ಅಭ್ಯರ್ಥಿಗಳ ಆಯ್ಕೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಕಮಲ ಕಲಿಗಳ ಚೆಕ್ ಮೇಟ್: ಬಿಜೆಪಿ ಚದುರಂಗದಾಟ; ಸಮರ್ಥರಿಲ್ಲದೆ ಕಾಂಗ್ರೆಸ್ ಗೆ ಸಂಕಷ್ಟ!

ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಾಲಿ ಶಾಸಕರು ಮತ್ತು ಹೊಸ ಮುಖಗಳನ್ನು ಪ್ರಯೋಗಿಸುವ ಬಿಜೆಪಿಯ ಚದುರಂಗದಾಟದ ತಂತ್ರವು ಕಾಂಗ್ರೆಸ್‌ಗೆ ಅಸಾಧಾರಣವಾದ ಸವಾಲು ಎದುರಾಗಿದೆ.
ಸೌಮ್ಯಾ ರೆಡ್ಡಿ, ಪ್ರಿಯಾ ಕೃಷ್ಣ ಮತ್ತು ಮನ್ಸೂರ್ ಅಲಿ ಖಾನ್
ಸೌಮ್ಯಾ ರೆಡ್ಡಿ, ಪ್ರಿಯಾ ಕೃಷ್ಣ ಮತ್ತು ಮನ್ಸೂರ್ ಅಲಿ ಖಾನ್

ಬೆಂಗಳೂರು: ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಾಲಿ ಶಾಸಕರು ಮತ್ತು ಹೊಸ ಮುಖಗಳನ್ನು ಪ್ರಯೋಗಿಸುವ ಬಿಜೆಪಿಯ ಚದುರಂಗದಾಟದ ತಂತ್ರವು ಕಾಂಗ್ರೆಸ್‌ಗೆ ಅಸಾಧಾರಣವಾದ ಸವಾಲು ಎದುರಾಗಿದೆ.

ಪ್ರಧಾನಿ ಮೋದಿ ಅಂಶ ಸೇರಿದಂತೆ ನಾನಾ ಕಾರಣಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ. ಬೇರೆ ಆಯ್ಕೆಯಿಲ್ಲದೆ, ಪಕ್ಷದ ನಾಯಕತ್ವವು ಉನ್ನತ ನಾಯಕರು ಮತ್ತು ಸಚಿವರ ಸಂಬಂಧಿಕರಿಗೆ ಟಿಕೆಟ್ ನೀಡಬಹುದು ಮತ್ತು ಕೆಲವು ಸ್ಥಾನಗಳಲ್ಲಿ ಕಡಿಮೆ ಪ್ರೊಫೈಲ್ ಹೊಂದಿರುವ ಹೊಸ ಮುಖಗಳಿಗೆ ಮಣೆ ಹಾಕಬಹುದು, ಯಾವುದೇ ಬೇರೆ ದಾರಿಯಿಲ್ಲದ ಕಾರಣ ಈ ನಿರ್ಧಾರಕ್ಕೆ ಬರಲಾಗುತ್ತಿದ ಎಂದು ಮೂಲಗಳು ತಿಳಿಸಿವೆ.

ಏಳು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದ ಕಾಂಗ್ರೆಸ್ ಎರಡನೇ ಪಟ್ಟಿಯನ್ನು ಮುಂದೂಡುತ್ತಲೇ ಬಂದಿದೆ. ಮೈಸೂರು-ಕೊಡಗು ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್ ಸಿಂಹ ಬದಲಿಗೆ ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿರುವುದು ಕಾಂಗ್ರೆಸ್‌ಗೆ ಸಂಕಷ್ಟ ತಂದೊಡ್ಡಿದೆ.

