವ ಪಕ್ಷವಾಗಿದೆ ಎಂದು ಹೇಳುವುದಕ್ಕೆ ಇನ್ನೇನು ಉಳಿದಿಲ್ಲ ಎಂದಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಿದ ನಂತರ "ನನ್ನನ್ನು ಬೇರೆಯವರು ಸಂಪರ್ಕಿಸಿದ್ದು ನಿಜ, ನಮ್ಮ ಪಕ್ಷದ ನಾಯಕರು ಕೂಡ ನನ್ನನ್ನು ಸಂಪರ್ಕಿಸಿ ಚರ್ಚಿಸಿದ್ದೂ ನಿಜ. ನಿನ್ನೆ ರಾತ್ರಿ ನಮ್ಮ ಪಕ್ಷದ ಪ್ರಮುಖ ಪದಾಧಿಕಾರಿಯೊಬ್ಬರು ನನ್ನ ಬಳಿಗೆ ಬಂದು ನನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ವಿವಿಧ ವಿಷಯಗಳು ನಡೆಯುತ್ತಿವೆ ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷರೂ ಆಗಿರುವ ಡಿವಿ ಸದಾನಂದ ಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿವಿ ಸದಾನಂದ ಗೌಡ
ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್‌ನ ಕೆಲವರು ಸೇರಿ ಹಲವರಿಂದ ಒತ್ತಡವಿದೆ: ಡಿವಿ ಸದಾನಂದ ಗೌಡ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಮ್ಮ ಜನ್ಮದಿನದಂದು ನಾನು ಕುಟುಂಬ ಮತ್ತು ಹಿತೈಷಿಗಳೊಂದಿಗೆ ಸಮಯ ಕಳೆಯಲು ಬಯಸುತ್ತೇನೆ. ಈ ಬಳಿಕ ನಿರ್ಧಾರ ತೆಗೆದುಕೊಂಡು ನಾನು ನಿಮ್ಮೆದುರು ಬರುತ್ತೇನೆ, ನಾನು ನನ್ನ ಮನದಾಳದ ಮಾತುಗಳನ್ನು ಹಂಚಿಕೊಳ್ಳಬೇಕಿದೆ. ನನ್ನ ನಿರ್ಧಾರದ ಬಗ್ಗೆ ನಾನು ನನ್ನ ಕುಟುಂಬದೊಂದಿಗೆ ಚರ್ಚಿಸಬೇಕು ಎಂದು ಅವರು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಅವರು 28 ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಕ್ಷೇತ್ರ ಮಾತ್ರ ತಮ್ಮನ್ನು ಬಿಟ್ಟು ಬೇರೆ ಅಭ್ಯರ್ಥಿಗಳಿಲ್ಲ ಎಂದು ಹೇಳಿದ್ದರು ಎಂದು ಸದಾನಂದ ಗೌಡ ಹೇಳಿದ್ದು, ದೆಹಲಿಯಲ್ಲಿ ಮತ್ತು ಇಲ್ಲಿ ಪಕ್ಷದಲ್ಲಿ ಸಂಭವಿಸಿದ ಕೆಲವು ಬೆಳವಣಿಗೆಗಳ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಹೇಳಿದರು.

ಡಿವಿ ಸದಾನಂದ ಗೌಡ
ಬಿಜೆಪಿಯ ಶೇ 75ರಷ್ಟು ಜನರಿಗೆ ಜೆಡಿಎಸ್ ಜೊತೆಗಿನ ಮೈತ್ರಿ ಇಷ್ಟವಿಲ್ಲ, ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಡಿವಿ ಸದಾನಂದ ಗೌಡ

ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೆ, ಆದರೆ ರಾಜ್ಯದ ಎಲ್ಲಾ ಹಿರಿಯ ನಾಯಕರು ಸ್ಪರ್ಧಿಸುವಂತೆ ನನ್ನನ್ನು ಮನವೊಲಿಸಿದ್ದರು, ಆದರೆ ಕೊನೆಯ ಕ್ಷಣದಲ್ಲಿ ಯಾರೂ ನನ್ನ ರಕ್ಷಣೆಗೆ ಬಾರದೆ ನನಗೆ ಸ್ವಲ್ಪ ಮುಜುಗರ ಉಂಟು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಜಕೀಯದಲ್ಲಿ ಏರಿಳಿತಗಳು ಮತ್ತು ಮುಜುಗರಗಳು ಸಾಮಾನ್ಯವಾಗಿದೆ ಎಂದು ಹೇಳಿರುವ ಮಾಜಿ ಕೇಂದ್ರ ಸಚಿವರು, ವಿಷಯ ತಿಳಿದಿದ್ದರೂ ಸಹ, ಸ್ವಾರ್ಥಕ್ಕಾಗಿ ಯಾರನ್ನಾದರೂ ಬಲಿಕೊಡುವುದು "ನೋಯಿಸುತ್ತದೆ" ಎಂದು ಹೇಳಿದರು. "ಹೇಳಲು ಏನೂ ಉಳಿದಿಲ್ಲ, (ಬಿಜೆಪಿ) ಕರ್ನಾಟಕದಲ್ಲಿ ಬೇರೆ ಪಕ್ಷಗಳಿಗಿಂತ ಭಿನ್ನವಾಗಿರುವ ಪಕ್ಷ ಎಂದು ಹೇಳಲು ಏನೂ ಉಳಿದಿಲ್ಲ. ಇದು ನನಗೆ ನೋವು ತಂದಿದೆ. ನಾನು ಅದರ ಬಗ್ಗೆ ಮಾತನಾಡುತ್ತೇನೆ" ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com