ಅಲ್ಪ ಸಂಖ್ಯಾತರ ವಿಶ್ವಾಸ ಗಳಿಸಲು ಯದುವೀರ್ ತಂತ್ರ: ಕ್ರಿಶ್ಚಿಯನ್ ನಾಯಕರ ಜೊತೆ ಸಭೆ!

ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ಭಾಗದ ಅಲ್ಪಸಂಖ್ಯಾತ ಮುಖಂಡರೊಂದಿಗೆ ಚರ್ಚೆ ಆರಂಭಿಸಿದ್ದಾರೆ.
ಯದುವೀರ್ ಒಡೆಯರ್
ಯದುವೀರ್ ಒಡೆಯರ್
Updated on

ಮೈಸೂರು: ಬಿಜೆಪಿ ಬೆಂಬಲದ ನೆಲೆಯನ್ನು ವಿಸ್ತರಿಸುವ ಉದ್ದೇಶದಿಂದ ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ಭಾಗದ ಅಲ್ಪಸಂಖ್ಯಾತ ಮುಖಂಡರೊಂದಿಗೆ ಚರ್ಚೆ ಆರಂಭಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್‌ಗೆ ನೀಡಿದ ಐತಿಹಾಸಿಕ ಬೆಂಬಲವನ್ನು ಗಮನಿಸಿದರೆ ಈ ಪ್ರಸ್ತಾಪವು ನಿರ್ಣಾಯಕವಾಗಿದೆ. ಸೋಮವಾರ ಕ್ರಿಶ್ಚಿಯನ್ ಮುಖಂಡರೊಂದಿಗೆ ಯದುವೀರ್ ಒಡೆಯರ್ ಸಭೆ ನಡೆಸಿದರು. ಈ ಸಭೆಯು ಅಲ್ಪಸಂಖ್ಯಾತ ಮತದಾರರನ್ನು ಆಕರ್ಷಿಸುವ ಉದ್ದೇಶಪೂರ್ವಕ ಪ್ರಯತ್ನವನ್ನು ಎತ್ತಿ ತೋರಿಸಿದೆ.

ಬಿಜೆಪಿ ಮುಖಂಡ, ಮಾಜಿ ಸಚಿವ ಎಸ್‌ಎ ರಾಮದಾಸ್‌ ಮತ್ತು ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಡಾ.ಅನಿಲ್‌ ಥಾಮಸ್‌ ಅವರ ಜೊತೆಯಲ್ಲಿ, ಒಡೆಯರ್‌ ಅವರು ಮೈಸೂರು ಡಯಾಸಿಸ್‌ನ ಧರ್ಮಪ್ರಚಾರಕ ಬರ್ನಾಡ್‌ ಮೊರಾಸ್‌ ಮತ್ತು ಇತರ ಕ್ರೈಸ್ತ ಧಾರ್ಮಿಕ ಮುಖಂಡರನ್ನು ಬನ್ನಿಮಂಟಪದ ಬಿಷಪ್‌ ಹೌಸ್‌ ಸನ್ಮಾರ್ಗಿಯಲ್ಲಿ ಭೇಟಿ ಮಾಡಿದರು.

ಸಮುದಾಯಗಳ ಸಹಬಾಳ್ವೆಯನ್ನು ಪೋಷಿಸುವ ರಾಜಮನೆತನದ ಪರಂಪರೆಯನ್ನು ಯದುವೀರ್ ಮುಂದುವರಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಹಿಂದಿನ ಆಡಳಿತಗಾರರ ಕೊಡುಗೆ ಅಪಾರವಾಗಿದೆ. ತಾರತಮ್ಯವಿಲ್ಲದೆ ಸಾಮಾಜಿಕ ಕಾಳಜಿಯ ಈ ಐತಿಹಾಸಿಕ ಬದ್ಧತೆಯು ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ, ವಿಶೇಷವಾಗಿ ಕ್ರಿಶ್ಚಿಯನ್ ಮತದಾರರೊಂದಿಗೆ ಸಂಪರ್ಕ ಸಾಧಿಸಲು ವಾಡಿಯರ್ ಅವರ ಪ್ರಯತ್ನಕ್ಕೆ ಹಿಡಿದ ಕನ್ನಡಿಯಾಗಿದೆ.

ಯದುವೀರ್ ಒಡೆಯರ್
ಕಾಂಗ್ರೆಸ್ ತೆಕ್ಕೆಗೆ ಸದಾನಂದ ಗೌಡ? ಮೈಸೂರಿನಿಂದ ಯದುವೀರ್ ವಿರುದ್ಧ ಡಿವಿಎಸ್ ಕಣಕ್ಕೆ?

ಆದರೂ, ಬಿಜೆಪಿಯಿಂದ ಸ್ಪರ್ಧಿಸುವ ಯದುವೀರ್ ಅವರ ನಿರ್ಧಾರವು ಅಲ್ಪಸಂಖ್ಯಾತರ ಮತಗಳನ್ನು, ವಿಶೇಷವಾಗಿ ಕಾಂಗ್ರೆಸ್-ನಿಷ್ಠಾವಂತ ಕ್ರಿಶ್ಚಿಯನ್ ಸಮುದಾಯದಿಂದ ಪಡೆಯುವಲ್ಲಿ ಸ್ವಲ್ಪ ಮಟ್ಟಿನ ಅಡೆತಡೆ ಉಂಟಾಗುವ ಸಾಧ್ಯತೆಯಿದೆ.

ಆದರೆ ಪ್ರಚಾರದ ಎರಡನೇ ದಿನದ ಸಮಯದಲ್ಲಿ ಕ್ರಿಶ್ಚಿಯನ್ ಧಾರ್ಮಿಕ ಮುಖಂಡರೊಂದಿಗೆ ಅವರ ಆರಂಭಿಕ ಪ್ರಯತ್ನ ಯದುವೀರ್ ಅವರ ಕಾರ್ಯತಂತ್ರದ ಪ್ರಭಾವವು ಪಕ್ಷದ ಬೆಂಬಲದ ನೆಲೆಯನ್ನು ವಿಸ್ತರಿಸಲು ಸಹಾಯವಾಗಲಿದೆ. ಸಮುದಾಯದೊಂದಿಗಿನ ಒಡೆಯರ್‌ಗಳ ಒಡನಾಟ, ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್‌ನಂತಹ ಸಂಸ್ಥೆಗಳಿಗೆ ಅವರು ನೀಡಿದ ಕೊಡುಗೆಗಳು ಮತ್ತು ಬಿಜೆಪಿ ಸರ್ಕಾರದ ಯೋಜನೆಗಳು ಅಲ್ಪಸಂಖ್ಯಾತ ಸಮುದಾಯಗಳ ಸಕಾರಾತ್ಮಕ ಸ್ವಾಗತ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com