12 ವರ್ಷಗಳ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಬಂಡಾಯ ರಾಜಕಾರಣ

ಯಡಿಯೂರಪ್ಪನವರ ಕುಟುಂಬದಲ್ಲಿ ಅಧಿಕಾರವಿದ್ದು, ಕುಟುಂಬ ರಾಜಕೀಯದ ವಿರುದ್ಧ ನನ್ನ ಹೋರಾಟ ಎಂದು ಕೆ ಎಸ್ ಈಶ್ವರಪ್ಪನವರು ಹೇಳುತ್ತಿದ್ದಾರೆ.
ಕೆ ಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ
Updated on

ಶಿವಮೊಗ್ಗ: 12 ವರ್ಷಗಳ ನಂತರ ಶಿವಮೊಗ್ಗ ಜಿಲ್ಲೆ ಮತ್ತೆ ಬಂಡಾಯ ರಾಜಕೀಯ ನೋಡುತ್ತಿದೆ. ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದನ್ನು ಖಂಡಿಸಿ, ರಾಜ್ಯ ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಕ್ಕಳ ಹಿಡಿತದಲ್ಲಿದೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲೆಯ ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಹೋರಾಟವೇನಿದ್ದರೂ ಕುಟುಂಬ ರಾಜಕಾರಣ ವಿರುದ್ಧ ಎಂದು ಈಶ್ವರಪ್ಪನವರು ಸಾರಿದ್ದಾರೆ.

ತಮ್ಮ ಪುತ್ರನಿಗೆ ಟಿಕೆಟ್ ಸಿಗುವುದಿಲ್ಲ ಎಂದು ನಿರ್ಧಾರವಾದ ಕೂಡಲೇ ತಾವು ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ ದಿನದಿಂದ ಈಶ್ವರಪ್ಪ ಅವರು ಯಾವುದೇ ಕಾರಣಕ್ಕೂ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುವುದಿಲ್ಲ ಎಂದು ಹಲವು ಬಾರಿ ಪುನರುಚ್ಚರಿಸಿದ್ದಾರೆ. ಕೆಲವೆಡೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕುಟುಂಬದಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವ ಕುಟುಂಬ ರಾಜಕಾರಣದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ. ಹಾವೇರಿ ಸಂಸತ್ ಕ್ಷೇತ್ರವನ್ನು ತಮ್ಮ ಪುತ್ರ ಕೆ.ಇ.ಕಾಂತೇಶ್ ಗೆ ನೀಡುವುದಾಗಿ ಆರಂಭದಲ್ಲಿ ಭರವಸೆ ನೀಡಿದರೂ ಕೊನೆ ಗಳಿಗೆಯಲ್ಲಿ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕೆ ಎಸ್ ಈಶ್ವರಪ್ಪ
ಈಶ್ವರಪ್ಪ ಬಂಡಾಯ: ಶಿವಮೊಗ್ಗದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ...

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರ ಕುಟುಂಬದ ಮೇಲೆ ಇಷ್ಟೊಂದು ಅಧಿಕಾರ ಕೇಂದ್ರೀಕೃತವಾಗಿರುವುದು ಹೇಗೆ? ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸಮಿತಿಯ ಸದಸ್ಯರಾಗಿದ್ದಾರೆ, ಹಿರಿಯ ಪುತ್ರ ಬಿವೈ ರಾಘವೇಂದ್ರ ಹಾಲಿ ಸಂಸದರಾಗಿದ್ದು, ಮತ್ತೆ ಮರು ಆಯ್ಕೆಯ ನಿರೀಕ್ಷೆಯಲ್ಲಿದ್ದಾರೆ. ಕಿರಿಯ ಪುತ್ರ ಬಿವೈ ವಿಜಯೇಂದ್ರ ಶಾಸಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಮತ್ತು ರಾಜ್ಯವನ್ನು ಸ್ವಚ್ಛಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

ನಿಮ್ಮ ಮಗನಿಗೆ ಟಿಕೆಟ್ ಸಿಕ್ಕಿದ್ದರೆ ಇಂದು ಬಂಡಾಯವೇಳುತ್ತಿದ್ದೀರಾ, ರಾಜಕಾರಣದ ಶುದ್ಧೀಕರಣ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡ, ಎಂಎಲ್‌ಸಿ ಆರ್‌ಕೆ ಸಿದ್ದರಾಮಣ್ಣ ಈಶ್ವರಪ್ಪ ಅವರನ್ನು ಪ್ರಶ್ನಿಸಿದ್ದಾರೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಈಶ್ವರಪ್ಪ ಅವರಿಂದ ಉತ್ತರ ಸಿಕ್ಕಿಲ್ಲ.