ಸೌಮ್ಯಾ ರೆಡ್ಡಿ, ಪ್ರಿಯಾ ಕೃಷ್ಣ ಮತ್ತು ಮನ್ಸೂರ್ ಅಲಿ ಖಾನ್
ಲೋಕಸಭೆ ಚುನಾವಣೆ ಮುಗಿದ ಆರೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ; ನಳಿನ್ ಕುಮಾರ್ ಕಟೀಲ್

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅಂತಿಮ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ಹೊರತುಪಡಿಸಿದರೆ ಹಲವು ಸಂಭಾವ್ಯ ಆಕಾಂಕ್ಷಿಗಳು ಹಿಂದೆ ಸರಿದಿದ್ದಾರೆ. ಕುತೂಹಲಕಾರಿಯಾಗಿ, ಸಿದ್ದರಾಮಯ್ಯ ಅವರ ಪುತ್ರ ಮತ್ತು ಮಾಜಿ ಶಾಸಕ ಡಾ ಯತೀಂದ್ರ ಅವರ ಹೆಸರು ಆರಂಭದಲ್ಲಿ ಕೇಳಿ ಬಂದಿದ್ದವು, ಆದರೆ ಯದುವೀರ್ ಅವರ ಹೆಸರು ಬಂದ ತಕ್ಷಣ ಅವರು ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರಿನಿಂದ ಬೆಂಗಳೂರು ಉತ್ತರಕ್ಕೆ ಬದಲಾಯಿಸಿದ್ದು, ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸುವುದು ಕೂಡ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧವಾಗಿದೆ.

ಚಾಮರಾಜನಗರ, ಕೋಲಾರ, ಬೆಳಗಾವಿ, ಚಿಕ್ಕೋಡಿ, ಬಳ್ಳಾರಿ, ದಾವಣಗೆರೆ ಮತ್ತಿತರ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಪಕ್ಷಕ್ಕೆ ಕಠಿಣವಾಗಿದೆ, ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ನಾಗೇಂದ್ರ, ಎಸ್.ಎಸ್.ಮಲ್ಲಿಕಾರ್ಜುನ್ ಹೆಸರು ಪ್ರಸ್ತಾಪವಾದರೂ ಸ್ಪರ್ಧಿಸಲು ಸಿದ್ಧರಿಲ್ಲ.

ಸೌಮ್ಯಾ ರೆಡ್ಡಿ, ಪ್ರಿಯಾ ಕೃಷ್ಣ ಮತ್ತು ಮನ್ಸೂರ್ ಅಲಿ ಖಾನ್
ರಾಜ್ಯದಲ್ಲಿ ಗುಲ್ಬರ್ಗ ಸೇರಿ ಬಿಜೆಪಿಯಿಂದ 20 ಸ್ಥಾನಗಳನ್ನು ಕಸಿದುಕೊಳ್ಳಲಿದೆ ಕಾಂಗ್ರೆಸ್: ಡಿಕೆ.ಶಿವಕುಮಾರ್

ಬೆಂಗಳೂರು ದಕ್ಷಿಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಹಾಗೂ ಬೆಂಗಳೂರು ಸೆಂಟ್ರಲ್‌ಗೆ ಮಾಜಿ ಕೇಂದ್ರ ಸಚಿವ ಕೆ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಗೋವಿಂದರಾಜ ನಗರ ಶಾಸಕ ಪ್ರಿಯಾ ಕೃಷ್ಣ ಅವರನ್ನು ಬೆಂಗಳೂರು ಉತ್ತರದಿಂದ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನವೊಲಿಸುವ ಪ್ರಯತ್ನ ವ್ಯರ್ಥವಾಯಿತು.

ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿರುದ್ಧ ಬಿಲ್ಲವ ಸಮುದಾಯದ ಸದಸ್ಯ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಆರ್ ಪದ್ಮರಾಜು ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಪ್ರಯೋಗ ಮಾಡುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲದಿರುವುದರಿಂದ ಅವರ ಅಳಿಯ ರಾಧಾಕೃಷ್ಣ ದೊಡ್ಮನಿ ಅವರ ಹೆಸರು ಬಹುತೇಕ ಅಂತಿಮವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com