2013 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು, ಯಡಿಯೂರಪ್ಪ ಅವರು ಡಿಸೆಂಬರ್ 9, 2012 ರಂದು ಕರ್ನಾಟಕ ಜನತಾ ಪಕ್ಷ (KJP) ಎಂಬ ಹೊಸ ರಾಜಕೀಯ ಪಕ್ಷವನ್ನು ಕಟ್ಟಿದರು. ಕೆಜೆಪಿ ರಾಜ್ಯಾದ್ಯಂತ 203 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಿಕಾರಿಪುರ ಸೇರಿದಂತೆ ಆರು ಸ್ಥಾನಗಳನ್ನು ಗೆದ್ದಿತ್ತು. ಆದರೆ ಯಡಿಯೂರಪ್ಪ ಅವರು ಸಾರ್ವತ್ರಿಕ ಚುನಾವಣೆಗೆ ಮುನ್ನ ಜನವರಿ 9, 2014 ರಂದು ಕೆಜೆಪಿಯನ್ನು ವಿಸರ್ಜಿಸಿ ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. 2018 ರಲ್ಲಿ ಒಂದು ವಾರ ಮತ್ತು ಜುಲೈ 26, 2019 ರಿಂದ ಜುಲೈ 28, 2021 ರವರೆಗೆ ಎರಡು ಬಾರಿ ಬಿಜೆಪಿ ಸಂಸದರಾದರು. 2021ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂದಿನಿಂದ ಅವರು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಈಶ್ವರಪ್ಪ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿದ್ದು, ಇದು ಅವರ ಚುನಾವಣಾ ರಾಜಕೀಯ ಅಂತ್ಯವಾಗಿದೆ ಎಂದು ಹೇಳಲಾಗುತ್ತಿತ್ತು. ಅಂದು ಬಿಜೆಪಿ ಹೈಕಮಾಂಡ್ ಆದೇಶವನ್ನು ಈಶ್ವರಪ್ಪ ಪಾಲಿಸಿದ್ದರು. ನಂತರ ತಮ್ಮ ಪುತ್ರ ರಾಜಕೀಯ ವೃತ್ತಿಜೀವನವನ್ನು ಹುಡುಕುವ ಪ್ರಯತ್ನಗಳನ್ನು ಮಾಡಿದರು.

ಕೆ ಎಸ್ ಈಶ್ವರಪ್ಪ
ಏಪ್ರಿಲ್ 12ಕ್ಕೆ ನಾಮಪತ್ರ ಸಲ್ಲಿಕೆ: ಪಕ್ಷೇತರನಾಗಿ ಸ್ಪರ್ಧೆ ಎಂದು ಘೋಷಿಸಿರುವ ಕೆ ಎಸ್ ಈಶ್ವರಪ್ಪ

ಯಡಿಯೂರಪ್ಪನವರ ನಿರ್ದೇಶನದ ಮೇರೆಗೆ ಕಾಂತೇಶ್ ಗೆ ಹಾವೇರಿಗೆ ಹೋಗಿ ಕೆಲಸ ಆರಂಭಿಸಿದರು. ಆದರೆ ಅಲ್ಲಿ ಟಿಕೆಟ್ ನಿರಾಕರಿಸಿದ್ದು ಈಶ್ವರಪ್ಪನವರನ್ನು ಕೆರಳಿಸಿತ್ತು. ಕೇಸರಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ ಶಿವಮೊಗ್ಗ ಜಿಲ್ಲೆ 1980 ರಿಂದ ವಿಕಸನಗೊಂಡಿತು. ಜಿಲ್ಲೆಯ ನಾಯಕರಾದ ಯಡಿಯೂರಪ್ಪ ಮುಖ್ಯಮಂತ್ರಿ ಮತ್ತು ಈಶ್ವರಪ್ಪ ಡಿಸಿಎಂ ಕೂಡ ಆದರು. ವಾಸ್ತವವಾಗಿ, ರಾಜ್ಯಾದ್ಯಂತ ಪಕ್ಷವನ್ನು ಕಟ್ಟಲು ಇಬ್ಬರೂ ನಾಯಕರು ಒಟ್ಟಾಗಿ ಕೆಲಸ ಮಾಡಿದರು. ಕರ್ನಾಟಕದಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಈ ಇಬ್ಬರೂ ನಾಯಕರು ಕಷ್ಟಪಟ್ಟಿದ್ದರು.

ಜಿಲ್ಲೆಯ ಕೆಲವು ಹಿರಿಯ ಬಿಜೆಪಿ ನಾಯಕರು, ''ಅಂದು ಯಡಿಯೂರಪ್ಪ, ಈಗ ಈಶ್ವರಪ್ಪ ಮಾಡುತ್ತಿದ್ದಾರೆ. ಆದರೆ ಮತದಾರರು ಜಿಲ್ಲೆಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com